HD ಕುಮಾರಸ್ವಾಮಿ ಬಂಧನದ ಕಾಲ ದೂರವಿಲ್ಲ: ಅವರೇನು ಸಾಚಾನಾ?: ನಟಿ ರಾಧಿಕಾ ಹೆಸರಿಸಿ ಹೊಸ ಬಾಂಬ್ ಸಿಡಿಸಿದ 'ಕೈ' ಶಾಸಕ
ಬೆಂಗಳೂರು, ಮೇ 12: ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಲಲೀಲೆಯ ವಿಡಿಯೋ ಪ್ರಕರಣವು ದಿನದಿಂದ ದಿನಕ್ಕೆ ರಾಜಕೀಯವಾಗಿ ಹೊಸ ರೂಪ ಪಡೆದುಕೊಳ್ಳುತ್ತಿದೆ. ರಾಜಕಾರಣಿಗಳ ಆರೋಪ-ಪ್ರತ್ಯಾರೋಪಗಳು ಮುಂದುವರೆದಿದ್ದು, ಜೆಡಿಎಸ್ vs ಕಾಂಗ್ರೆಸ್ ಎಂಬಂತಹ ವಾತಾವರಣ ನಿರ್ಮಾಣವಾಗಿದೆ.
ಇದೀಗ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧವೇ ಮದ್ದೂರು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಹೊಸ ಬಾಂಬ್ ಸಿಡಿಸಿದ್ದಾರೆ. ಪೆನ್‌ಡ್ರೈವ್ ಪ್ರಕರಣ ಸಂಬಂಧ ಶುಕ್ರವಾರವಷ್ಟೇ ಹೊಳೆನರಸೀಪುರದ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಬಂಧನವಾಗಿದೆ. ಕುಮಾರಸ್ವಾಮಿ ಅವರು ಸಹ ಬಂಧನವಾಗುವ ದಿನಗಳು ದೂರವಿಲ್ಲ. ಅವರೇನು ಸಾಚಾನ? ಎಂದು ಹೇಳುವ ಮೂಲಕ ಶಾಸಕರು ಹೊಸ ಬಾಂಬ್ ಸಿಡಿಸಿದ್ದಾರೆ.

ಕುಮಾರಸ್ವಾಮಿ ಜೈಲಿಗೆ ಹೋಗುವ ಕಾಲ ದೂರವಿಲ್ಲ
ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ಶಾಸಕ, ಎಚ್‌ಡಿ ಕುಮಾರಸ್ವಾಮಿ ಅವರ ವೈಯಕ್ತಿಕ ಜೀವನ ಕುರಿತು ಟೀಕೆ ಮಾಡಿದರು. ಕುಮಾರಸ್ವಾಮಿ ಅವರು ಜೈಲಿಗೆ ಹೋಗುವ ಕಾಲ ಹತ್ತಿರದಲ್ಲಿದೆ. ಅವರೇನು ಒಳ್ಳೆಯವರಲ್ಲ. ಕುಮಾರಸ್ವಾಮಿ ಲೈಂಗಿಕ ದೌರ್ಜನ್ಯದ ಕಿರುಕುಳ ಬಗ್ಗೆಯೂ ನಾವು ಕೇಳಿದ್ದೇವೆ ಎಂದು ಹೇಳಿದರು.
ಜೆಡಿಎಸ್ ನಾಯಕ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರು ಈಗಾಗಲೇ ಜೈಲಲ್ಲಿದ್ದಾರೆ. ಅವರ ಸಹೋದರ ಎಚ್‌ಡಿ ಕುಮಾರಸ್ವಾಮಿ ಅವರು ಸಹ ಜೈಲಿಗೆ ಹೋಗಲಿದ್ದಾರೆ. ಪೆನ್‌ಡ್ರೈವ್ ಪ್ರಕರಣದ ನಂತರ ಎಚ್‌ಡಿಕೆ ವಿರುದ್ಧವು ಮಹಿಳೆಯು ದೂರು ನೀಡಲಿದ್ದಾರೆ ಎಂದು ಹೇಳಿ ಅಚ್ಚರಿ ಮೂಡಿಸಿದರು.
