ಪೊಳಲಿ ರಾಜರಾಜೇಶ್ವರಿ ದೇವಾಲಯದ ಧ್ವಜಸ್ತಂಭ ಪ್ರತಿಷ್ಠೆ ವೇಳೆ ಪವಾಡ!
ಮಂಗಳೂರು, ಮಾರ್ಚ್ 11: ಮಂಗಳೂರು ಹೊರವಲಯದ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಧ್ವಜಸ್ತಂಭ ಪ್ರತಿಷ್ಠೆ ವೇಳೆ ಪವಾಡ ನಡೆದಿರುವುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೌದು, ಈ ಘಟನೆಯ ಬಗ್ಗೆ ಓದಿದಾಗ ನಿಮಗೂ ಆಶ್ಚರ್ಯವಾಗದೆ ಇರದು. ದೇವಳದ ಧ್ವಜಸ್ತಂಭಕ್ಕೆ ಗರುಡನ ಮೂರ್ತಿಯನ್ನು ಮೇಲಕ್ಕೇರಿಸುತ್ತಿದ್ದಂತೆ ದೇವಾಲಯದ ಮೇಲೆ ಗರುಡ ಒಂದು ಹಾರಾಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಧ್ವಜಸ್ತಂಭಕ್ಕೆ ಗರುಡನ ಮೂರ್ತಿಯನ್ನು ಮೇಲಕ್ಕೇರಿಸುತ್ತಿದ್ದಂತೆ ಏಕಾಏಕಿ ಪ್ರತ್ಯಕ್ಷವಾದ ಗರುಡವೊಂದು ದೇವಸ್ಥಾನದ ಮೇಲ್ಭಾಗದಿಂದ ಪ್ರದಕ್ಷಿಣೆ ಹಾಕಿದೆ. ಆಗ ಅಲ್ಲಿ ಸೇರಿದ್ದ ಸಾವಿರಾರು ಭಕ್ತರು ಇದನ್ನು ಅಚ್ಚರಿಯಿಂದ ವೀಕ್ಷಿಸಿದ್ದು, ದೇವರೇ ಗರುಡನ ರೂಪದಲ್ಲಿ ಪ್ರತ್ಯಕ್ಷವಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಧ್ವಜಸ್ತಂಭ ಅಂದರೆ ಗರುಡ ಸ್ತಂಭವೆಂದೇ ಕರೆಯಲಾಗುತ್ತದೆ. ಹೀಗಾಗಿ ಗರುಡ ಒಂದು ಬಾರಿ ಪ್ರದಕ್ಷಿಣೆ ಹಾಕಿ, ಬಳಿಕ ಮಾಯವಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಮಂಗಳೂರು ಹೊರವಲಯದ ಪೊಳಲಿ ದೇವಸ್ಥಾನ 800 ವರ್ಷಗಳ ಇತಿಹಾಸ ಹೊಂದಿದ್ದು ಭಾರೀ ಕಾರಣಿಕದ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ.

ದೇವಳದ ಬ್ರಹ್ಮಕಲಶದ ಸಂಭ್ರಮದ ಹಿನ್ನೆಯಲ್ಲಿ ಇತ್ತೀಚೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಭೇಟಿ ನೀಡಿದ್ದರು.












Click it and Unblock the Notifications