ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಗತ್ತಿನೆಲ್ಲಡೆ ತುಳು ಭಾಷಾ ಸೊಗಡು ಬಿತ್ತಿದ ನಾಟಕಗಳು

|
Google Oneindia Kannada News

ಮಂಗಳೂರು, ಡಿ. 5 : ತುಳು ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಗೆ ನಾಟಕ ರಂಗದ ಕೊಡುಗೆ ಅನನ್ಯ. ತುಳು ನಾಟಕಗಳು ವಿಶ್ವದೆಲ್ಲೆಡೆ ನಾಟಕ ಪ್ರದರ್ಶನಗೊಳ್ಳುವ ಮೂಲಕ ಭಾಷಾ ಸೊಗಡು ಎಲ್ಲಡೆ ಪಸರಿಸಿದೆ ಎಂದು ಖ್ಯಾತ ನಾಟಕಕಾರ, ಬಯ್ಯಬಲ್ಲಿಗೆ ಖ್ಯಾತಿಯ ಡಾ. ಪಿ.ಸಂಜೀವ ದಂಡೆಕೇರಿ ಹೇಳಿದರು.

ಅಖಿಲ ಭಾರತ ತುಳು ಒಕ್ಕೂಟದ ಬೆಳ್ಳಿ ಹಬ್ಬದ ಅಂಗವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ವಿಶ್ವ ತುಳುವೆರೆ ಪರ್ಬ ಅಂಗವಾಗಿ ಹಮ್ಮಿಕೊಂಡಿರುವ 'ತುಳುನಾಟಕ ಪರ್ಬ 2014ನ್ನು' ಉದ್ಘಾಟಿಸಿ ಮಾತನಾಡಿದರು.[ತುಳುನಾಡು ಛಾಯಾಚಿತ್ರ ಸ್ಪರ್ಧೆಗೆ ಫೋಟೋ ಕಳಿಸಿ]

ಹಿಂದಿನ ಕಾಲದಲ್ಲಿ ತುಳು ನಾಡಿನ ಚರಿತ್ರೆಯನ್ನು ಚಾರಿತ್ರಿಕ ನಾಟಕದ ಮೂಲಕ ಎತ್ತಿಹಿಡಿಯಲಾಗುತ್ತಿತ್ತು. ತುಳು ನಾಡಿನ ಆಚಾರ, ವಿಚಾರ, ಪರಂಪರೆ, ವೇಷಭೂಷಣಗಳಿಗೆ ಮಾನ್ಯತೆ ನೀಡಲಾಗುತ್ತಿತ್ತು. ಆದರೆ ಇಂದು ನಾಟಕ ರಂಗ ವಾಣಿಜ್ಯ ಮುಖಿಯಾಗುತ್ತಿದೆ. ಕಲಾವಿದರಲ್ಲಿ ಅನ್ಯೋನ್ಯತೆ ಕೊರತೆ ಕಾಡುತ್ತಿದೆ ಎಂದು ಎಂದು ಅಭಿಪ್ರಾಯಪಟ್ಟರು.[ವಿಶ್ವತುಳು ಪರ್ಬಕ್ಕೆ 50 ಲಕ್ಷ ಅನುದಾನ]

ಹಿರಿಯ ನಾಟಕಕಾರ ಸಂಜೀವ ಅಡ್ಯಾರ್, ಉದ್ಯಮಿ ಜಯರಾಮ ಶೇಖ, ನಾಟಕ ಪರ್ಬದ ಪ್ರಾಯೋಜಕ ಭಂಡಾರಿ ಬಿಲ್ಡರ್ಸ್‍ನ ಮಾಲೀಕ ಲಕ್ಷ್ಮೀಶ ಭಂಡಾರಿ, ಅಡ್ಯಾರ್ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ಅಶೋಕ್ ಶೆಟ್ಟಿ ಕೆಮ್ತೂರು, ಸಹ್ಯಾದ್ರಿ ಕಾಲೇಜಿನ ಪ್ರಾವಚಾರ್ಯ ಯು.ಎಂ. ಭೂಷಿ, ನವನೀತ ಶೆಟ್ಟಿ, ವಿ.ಜಿ. ಪಾಲ್, ಪ್ರದೀಪ್ ಆಳ್ವ ಕದ್ರಿ, ದಯಾನಂದ ಕಟೀಲು, ಕರುಣಾಕರ ಶೆಟ್ಟಿ ಮುಲ್ಕಿ, ತಾರನಾಥ ಶೆಟ್ಟಿ ಬೋಳಾರ್, ಲಕ್ಷ್ಮಣ್, ಎಚ್.ಕೆ.ನಯನಾಡು, ಶರತ್ ಶೆಟ್ಟಿ ಪಡು, ಲೀಲಾಕ್ಷ ಮತ್ತಿತರರು ಹಾಜರಿದ್ದರು.

parba

English summary
Mangaluru: The 'Tuluvere parba drama' programme started on December 4. Dramas spread Tulu language importance all over the world said by daramist Sanjeev Dandekeri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X