ಕರಾವಳಿಯ ಪುಟಾಣಿ ಲಿಪಿಕಾ ಶೆಟ್ಟಿ 'ಲಿಟಲ್ ಮಿಸ್ ಏಷ್ಯಾ'
ಮಂಗಳೂರು, ಮೇ 25 : ಕುಂದಾಪುರ ತಾಲೂಕಿನ ಗೋಪಾಡಿಯ ಮೂಲದ ಪುಟಾಣಿ ಲಿಪಿಕಾ ಶೆಟ್ಟಿ 'ಫೆಸ್ಟಿವೆಲ್ ಮಾಡೆಲ್ ಆಂಡ್ ಟ್ಯಾಲೆಂಟ್' ಎಂಬ ಜಾಗತಿಕ ಸ್ಪರ್ಧೆಯಲ್ಲಿ 'ಲಿಟಲ್ ಮಿಸ್ ಏಷ್ಯಾ' ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ.
ಟರ್ಕಿ ದೇಶದ ಅಂತಾಲಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಇನ್ನು ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಲಿಪಿಕಾ, ವಿಶ್ವದ 20 ರಾಷ್ಟ್ರಗಳ ಸ್ಪರ್ಧಿಗಳ ಜತೆ ಪೈಪೋಟಿ ನಡೆಸಿ ಈ ಪ್ರಶಸ್ತಿ ಗೆದ್ದು ಎಲ್ಲರ ಗಮನಸೆಳೆದಿದ್ದಾಳೆ.

ವಿಶ್ವದ ಪ್ರಬಲ ರಾಷ್ಟ್ರಗಳಾದ ಅಲ್ಬೇನಿಯಾ, ಟರ್ಕಿ, ಯುಎಸ್‌ಎ, ಕೀನ್ಯಾ, ಪೋರ್ಚ್ ಗಲ್, ಬಲ್ಗೇರಿಯಾ, ಕ್ಯಾಮರೂನ್, ಉಕ್ರೇನ್, ಹಂಗೇರಿಯ, ರೋಮಾನಿಯಾ, ಜೋರ್ಜಿಯಾ, ಖಜಕಿಸ್ತಾನದ ಸ್ಪರ್ಧಿಗಳು ಲಿಪಿಕಾಳಿಗೆ ಪೈಪೋಟಿ ನೀಡಿದ್ದರು.
ಮುಂಬಯಿ ಅಂಧೇರಿಯ ಪಶ್ಚಿಮದಲ್ಲಿ ವಾಸವಾಗಿರುವ ಉದ್ಯಮಿ ವಿಠಲ ಶೆಟ್ಟಿ ಹಾಗೂ ಸಾಂಚಿ ಶೆಟ್ಟಿ ದಂಪತಿಗಳ ಪುತ್ರಿ ಲಿಪಿಕಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಈ ಸ್ಪರ್ಧೆಯನ್ನು ಗೆಲ್ಲುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾಳೆ.

ಪ್ರಶಸ್ತಿ ಗೆದ್ದ ಬಗ್ಗೆ ಸಂತೋಷವನ್ನು ಹಂಚಿಕೊಂಡಿರುವ ಲಿಪಿಕಾ, "ವಿಶ್ವ ಮಟ್ಟದಲ್ಲಿ ಗೆಲುವು ದಾಖಲಿಸುವುದು ಖುಷಿ ಕೊಟ್ಟಿದೆ. ಸ್ಪರ್ಧೆಯಲ್ಲಿ ಪ್ರಬಲ ರಾಷ್ಟ್ರಗಳ ಸ್ಪರ್ಧಿಗಳು ಇದ್ದರು. ಆದರೆ, ಭಾರತದ ವೈಶಿಷ್ಟ್ಯಕುರಿತು ನಿರ್ಣಾಯಕರಿಗೆ ಮನವರಿಕೆ ಮಾಡಿಕೊಟ್ಟೆ.
ದೇಶಿಯ ಉಡುಗೆ- ತೊಡುಗೆ ಅವರಿಗೆ ಸಾಕಷ್ಟು ಇಷ್ಟವಾಯಿತು. ಕೆಲವೊಂದು ಪ್ರಶ್ನೆಗಳನ್ನು ಕೇಳಿದರು ಉತ್ತರಿಸಿದೆ. ಕೊನೆಗೆ ನಾನು ವಿಜಯಿ ಎಂದು ಅನೌನ್ಸ್ ಮಾಡಿ ಬಿಟ್ಟರು" ಎಂದು ಲಿಪಿಕಾ ಅಲ್ಲಿನ ಅನುಭವಗಳನ್ನು ಹಂಚಿಕೊಂಡಳು.

ಭಾರತದಿಂದ ಮೂರು ಪುಟಾಣಿಗಳು ಈ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಮುಖ್ಯವಾಗಿ ನಿವೇದಿತಾ ಮೊಗರಟ್ಟಿ, ಕಶೀಶ್ ಮುಖಿಯಾ ಹಾಗೂ ಲಿಪಿಕಾ ಶೆಟ್ಟಿ ಅವರು ಆಯ್ಕೆಯಾಗಿದ್ದರು.
ಆದರೆ, ಇದರಲ್ಲಿ ಲಿಪಿಕಾ ಶೆಟ್ಟಿ ಮಾತ್ರ ಫೈನಲ್ ಪ್ರವೇಶ ಪಡೆದು ಕೊನೆಗೆ ವಿಜೇತಳಾಗಿದ್ದಾಳೆ ಎಂದು ವೆಲಿಂಟೀನಾ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕಿ ವ್ಯಾಲೆಂಟೀನಾ ಮಿಶ್ರಾ ತಿಳಿಸಿದ್ದಾರೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications