ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ಕಳ್ಳತನ ಮಾಡಿದ, ಅದೇನು ಗೊತ್ತಾ..?!
Recommended Video

ಮಂಗಳೂರು, ಸೆಪ್ಟೆಂಬರ್. 27: ಅಂಗಡಿಯಲ್ಲಿ ಹಣ, ಮೊಬೈಲ್, ಚಿನ್ನದ ಒಡವೆಗಳು, ಬಟ್ಟೆ.. ಹೀಗೆ ಕಳ್ಳರು ಏನೇನೋ ಕದ್ದದ್ದು ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿ, ನಂತರ ಸಿಕ್ಕಿಬಿದ್ದ ಹಲವಾರು ನಿದರ್ಶನಗಳನ್ನು ನೋಡಿದ್ದೆವೆ. ಹೀಗೆಯೇ ಇಲ್ಲೊಬ್ಬ ಕಳ್ಳನು ಕಳ್ಳತನ ಮಾಡಿದ್ದಾನೆ. ಆದರೆ ಅವನು ಕದ್ದಿರುವುದು ಏನೆಂದು ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
ಹೌದು, ಆತ ಕದ್ದಿರುವುದು ಉಪ್ಪಿನ ಕಾಯಿ ಬಾಟಲಿಯನ್ನ. ಅಂದಹಾಗೆ ಕಳ್ಳನ ಕರಾಮತ್ತು ಬೆಳಕಿಗೆ ಬಂದಿರುವುದು ಮಂಗಳೂರಿನಲ್ಲಿ. ಕಳ್ಳತನದ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆಯ ವಿವರ
ಮಣ್ಣಗುಡ್ಡ ಎಂಬ ಬೇಕರಿಯೊಂದಕ್ಕೆ ಗ್ರಾಹಕನ ಸೋಗಿನಲ್ಲಿ ಬಂದ ಆತ ಸಂಭಾವಿತನಂತೆ ಕಾಣುತಿದ್ದ. ನಂತರ ಅಂಗಡಿಯಲ್ಲಿ ಮಾರಲು ಇಟ್ಟಿರುವ ತಿಂಡಿ ತಿನಿಸುಗಳ ರೇಟ್ ಕೇಳಿದ್ದಾನೆ. ಆ ವೇಳೆ ಬೇಕರಿ ಸಿಬ್ಬಂದಿಯ ಕಣ್ತಪ್ಪಿಸಿ ಸಿಗಡಿ ಮೀನಿನ ಉಪ್ಪಿನಕಾಯಿ ಚಿಕ್ಕ ಬಾಟಲಿ ಹಾಗೂ ಒಂದು ಪ್ಯಾಕೆಟ್ ಕದ್ದಿದ್ದಾನೆ.
ಉಪ್ಪಿನ ಕಾಯಿ ಕದ್ದ ವಿಚಾರವನ್ನು ದೊಡ್ಡದು ಮಾಡದ ಬೇಕರಿ ಮಾಲೀಕ ಪೊಲೀಸರಿಗೆ ದೂರು ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಉಪ್ಪಿನಕಾಯಿ ಕಳ್ಳತನದ ದೃಶ್ಯ ಆ ಕಳ್ಳನಿಗೂ ತಲುಪಿರಬಹುದು.

ಕದಿಯುವ ಬರದಲ್ಲಿ ಆತ ಉಪ್ಪಿನಕಾಯಿ ವೆಜ್ ಅಥವಾ ನಾನ್ ವೆಜ್ ಅನ್ನೋದನ್ನ ನೋಡಿದ್ದಾನೋ, ಇಲ್ಲವೋ ಗೊತ್ತಿಲ್ಲವಲ್ಲ ಎಂದು ಜನ ಈಗ ಮುಸು ಮುಸು ನಗುತ್ತಿದ್ದಾರಂತೆ.












Click it and Unblock the Notifications