Get Updates
Get notified of breaking news, exclusive insights, and must-see stories!

ರಾಜ್ಯದ 181 ಸ್ಮಾರಕದೊಳಗೆ ಸೇರಲಿವೆ ಸಕ್ಕರೆ ನಾಡಿನ ಅಸುರಕ್ಷಿತ ದೇವಾಲಯಗಳು

ಮಂಡ್ಯ, ನವೆಂಬರ್‌ 08: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಐದು ಹಾಗೂ ಪಾಂಡವಪುರ ತಾಲೂಕಿನ ನಾಲ್ಕು ಅಸುರಕ್ಷಿತ ಸ್ಮಾರಕಗಳಾದ ರಾಜ್ಯದ 181 ಸ್ಮಾರಕದೊಳಗೆ ಸೇರಲಿದೆ. ಅವುಗಳನ್ನು ಸಂರಕ್ಷಿತ ಸ್ಮಾರಕಗಳು ಎಂದು ಘೋಷಿಸುವಂತೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯ ಕೊಪ್ಪಲು ಶ್ರೀ ಯೋಗನರಸಿಂಹಸ್ವಾಮಿ ದೇವಾಲಯ, ಹುರುಳಿ ಕ್ಯಾತನಹಳ್ಳಿ ಶ್ರೀ ಶಂಭುಲಿಂಗೇಶ್ವರ ದೇವಾಲಯ, ಬೆಳಗೊಳ ಶ್ರೀ ಜನಾರ್ಧನಲಿಂಗೇಶ್ವರ ದೇವಾಲಯ, ಕಡತನಾಳು ವಿದ್ಯಾನಗರದ ಗಣಗಂಭ, ಅರಕೆರೆ ಚನ್ನಕೇಶವ ಮತ್ತು ನರಸಿಂಹಸ್ವಾಮಿ ದೇವಾಲಯ ಮತ್ತು ಪಾಂಡವಪುರ ತಾಲ್ಲೂಕಿನ ಕಾಮನಾಯಕನಹಳ್ಳಿ ಶ್ರೀ ಶಿವನ ದೇವಾಲಯ, ಛಾಗಶೆಟ್ಟಿಹಳ್ಳಿ ಶ್ರೀ ಶಂಭುಲಿಂಗೇಶ್ವರ ದೇವಾಲಯ, ಬೆಳ್ಳಾಳೆ ಶ್ರೀ ಗರುಡಾಂಜನೇಯ ದೇವಾಲಯ, ಹೊಸಕೋಟೆ ಶ್ರೀ ನಿಷ್ಕಾಮೇಶ್ವರ ದೇವಾಲಯ ಸೇರಿದಂತೆ ಒಟ್ಟು ಮಂಡ್ಯ ಜಿಲ್ಲೆಯ ಒಂಭತ್ತು ದೇವಾಲಯಗಳು 181 ಸ್ಮಾರಕಗಳ ಸಂರಕ್ಷಿತ ಪಟ್ಟಿಗೆ ಸೇರಲಿವೆ.

unprotected-temples-of-mandya

ಈಗಾಗಲೇ ಈ ಕ್ಷೇತ್ರದ ದೇವಾಲಯಗಳ ಮಾಹಿತಿ ಸೇರಿದಂತೆ ಸಂರಕ್ಷಣೆಗೆ ಒಳಪಡಬಹುದಾದ ಪ್ರಾಚೀನ ಸ್ಮಾರಕ, ದೇವಾಲಯ, ಕಟ್ಟಡಕ್ಕೆ ಸೇರಿರುವ ರೆವಿನ್ಯೂ ನಿವೇಶನ, ಕಟ್ಟಡ ವಿಸ್ತೀರ್ಣ, ಕಟ್ಟಡದ ಒಡೆತನ ಅಂದರೆ ಸದರಿ ಸ್ಮಾರಕವು ಖಾಸಗಿ ಒಡೆತನದಲ್ಲಿದೆಯೋ ಅಥವಾ ಮುಜರಾಯಿ ಸಂಸ್ಥೆಗೆ ಒಳಪಟ್ಟಿದಿಯೋ ಎಂಬಿತ್ಯಾದಿ ವಿಷಯಗಳನ್ನು ಸಮಗ್ರವಾಗಿ ಕ್ರೂಢೀಕರಿಸಿರುವ ಇಲಾಖೆಯು ಮುಜರಾಯಿ, ಜಿಲ್ಲಾಡಳಿತ, ಕರ್ನಾಟಕ ಅಥವಾ ಜಿಲ್ಲಾ ವಕ್ಫ್‌ ಮಂಡಳಿಗೆ ಹಾಗೂ ಇತರೆ ಇಲಾಖೆಗಳ ಆಡಳಿತದ ವ್ಯಾಪ್ತಿಯಲ್ಲಿ ಬಂದಲ್ಲಿ ಅವರ ವಿವರಗಳನ್ನು ಸಹ ಪಟ್ಟಿ ಮಾಡಿಕೊಂಡಿದೆ. ಅಲ್ಲದೇ ಮತ್ತಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದೆ.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಅನ್ವೇಷಣೆ, ಉತ್ಖನನ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಶಾಸನಗಳ ಸರ್ವೃಕ್ಷಣೆ, ಶಿಲಾಶಿಲ್ಪಗಳು, ಪ್ರಾಚೀನ ನಾಣ್ಯಗಳ ಅಧ್ಯಯನ, ಸಂಶೋಧನಾ ಗ್ರಂಥಗಳ ಪ್ರಕಟಣೆ, ವಸ್ತು ಸಂಗ್ರಹಾಲಯಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಮತ್ತು ಪಂರಂಪರೆ ಕಾರ್ಯಚಟುವಟಿಕೆಗಳನ್ನು ರೂಪಿಸಿ, ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ.

ಗ್ರಾಮಾವಾರು ಸರ್ವೇ ಮೂಲಕ ಗುರುತಿಸಲಾದ ಅರಕ್ಷಿತ ಸ್ಮಾರಕಗಳನ್ನು ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅವಶೇಶಗಳ ಅಧಿನಿಯಮ, 1961 ಹಾಗೂ ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತ್ವ ಸ್ಥಳಗಳ ಮತ್ತು ಅವಶೇಷಗಳ ನಿಯಮಗಳು, 1965ರ ರೀತ್ಯಾ ಪುರಾತತ್ವ ಅಥವಾ ಕಲಾತ್ಮಕ ಅಸ್ಥೆಯುಳ್ಳಂಥ ಮತ್ತು ನೂರು ವರ್ಷಗಳಿಗಿಂತಲೂ ಕಡಿಮೆಯಿಲ್ಲದೆ ಅಸ್ತಿತ್ವದಲ್ಲಿರುವಂಥ ಯಾವುದೇ ರಚನೆ, ನಿರ್ಮಿತಿ, ಸ್ಮಾರಕ ಅಥವಾ ಸಮಾಧಿ ದಿಬ್ಬ, ಹೂಳುವ ಸ್ಥಳ, ಗುಹೆ, ಶಿಲಾಶಿಲ್ಪ, ಶಾಸನ ಮತ್ತು ಏಕಶಿಲೆ ಇತ್ಯಾದಿಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಬಹುದಾಗಿದೆ.

ಈ ನಿಟ್ಟಿನಲ್ಲಿ ಸಂಬಂಧಪಟ್ಟ ತಾಲ್ಲೂಕು ಕಂದಾಯ ಇಲಾಖೆ ಅಥವಾ ತಹಶೀಲ್ದಾರ್ ಅವರಿಗೆ ಇಲಾಖೆವತಿಯಿಂದ ಗುರುತಿಸಲಾಗಿರುವ ಅರಕ್ಷಿತ ಸ್ಮಾರಕಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶ್ರೀರಂಗಪಟ್ಟಣ ಐದು ಹಾಘೂ ಪಾಂಡವಪುರ ನಾಲ್ಕು ಅರಕ್ಷಿತ ಸ್ಮಾರಕಗಳ ರೆವಿನ್ಯೂ ಮಾಹಿತಿಯನ್ನು ಒದಗಿಸಲು ಪುರಾತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸೂಚನೆ ನೀಡಿದೆ. ಅದರಂತೆ ಎಲ್ಲಾ ಸರ್ವೇ ಕಾರ್ಯ ಮುಗಿದಿದ್ದು, ಇನ್ನಷ್ಟೇ ಸಂರಕ್ಷಿತ ಸ್ಮಾರಕಗಳ ಪಟ್ಟಿಗೆ ಸೇರಬೇಕಿದೆ.

