#ಮೀಟೂ: ಶ್ರುತಿಯನ್ನು ಬೆಂಬಲಿಸಿದ ನಟಿ ರಾಗಿಣಿ ದ್ವಿವೇದಿ

ಮಂಗಳೂರು, ಅಕ್ಟೋಬರ್.21: 'ಮೀಟೂ' ಅಭಿಯಾನದಿಂದ ಸಮಸ್ಯೆ ಹೇಳಿಕೊಳ್ಳುವುದು ಒಳ್ಳೆಯ ವಿಷ್ಯ. ಆದರೆ ಮೀ ಟೂ ಹೆಸರಲ್ಲಿ ಕೆಲವರು ದುರ್ಲಾಭ ಪಡೆಯುತ್ತಿದ್ದಾರೆ. ಶ್ರುತಿ ಹರಿಹರನ್ ಒಳ್ಳೆ ಹುಡುಗಿ, ಅನಗತ್ಯವಾಗಿ ಹೇಳಿಕೊಳ್ಳಲ್ಲ ಎಂದು ಹೇಳುವ ಮೂಲಕ ಬಹುಭಾಷಾ ನಟಿ ರಾಗಿಣಿ ದ್ವಿವೇದಿ ಶೃತಿ ಹರಿಹರನ್ ಅವರನ್ನು ಬೆಂಬಲಿಸಿದ್ದಾರೆ.

ಹೊಸ ಮೂವಿ 'ದಿ ಟೆರರಿಸ್ಟ್' ಯಶಸ್ಸಿಗೆ ದೇವರಲ್ಲಿ ಕೋರಿಕೊಳ್ಳಲು ಮಂಗಳೂರಿನ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಗಿಣಿ, ನಿಜವಾಗಿ ಅಂಥ ಘಟನೆ ನಡೆದಿದ್ದರೆ ತಪ್ಪೆಸಗಿದವರಿಗೆ ಶಿಕ್ಷೆಯಾಗಬೇಕು. ಹಾಗಂತ, ಯಾರೂ ಕೂಡ 'ಮೀ ಟೂ' ಹೆಸರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದರು.

Actress Ragini Dwivedi has supported Shruti Hariharan

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ದೇವರ ಪೂಜೆ ವಿಚಾರದಲ್ಲಿ ಯಾವತ್ತೂ ತಾರತಮ್ಯ ಮಾಡಬಾರದು. ಪೂಜೆ, ಭಕ್ತಿ ವಿಚಾರದಲ್ಲಿ ಗಂಡು- ಹೆಣ್ಣೆಂಬ ಭೇದ ಇರಲ್ಲ. ಹಾಗೆಂದು ಮಹಿಳೆಯರ ಋತುಚಕ್ರ ಹೆಸರಲ್ಲಿ ಪ್ರವೇಶ ನಿಷೇಧಿಸುವುದು ತಪ್ಪು.

Actress Ragini Dwivedi has supported Shruti Hariharan

ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ ಎಂದ ಶ್ರುತಿ ಹರಿಹರನ್.!

ಸಂಸ್ಕೃತಿ, ಸಂಪ್ರದಾಯ ವಿಚಾರ ಇದ್ದರೆ ಚರ್ಚೆ ನಡೆಯುವುದು ಉತ್ತಮ. ಸಂಪ್ರದಾಯವನ್ನು ಯಾರೂ ಪ್ರಶ್ನೆ ಮಾಡಲು ಮುಂದಾಗಬಾರದು ಎಂದು ರಾಗಿಣಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+