ಕೊನೆಗೂ ಆಗಮಿಸಿದ ಮಂಗಳೂರು-ದುಬೈ ವಿಮಾನ: ವಿವರಣೆ ಪತ್ರ ಕೊಟ್ಟ ಏರ್ ಇಂಡಿಯಾ ಸಂಸ್ಥೆ
ಮಂಗಳೂರು, ಜುಲೈ 11: ತಾಂತ್ರಿಕ ತೊಂದರೆ ಹಿನ್ನೆಲೆಯಲ್ಲಿ ಮಂಗಳೂರಿನಿಂದ ದುಬೈಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ವಿಮಾನ ನಿನ್ನೆ ತಡರಾತ್ರಿಯಿಂದ ವಿಳಂಬವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಏರ್ ಇಂಡಿಯಾ ವಿಮಾನ ನಿನ್ನೆ ರಾತ್ರಿ 11.15ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ದುಬೈಗೆ ತೆರಳ ಬೇಕಿತ್ತು. ಆದರೆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ತಿರುವನಂತಪುರಕ್ಕೆ ರವಾನಿಸಲಾಗಿದೆ. ಹೀಗಾಗಿ ದುಬೈ ತೆರಳಬೇಕಾಗಿದ್ದ 130ಕ್ಕೂ ಹೆಚ್ಚು ಪ್ರಯಾಣಿಕರು ನಿನ್ನೆ ರಾತ್ರಿಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.

ಕಳೆದ ಸುಮಾರು ಹತ್ತು ಗಂಟೆಗಳಿಂದಲೂ ಪ್ರಯಾಣಿಕರು ವಿಮಾನಕ್ಕಾಗಿ ಕಾಯುತ್ತಿದ್ದು, ಕೊನೆಗೆ ಏರ್ ಇಂಡಿಯಾ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರೆ. ಏರ್ ಇಂಡಿಯಾ ವಿಮಾನ ತಾಂತ್ರಿಕ ತೊಂದರೆ ನಿವಾರಿಸಿ ಬೆಳಗ್ಗೆ 9 ಗಂಟೆಗೆ ಬರಬೇಕಿತ್ತು. ಹೀಗಾಗಿ ಪ್ರಯಾಣಿಕರು ನಿನ್ನೆ ರಾತ್ರಿಯಿಂದಲೂ ವಿಮಾನ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಿದ್ದರು.
ಆದರೆ ತಿರುವನಂತಪುರಂ ಏರ್ ಇಂಡಿಯಾ ಬೇಸ್‌ಗೆ ರಿಪೇರಿಗೆ ತೆರಳಿರುವ ವಿಮಾನ ಇಂದು ಬೆಳಗ್ಗೆಯೂ ವಾಪಸ್ ಆಗಿಲ್ಲ. 130ಕ್ಕೂ ಹೆಚ್ಚು ಪ್ರಯಾಣಿಕರು ನಿನ್ನೆ ರಾತ್ರಿಯಿಂದಲೂ ಕಾಯುತ್ತಿದ್ದರೂ, ಬದಲಿ ವಿಮಾನ ವ್ಯವಸ್ಥೆ ಮಾಡದೇ ವಿಳಂಬ ಮಾಡುತ್ತಿರುವ ಏರ್ ಇಂಡಿಯಾ ಅಧಿಕಾರಿಗಳನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಮಂಗಳೂರು ವಿಮಾನ ನಿಲ್ದಾಣದ ಲಾಂಚ್‌ನಲ್ಲಿ ಪ್ರಯಾಣಿಕರು ಗಲಾಟೆ ನಡೆಸಿದ್ದಾರೆ.
{document1}ವಿಳಂಬಗೊಂಡಿದ್ದ ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ಕೊನೆಗೂ ಪ್ರಯಾಣಿಕರನ್ನು ಕರೆದೊಯ್ಯಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ನಿನ್ನೆ ರಾತ್ರಿಯಿಂದ ವಿಮಾನಕ್ಕಾಗಿ ಕಾದಿದ್ದ 130 ಪ್ರಯಾಣಿಕರು ಏರ್ ಇಂಡಿಯಾ ವಿಮಾನ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಯಾಣಿಕರಲ್ಲಿ ಹಲವರು ದುಬೈನಲ್ಲಿ ಉದ್ಯೋಗಕ್ಕಾಗಿ ತೆರಳುತ್ತಿದ್ದು, ವಿಮಾನ ವಿಳಂಬದಿಂದ ಅವರಿಗೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ಉದ್ಯೋಗಿ ಪ್ರಯಾಣಿಕರು ವಿಮಾನ ವಿಳಂಬವಾದ ಬಗ್ಗೆ ವಿವರಣೆ ಪತ್ರ ಬರೆದುಕೊಡುವಂತೆ ಏರ್ ಇಂಡಿಯಾಗೆ ಬೇಡಿಕೆ ಇಟ್ಟಿದ್ದು, ಕೊನೆಗೂ ಏರ್ ಇಂಡಿಯಾ ಸಂಸ್ಥೆ ವಿವರಣೆ ಪತ್ರ ಬರೆದುಕೊಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications