ಬರೀ 36 ಗಂಟೆಯಷ್ಟೇ ದರ್ಶನ ನೀಡೋ ಚೌಡೇಶ್ವರಿ!

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಮಾರ್ಚ್ 17: ಸಾಮಾನ್ಯವಾಗಿ ದೇವಾಲಯಗಳಲ್ಲಿ ದಿನವೂ ದೇವರ ದರ್ಶನ ಪಡೆಯಬಹುದು. ಆದರೆ ಮದ್ದೂರಿನ ಹೆಮ್ಮನಹಳ್ಳಿಯಲ್ಲಿರುವ ಚೌಡೇಶ್ವರಿ ದೇವಾಲಯದ ಚೌಡೇಶ್ವರಿ ದೇವಿಯನ್ನು ನೋಡಬೇಕಾದರೆ ವರ್ಷ ಕಾಯಬೇಕು. ಕಾದರೂ ನೋಡಲು ಸಿಗುವುದು ಕೇವಲ 36 ಗಂಟೆ ಮಾತ್ರ.

ಪ್ರತಿವರ್ಷದಂತೆ ಈ ವರ್ಷವೂ ಹೆಮ್ಮನಹಳ್ಳಿ ಚೌಡೇಶ್ವರಿ ದೇವಿಯ ಆರಂಭವಾಗಿದ್ದು, ಸಹಸ್ರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಗೆ ದೇವಾಲಯದ ಬಾಗಿಲು ತೆರೆದು ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ, ಪುನಸ್ಕಾರ ನಡೆಸಲಾಯಿತು.[ನಾಗಲ ಮಡಿಕೆಗೆ ನಡೆದುಕೊಂಡರೆ ನಾಗ ದೋಷ ಪರಿಹಾರ!]

This Godess Chowdeshwari darshanam only for 36 hours

ದೇವಾಲಯದ ಅಮೃತ ಮಣ್ಣಿನ ದ್ವಾರವನ್ನು ತೆರೆದ ಕ್ಷಣದಲ್ಲಿ ಆ ಅಮೃತ ಮಣ್ಣನ್ನು ಭಕ್ತಾದಿಗಳು ತಮ್ಮ ತಲೆ ಮೇಲೆ ಹೊತ್ತುಕೊಂಡು ಪ್ರದಕ್ಷಿಣೆ ಹಾಕಿದರು. ಒಂದು ಕಡೆ ರಾಶಿ ಹಾಕಿ, ಅದನ್ನು ಕಣ್ಣಿಗೆ ಒತ್ತಿಕೊಂಡು ಸ್ವಲ್ಪ ಅಮೃತ ಮಣ್ಣನ್ನು ತೆಗೆದುಕೊಂಡು ಅದರಿಂದ ಪೂಜೆ ಸಲ್ಲಿಸಿದರು. ಈ ಅಮೃತ ಕ್ಷಣಕ್ಕಾಗಿ ಕಾದ ಭಕ್ತರು ಮುಗಿಬಿದ್ದು ತಮ್ಮ ಸೇವೆ ಸಲ್ಲಿಸಿದರು.

ಉತ್ಸವಕ್ಕೆ ಆಗಮಿಸಿದ್ದ ಸಹಸ್ರಾರು ಭಕ್ತರು ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ದೇವರಲ್ಲಿ ಬೇಡಿಕೊಂಡರು. ಇನ್ನು ಕೆಲ ಭಕ್ತರು ದೇವಾಲಯದಲ್ಲಿ ಉರುಳು ಸೇವೆ ಮಾಡುವ ಮೂಲಕ ತಮ್ಮ ಹರಕೆ ತೀರಿಸಿದರು.[ವಾರಾಂತ್ಯ ವಿಶೇಷ: ದೇವರಾಯನದುರ್ಗದಲ್ಲಿ ಅಪರೂಪದ ಶಿವ ದೇಗುಲ]

ದೇವಾಲಯದಲ್ಲಿ ಶುಕ್ರವಾರ ಕೊಂಡೋತ್ಸವ ನಡೆಯಲಿದ್ದು, ಇದಕ್ಕಾಗಿ ಕೊಂಡದ ಗುಂಡಿಯನ್ನು ಗ್ರಾಮದ ಯುವಕರು ತೆಗೆದು, ಬಳಿಕ ಎತ್ತಿನ ಬಂಡಿ ಉತ್ಸವ ನಡೆಸಿ, ಸೌದೆಯನ್ನು ಗುರುವಾರವೇ ಸಂಗ್ರಹಿಸಿದ್ದಾರೆ. ಜಾತ್ರಾಮಹೋತ್ಸವದ ಬಳಿಕ ಭಕ್ತರಿಗೆ ಅನ್ನಸಂತರ್ಪಣೆಯೂ ನಡೆಯಲಿದೆ. ಇದೇ ವೇಳೆ ಚೌಡೇಶ್ವರಿಯ ಅಮೃತದ್ವಾರವನ್ನು ಮುಚ್ಚಲಾಗುವುದು. ಇನ್ನು ಆಕೆಯ ದರ್ಶನ ಮಾಡಬೇಕಾದರೆ ಮುಂದಿನ ವರ್ಷದವರೆಗೆ ಕಾಯಬೇಕು.

ಹಬ್ಬದ ಅಂಗವಾಗಿ ನಡೆದ ಜಾನಪದ ಕಲಾ ತಂಡಗಳ ಮೆರವಣಿಗೆ ಗಮನ ಸೆಳೆಯಿತು. ಗ್ರಾಮದಾದ್ಯಂತ ಸಡಗರ ಮನೆ ಮಾಡಿದ್ದು, ಭಕ್ತರು ಚೌಡೇಶ್ವರಿ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chowdeshwari temple in Hemmanahalli, Maddur taluk opens once in a year. But devotees gets Godess Chowdeshwari darshanam only for 36 hours.
Please Wait while comments are loading...