ನಟಿ ರಾಧಿಕಾ ಎಳೆದು ತಂದ 'ಕೈ' ಶಾಸಕ ಉದಯ್
ಕುಮಾರಸ್ವಾಮಿ ಅವರ ವಿರುದ್ಧವೂ ಮಹಿಳೆಯು ಮುಂದಿನ ದಿನಗಳಲ್ಲಿ ದೂರು ಕೊಡುತ್ತಾರೆ. ರಾಧಿಕಾ ಅವರು ಪತ್ನಿಯಂತೆ ಕಾಣುತ್ತಾರೆ. ಮಗಳ ವಯಸ್ಸಿನ ಇವರನ್ನು ಪುಸಲಾಯಿಸಿ ಮಗಳು ಕೈಗೆ ಕೊಟ್ಟಿದ್ದಾರೆ. ಇದೀಗ ಅವರನ್ನು ರೋಡಿಗೆ ಬಿಟ್ಟಿದ್ದಾರೆ. ಮುಖ್ಯಮಂತ್ರಿ ಆದವರು ಇಂಥಹ ನೀಚ ಕೆಲಸ ಮಾಡುತ್ತಾರಾ? ಹಾಗಾದರೆ ಕುಮಾರಸ್ವಾಮಿ ಅವರೇನು ಸಾಚಾನಾ? ಎಂದು ಪ್ರಶ್ನೆ ಮಾಡಿದರು.
ಕುಮಾರಸ್ವಾಮಿ ಅವರು ರಾಜಕೀಯ ಜೀವನದುದ್ದಕ್ಕೂ ಬೇರೆಯವರನ್ನು ಬೆದರಿಕಸಿಕೊಂಡೆ ಬಂದರು. ಅಪಪ್ರಚಾರ ಮಾಡಿ, ಬೇರೆಯವರನ್ನು ಮುಳುಗಿಸಿಯೇ ಈವರೆಗೆ ಬಂದಿದ್ದೆ ಅವರ ಸಾಧನೆ. ಇವು ಸಹ ನೀಚ ಕೆಲಸ ಮಾಡಿದ್ದಾರೆ. ಇವರ ಮನೆ ಹೆಣ್ಣು ಮಕ್ಕಳ ಮರಿಯಾದೆ ಹೋಗಿದ್ದರೆ ಹೀಗೆ ರಸ್ತೆಯಲ್ಲಿ ಬಂದು ಪ್ರತಿಭಟನೆ ಮಾಡುತ್ತಿದ್ದರಾ? ಎಂದು ವೈಯಕ್ತಿಕವಾಗಿ ಉದಯ್ ಅವರು ಕುಟುಕಿದರು.
ಸದ್ಯ ಎಚ್‌ಡಿ ಕುಮಾರಸ್ವಾಮಿ ಅವರು ಪ್ರಕರಣ ಕುರಿತು ಒಂದಷ್ಟು ಸ್ಪಷ್ಟನೆಗಳನ್ನು ಕೊಟ್ಟಿದ್ದಾರೆ. ಮಾಡಿದ ತಪ್ಪಿಗೆ ಶಿಕ್ಷೆ ಆಗುತ್ತದೆ ಎಂದಿದ್ದಾರೆ. ಈ ಪ್ರಕರಣವು ಡಿಕೆ ಶಿವಕುಮಾರ್ ಹಾಗೂ ಕುಮಾರಸ್ವಾಮಿ ಮಧ್ಯೆ ಭಾರೀ ವಾಗ್ವಾದಕ್ಕೂ ಕಾರಣವಾಗಿದೆ. ಪ್ರಜ್ವಲ್ ರೇವಣ್ಣ ವಿದೇಶದಿಂದ ಬರುವವರೆಗೂ ಇಂತಹ ಆರೋಪ-ಪ್ರತ್ಯಾರೋಪಗಳು ಮುಂದುವರಿಯಲಿವೆ ಎಂದು ಹೇಳಲಾಗುತ್ತಿದೆ.












Click it and Unblock the Notifications