unprotected-temples-of-mandya

ಸ್ಮಾರಕಗಳ ಸಂರಕ್ಷಣೆ ವಿಚಾರದಲ್ಲಿ ಹಾಗೂ ಅವುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಸಂಪೂರ್ಣ ಸಹಕಾರವಿದೆ. ನಮ್ಮ ಸಂಸ್ಕೃತಿ ಉಳಿಯಬೇಕು. ಕೇವಲ ನಮ್ಮಿಂದ ನಿರೀಕ್ಷಿಸುವುದರ ಜೊತೆಗೆ ನಾಗರಿಕರ ಹೆಚ್ಚು ಪ್ರೋತ್ಸಾಹ ಬೇಕಿದೆ. ರಾಜ್ಯದ 181 ಸ್ಮಾರಕದೊಳಗೆ ಪಾಂಡವಪುರ ವ್ಯಾಪ್ತಿಯ ಅರಕ್ಷಿತ ದೇವಾಲಯಗಳು ಸೇರ್ಪಡೆಗೊಳ್ಳುತ್ತಿರುವುದು ಸಂತೋಷ ತರಿಸಿದೆ ಎಂದು ಪಾಂಡವಪುರ ತಹಶೀಲ್ದಾರ್ ಎಸ್.ಸಂತೋಷ್ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ವ್ಯಾಪ್ತಿಗೊಳಪಡುವ ಒಟ್ಟು ಎಂಟು ದೇವಾಲಯಗಳ ಸರ್ವೇಕಾರ್ಯ ಇಲ್ಲಿತನಕ ಮುಗಿದಿದೆ. ಅವುಗಳನ್ನು ಸಂರಕ್ಷಿತ ಸ್ಮಾರಕಗಳು' ಎಂದು ಘೋಷಿಸುವಂತೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ರೆವಿನ್ಯೂ ಸೇರಿದಂತೆ ಸೂಕ್ತ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ.

ಇದರಿಂದ ಐತಿಹಾಸಿಕ ದೇವಾಲಯಗಳ ಉಳಿವಿಗೆ ಅಗತ್ಯವಾಗಿ ಕ್ರಮ ವಹಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆ ಸಾಗುತ್ತಿದೆ. ಇದು ದೊಡ್ಡ ಪ್ರಾಜೆಕ್ಟ್‌ ಆಗಿರುವುದರಿಂದ ಕೆಲಸ ಹೆಚ್ಚು ಹಿಡಿಯುತ್ತದೆ, ಸರ್ವೇ ಮಾಡುವ ಕಾರ್ಯ ಹೆಚ್ಚು ತೆಗೆದುಕೊಳ್ಳುತ್ತದೆ, ಮಾಹಿತಿಗಳನ್ನು ಕೆಲೆಹಾಕಿ ಅವುಗಳನ್ನು ಪ್ರವಾಸಿ ತಾಣಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿಯೂ ಕ್ರಮ ವಹಿಸುವ ಗುರುತರ ಜವಾಬ್ದಾರಿ ಇರುತ್ತದೆ. ಒಟ್ಟಾರೆ ನಮ್ಮ ನಾಡಿನ ಪರಂಪರೆ, ಸಂಸ್ಕೃತಿ ಹಾಗೂ ಪುರಾತ್ವ ಅವಶೇಷಗಳನ್ನು ಉಳಿಸಲು ಇಲಾಖೆ ಶ್ರಮ ವಹಿಸುತ್ತಿದೆ ಎಂದು ಮೈಸೂರು ಪುರಾತತ್ವಶಾಸ್ತ್ರಜ್ಞರು ಎನ್.ಎಲ್.ಗೌಡ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+