Gold smuggling: ಗುದದ್ವಾರದಲ್ಲಿ 20 ಲಕ್ಷ ಮೌಲ್ಯದ ಚಿನ್ನ ಸಾಗಾಟ ಮಾಡಲು ಹೋಗಿ ತಗ್ಲಾಕೊಂಡ ಕಿಲಾಡಿ ಲೇಡಿ
ಮಂಗಳೂರು, ಅಕ್ಟೋಬರ್, 05: ಇತ್ತೀಚಿತ್ತೀನ ದಿನಗಳಲ್ಲಿ ಅಕ್ರಮ ಚಿನ್ನ ಸಾಗಾಟ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಲ್ಲದೆ ಇಂತಹ ಭೇದಿಸುವಲ್ಲಿ ಪೊಲೀಸರು ಕೂಡ ಯಶಸ್ವಿಯಾದ ಉದಾಹರಣೆಗಳು ಇವೆ. ಇದೀಗ ಅಂತಹದ್ದೆ ಒಂದು ಪ್ರಕರಣ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಪ್ಯಾಂಟ್, ಟೀಶರ್ಟ್, ಅಂಡರ್‌ವೇರ್ ಸೇರಿದಂತೆ ಇನ್ನಿತರ ವಸ್ತುಗಳಲ್ಲಿ ಅಕ್ರಮ ಚಿನ್ನ ಸಾಗಾಟ ಮಾಡುತ್ತಿರುವ ಪ್ರಕರಣಗಳನ್ನು ಪೊಲೀಸರು ಭೇದಿಸಿರುವ ಘಟನೆಗಳು ನಡೆದಿವೆ. ನಡೆಯುತ್ತಲೇ ಇವೆ. ಇದೀಗ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಗುದದ್ವಾರದಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಘಟನೆ ನಡೆದಿದೆ. ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಒಟ್ಟು 20.41 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರ (ಅಕ್ಟೋಬರ್ 4) ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಬಂದಿಳಿದಿದ್ದು, ಈ ವೇಳೆ ತಪಾಸಣೆ ನಡೆಸಿದಾಗ ಡಿಟೆಕ್ಟರ್‌ನಲ್ಲಿ ಬೀಪ್ ಶಬ್ದ ಬಂದಿದ್ದು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಧೃಡಪಟ್ಟಿದೆ. ಎರಡು ಗೋಳಾಕಾರದ ಕ್ಯಾಪ್ಸುಲ್ ಮಾದರಿಗಳಲ್ಲಿ ಪೇಸ್ಟ್ ರೂಪದ ಚಿನ್ನವನ್ನು ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡು ಸಾಗಣೆ ಮಾಡುತ್ತಿದ್ದು, 24 ಕ್ಯಾರೆಟ್‌ನ 345 ಗ್ರಾಂ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ 20,41,650 ರೂಪಾಯಿ ಎಂದು ಅಂದಾಜು ಮಾಡಲಾಗಿದೆ.
87.75 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಚಿನ್ನ ಸಾಗಾಟ
ಇನ್ನು ಮತ್ತೊಂದೆಡೆ ಗಲ್ಫ್‌ನಿಂದ ಅಕ್ರಮವಾಗಿ ಸಾಗಿಸಿದ್ದ ಸುಮಾರು 87.75 ಲಕ್ಷ ರೂಪಾಯಿ ಮೌಲ್ಯದ 1517.5 ಗ್ರಾಂ ಚಿನ್ನಾಭರಣ ಸಹಿತ ಕುಂಬಳೆ ನಿವಾಸಿಯನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದ್ದಾರೆ. ಬಂಧಿತನನ್ನು ಕುಂಬಳೆ ನಿವಾಸಿ ಸಲ್ಮಾನ್ ಫರೀದ್ ಎಂದು ಗುರುತಿಸಲಾಗಿದೆ. ಸಂಶಯಗೊಂಡು ಫರೀದ್‌ನ ಬ್ಯಾಗನ್ನು ತಪಾಸಣೆ ನಡೆಸಿದಾಗ ಚಿನ್ನಾಭರಣ ಪತ್ತೆ ಆಗಿದೆ. ಟ್ರೋಲಿ ಬ್ಯಾಗ್‌ನೊಳಗೆ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications