ಪಬ್ ಜೀ ಆಟಕ್ಕಾಗಿ ಬಾಲಕನ ಹತ್ಯೆ; ಆರೋಪಿ ತಂದೆ ಬಂಧನ

ಮಂಗಳೂರು, ಏಪ್ರಿಲ್ 06; ಮಂಗಳೂರು ನಗರವನ್ನು ಬೆಚ್ಚಿ ಬೀಳಿಸಿದ್ದ ಪಬ್ ಜೀ ಆಟಕ್ಕಾಗಿ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಾಲಕನ ತಂದೆಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ರಕ್ಷಣೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಬಂಧಿತರನ್ನು ಉತ್ತರ ಪ್ರದೇಶ ಮೂಲದ ಸದ್ಯ ಕೆಸಿ ರೋಡ್ ನಿವಾಸಿ ಸಂತೋಷ್ (45) ಎಂದು ಗುರುತಿಸಲಾಗಿದೆ. ಆರೋಪಿ ದೀಪಕ್‌ನನ್ನು ಈಗಾಗಲೇ ಬಂಧಿಸಲಾಗಿದ್ದು, ರಿಮಾಂಡ್ ಹೋಂಗೆ ಕಳುಹಿಸಲಾಗಿದೆ.

ಆಕೀಫ್‌ನನ್ನು ಹತ್ಯೆ ಮಾಡಿದ್ದ ದೀಪಕ್ ತಂದೆ ಸಂತೋಷ್ ಬಳಿ ವಿಚಾರ ತಿಳಿಸಿದ್ದ. ಘಟನೆ ಕುರಿತು ಯಾರಲ್ಲೂ ತಿಳಿಸದಂತೆ ಹೇಳಿರುವುದು ಮತ್ತು ದೀಪಕ್‌ಗೆ ಮನೆಯಲ್ಲೇ ರಕ್ಷಣೆ ನೀಡಿದ ಆರೋಪದ ಮೇರೆಗೆ ಪೊಲೀಸರು ಸಂತೋಷ್‍ ಬಂಧಿಸಿದ್ದಾರೆ.

 Akif Murder Case Accused Father Arrested

ಅಲ್ಲದೆ ಕೊಲೆಯಾದ ಆಕೀಫ್ ಮೇಲೆ ‌ಬಟ್ಟೆಯನ್ನು ಹಾಕಿ ಮುಚ್ಚಲು ಯತ್ನಿಸಿದ್ದ ಎಂದು ಆರೋಪಿಸಲಾಗಿದೆ. ಬಾಲಕನ ತಂದೆ ಸಂತೋಷ್ ಕಳೆದ 30 ವರ್ಷಗಳಿಂದ ತಲಪಾಡಿಯಲ್ಲೇ ಇದ್ದು, ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.

ಕೊಲೆ ಆರೋಪಿ ದೀಪಕ್ (17) ಬಾಲಪರಾಧಿ ಆಗಿರುವ ಹಿನ್ನೆಲೆಯಲ್ಲಿ ಉಡುಪಿ ದೊಡ್ಡಣಗುಡ್ಡೆಯ ಬಾಲ ನ್ಯಾಯ ಮಂಡಳಿಗೆ ಸೋಮವಾರ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗೆ ರಿಮಾಂಡ್ ಹೋಂ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಹಿನ್ನಲೆ; ಕೊಲೆಯಾದ ಆಕೀಫ್ ಹಾಗೂ ಆರೋಪಿ ದೀಪಕ್ ಕೆಲವು ತಿಂಗಳುಗಳಿಂದ ಒಟ್ಟಿಗೆ ಪಬ್ ಜೀ ಆಡುತ್ತಿದ್ದರು. ಆದರೆ ಪ್ರತಿ ಬಾರಿ ಆಕೀಫ್ ಗೆಲ್ಲುತ್ತಿದ್ದ. ಹೀಗಾಗಿ ಆಟದಲ್ಲಿ ಮೋಸವಾಗುತ್ತಿದೆ ಎಂದು ಇಬ್ಬರು ಜಗಳವಾಡಿದ್ದರು.

ಏಪ್ರಿಲ್‌ 3ರ ರಾತ್ರಿ ಸಹ ಇಬ್ಬರು ಮೈದಾನದಲ್ಲಿ ಜೊತೆಯಾಗಿ ಆಟವಾಡಿದ್ದರು. ಈ ವೇಳೆ ಆಟದಲ್ಲಿ ಆಕೀಫ್ ಮೊದಲ ಬಾರಿ ಸೋತಿದ್ದ. ಈ ವೇಳೆ ಆಕೀಫ್ ಮತ್ತು ದೀಪಕ್ ನಡುವೆ ಗಲಾಟೆ ನಡೆದಿದೆ.

ನೀನು ಬೇರೆಯವರಿಂದ ಆಡಿಸಿ ಮೋಸ ಮಾಡುತ್ತಿದ್ದೆ ಎಂದು ದೀಪಕ್ ಗಲಾಟೆ ಮಾಡಿದ್ದಾನೆ. ಈ ಸಂದರ್ಭ ಇಬ್ಬರೂ ಕಲ್ಲಿನಲ್ಲಿ ಹೊಡೆದಾಡಿಕೊಂಡಿದ್ದಾರೆ‌. ಬಳಿಕ ದೀಪಕ್ ಆಕೀಫ್ ಮೇಲೆ ದೊಡ್ಡ ಕಲ್ಲು ಎತ್ತಿ ಹಾಕಿದ್ದಾನೆ.

ಆಕೀಫ್ ಸ್ಥಳದಲ್ಲೇ ಮೃತಪಟ್ಟಿದ್ದ. ಶವವನ್ನು ಮೈದಾನದ ಬದಿಯಲ್ಲಿ ಹಾಕಿ ದೀಪಕ್ ಪರಾರಿಯಾಗಿದ್ದ. ಭಾನುವಾರ ಮುಂಜಾನೆ ಶವ ಪತ್ತೆಯಾಗಿದ್ದು, ಸಂಶಯ ಬಂದು ದೀಪಕ್ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ‌.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+