ಮಂಗಳೂರು : 3 ದಿನಗಳ ಅಲೋಶಿಯನ್ ಫೆಸ್ಟ್ ಆರಂಭ

ಮಂಗಳೂರು, ಡಿ. 18: ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಉತ್ಸವ 'ಅಲೋಶಿಯನ್ ಫೆಸ್ಟ್ - 2014-15' ಗುರುವಾರ ಬೆಳಗ್ಗೆ ಆರಂಭವಾಗಿಯಿತು.

ಬೆಳಗ್ಗೆ 9.30ಕ್ಕೆ ಕಾಲೇಜು ಆವರಣದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ವಸ್ತಿ ವೆಂಕಟೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳು ರಾಸಾಯನಿಕ ವಸ್ತುಗಳಿಂದ ವಿನ್ಯಾಸ ಮಾಡಿದ್ದ ದೀಪವನ್ನು ಬೆಳಗಿ ಸಮಾರಂಭವನ್ನು ಉದ್ಘಾಟಿಸಲಾಯಿತು.

college1

ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ರೆಕ್ಟರ್ ರೆ. ಫಾ| ಡೆನ್ಜಿಲ್ ಲೋಬೋ ಎಸ್.ಜೆ. ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ರೆ. ಫಾ. ಸ್ವೀಬರ್ಟ್ ಡಿಸಿಲ್ವಾ ಪ್ರಾಸ್ತಾವಿಕ ಮಾತನಾಡಿದರು.

ಏಳು ಬಗೆಯ ಪ್ರಶಸ್ತಿ ಫಲಕಗಳನ್ನು ಅನಾವರಣಗೊಳಿಸಲಾಯಿತು. ಕಾಲೇಜಿನ ರಜಿಸ್ಟ್ರಾರ್ ಎ.ಎಂ. ನರಹರಿ, ಕಾಲೇಜಿನ ವಿತ್ತ ನಿರ್ವಹಣಾಧಿಕಾರಿ ವಾಲ್ಟರ್ ಅಂದ್ರಾದೆ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

college2

ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಲಿಝೇನ್ ತಾನ್ಯಾ ಡಿ'ಸೋಜಾ ಸ್ವಾಗತಿಸಿದರು. ಸಂಘದ ಉಪನಾಯಕ ವಿನೀತ್ ಲಸ್ರಾಡೊ ವಂದಿಸಿದರು. ವಿಕಾರ್ಯದರ್ಶಿ ಸಾತ್ಶ್ಯಾ ಅನ್ನಾ ತರೇನ್ ನಿರೂಪಿಸಿದರು.

ವಿವಿಧ ಉತ್ಸವಗಳು : ಮೂರು ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ಕಲಾ ವಿಭಾಗದ 'ಆರ್ಟ್‍ಬೀಟ್', ವಾಣಿಜ್ಯ ವಿಭಾಗದ 'ಆಕ್ಮೆ', ವ್ಯವಹಾರ ನಿರ್ವಹಣಾ ವಿಭಾಗದ 'ಸ್ಪಿನ್ ಔಟ್', ವಿಜ್ಞಾನ ವಿಭಾಗದ 'ಇಂಪ್ರಿಂಟ್ಸ್' ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ 'ಕಾಂಪೋಸಿಟ್' ಎಂಬ ಪ್ರತ್ಯೇಕ ಉತ್ಸವವನ್ನು ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ. 'ಅಸ್ತಿತ್ವ' ಎಂಬ ಸಾಂಸ್ಕೃತಿಕ ಉತ್ಸವ, 'ಬ್ಯಾಟಲ್ ಆಫ್ ಬ್ಯಾಂಡ್ಸ್' ಎಂಬ ಸಂಗೀತ ಉತ್ಸವ ಮತ್ತು 'ಅಲೋಶ್ಯಾಡ್' ಆಟೋಟ ಉತ್ಸವಗಳು ನಡೆಯಲಿವೆ.

college3

ಈ ಉತ್ಸವದ ಸಮಾರೋಪ ಸಮಾರಂಭ ಡಿ. 20ರಂದು ಶನಿವಾರ ಮಧ್ಯಾಹ್ನ 4 ಗಂಟೆಗೆ ನಡೆಯಲಿದೆ. ಮುಖ್ಯ ಅತಿಥಿಯಾಗಿ ಕರ್ನಾಟಕ ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕ ಡಾ. ಮೀರಾ ಅರ್ಹಾನ ಭಾಗವಹಿಸುವರು ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದೆ.

college4
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+