ಶಿವನಸಮುದ್ರದಲ್ಲಿ ನವದಂಪತಿ ಶವ ಪತ್ತೆ: ಮರ್ಯಾದಾ ಹತ್ಯೆ ಶಂಕೆ
ಮಂಡ್ಯ, ನವೆಂಬರ್ 16: ಮಂಡ್ಯದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಶಿವನಸಮುದ್ರದಲ್ಲಿ ವಯರ್‌ನಲ್ಲಿ ಕಟ್ಟಿದ ಸ್ಥಿತಿಯಲ್ಲಿ ಯುವಕ-ಯುವತಿಯ ಶವ ಪತ್ತೆಯಾಗಿದೆ.
ಮಾನಕ್ಕಾಗಿ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಮೃತ ನವ ದಂಪತಿ ತಮಿಳುನಾಡಿನ ಹೊಸೂರು ಜಿಲ್ಲೆಯ ಕೃಷ್ಣಗಿರಿಯವರು ಎಂದು ತಿಳಿದುಬಂದಿದೆ, ನವ ದಂಪತಿಯನ್ನು ಯುವತಿಯ ಅಪ್ಪ, ಚಿಕ್ಕಪ್ಪ ಅಣ್ಣಂದಿರು ಭೀಕರವಾಗಿ ಕೊಲೆ ಮಾಡಿರುವ ಕುರಿತು ಅನುಮಾನ ವ್ಯಕ್ತವಾಗಿದೆ.
ಕಳೆದೊಂದು ವಾರದ ಹಿಂದೆ ಹತ್ಯೆ ಮಾಡಿ ಹೊಸೂರಿನಿಂದ ಶಿವನಸಮುದ್ರದ ಬಳಿ ಕಾವೇರಿ ನದಿಗೆ ಶವಗಳನ್ನು ಬಿಸಾಡಿರಬಹುದು ಎನ್ನಲಾಗಿದೆ. ಮೂರು ದಿನಗಳ ಹಿಂದೆ ಯುವಕನ ಶವ ಪತ್ತೆಯಾಗಿತ್ತು, ಯುವತಿ ಶವ ಗುರುವಾರ ಪತ್ತೆಯಾಗಿದೆ ಪ್ರಕರಣದ ಬಗ್ಗೆ ಬೆಳಕವಾಡಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ,

ಅನ್ಯ ಧರ್ಮದ ಯುವಕನನ್ನು ಪ್ರೀತಿಸಿ ಮದುವೆ ಆಗಿದ್ದಕ್ಕೆ ಕೋಪಗೊಂಡು ದಂಪತಿಯನ್ನು ಕೊಲೆ ಮಾಡಿರಬಹುದು. ಗುರುವಾರ ಕೃಷ್ಣಗಿರಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಜೋಡಿಕೊಲೆ ಆರೋಪಿಗಳನ್ನು ಶುಕ್ರವಾರ ಸಂಜೆ ಮಂಡ್ಯಕ್ಕೆ ಪೊಲೀಸರು ಕರೆ ತರಲಿದ್ದಾರೆ.












Click it and Unblock the Notifications