ಕಂಕನಾಡಿಯಲ್ಲಿ ಲಿಫ್ಟ್ ನಲ್ಲಿ ಸಿಲುಕಿ ಸಾವನ್ನಪ್ಪಿದ 7 ವರ್ಷದ ಬಾಲಕ
ಮಂಗಳೂರು, ಆಗಸ್ಟ್.24: ಮಕ್ಕಳಿಗೆ ಲಿಫ್ಟ್ ನಲ್ಲಿ ಆಟವಾಡುವುದೆಂದರೆ ಎಲ್ಲಿಲ್ಲದ ಖುಷಿ. ಲಿಫ್ಟ್ ನಲ್ಲಿ ಒಂದು ಫ್ಲೋರ್ ನಿಂದ ಮತ್ತೊಂದು ಫ್ಲೋರ್ ಗೆ ಹೋಗಿ ವಾಪಾಸ್ ಬರುವುದು. ಲಿಫ್ಟ್ ಆಪರೇಟರ್ ಇಲ್ಲದಾಗ ತಾವೇ ಲಿಫ್ಟ್ ಚಲಾಯಿಸುವುದು ಇವೆಲ್ಲ ಮಕ್ಕಳಿಗೆ ಇನ್ನಿಲ್ಲದ ಖುಷಿ ಕೊಡುತ್ತವೆ.
ಆದರೆ ಮಕ್ಕಳ ಈ ಆಟ ಕೆಲವೊಮ್ಮೆ ಜೀವಕ್ಕೆ ಎರವಾಗುತ್ತವೆ. ಇಂತಹುದೇ ದುರಂತ ಮಂಗಳೂರಿನ ಕಂಕನಾಡಿ ಪರಿಸರದಲ್ಲಿ ನಡೆದಿದೆ. ಕಂಕನಾಡಿಯ ವಾಸ್ ಲೇನ್ ನಲ್ಲಿರುವ 25 ವರ್ಷ ಹಳೆಯ ಶಮಾ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ಸಂಭವಿಸಿದೆ. ಬಾಲಕ ಮಹಮ್ಮದ್ ಸಿನಾನ್ (7) ಘಟನೆಯಲ್ಲಿ ಮೃತಪಟ್ಟ ದುರ್ದೈವಿ.
ನಿನ್ನೆ ಗುರುವಾರ ತಾಯಿ ಜೊತೆಗೆ ಮೂರು ಮಕ್ಕಳು ಶಾಪಿಂಗ್ ಗೆ ತೆರಳಲು ಸಿದ್ಧರಾಗಿ ನಿಂತಿದ್ದರು. ವಾಸವಿದ್ದ ಫ್ಲಾಟ್ ಗೆ ತಾಯಿ ಬೀಗ ಹಾಕುತ್ತಿದ್ದ ಸಂದರ್ಭ 7 ವರ್ಷದ ಸಿನಾನ್ ಏಕಾಏಕಿ ಲಿಫ್ಟ್ ನೊಳಗೆ ಹೋಗಿದ್ದಾನೆ. ಹಳೆ ಮಾದರಿಯ ಈ ಲಿಫ್ಟ್ ನೊಳಗೆ ಹೋಗಿ ಸರಿಯಾಗಿ ಬಾಗಿಲು ಭದ್ರಗೊಳಿಸದೇ ಲಿಫ್ಟ್ ನ ಕೆಳಹೋಗುವ ಬಟನ್ ಒತ್ತಿದ್ದಾನೆ ಎಂದು ಹೇಳಲಾಗಿದೆ.

ಈ ಸಂದರ್ಭದಲ್ಲಿ ಬಾಲಕನ ತಲೆ ಲಿಫ್ಟ್ ನ ಸಂದಿಯಲ್ಲಿ ಸಿಲುಕಿದೆ. ಬಾಲಕನ ಕಿರುಚಾಟ ಕೇಳಿ ತಾಯಿ ಓಡಿ ಬಂದಿದ್ದಾರೆ. ಇತರರ ಸಹಕಾರ ಪಡೆದು ಲಿಫ್ಟ್ ನ ಬಾಗಿಲು ಒಡೆದು ಬಾಲಕ ಸಿನನ್ ನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು .
ಆದರೆ ಅದಾಗಲೇ ಬಾಲಕ ಸಿನಾನ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೃತ ಸಿನಾನ್ ಅಹಮ್ಮದ್ ಬಾಸಿಂ ಎಂಬುವವರ ಪುತ್ರನಾಗಿದ್ದು, ಈ ಘಟನೆಯ ಬಗ್ಗೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications