ಯಡಿಯೂರಪ್ಪ ಸಿಎಂ ಆಗಲಿ ಎಂದು ಪ್ರಾರ್ಥಿಸಿ ಮಂಡ್ಯದಲ್ಲಿ ನಾಳೆ ವಿಶೇಷ ಪೂಜೆ
Recommended Video
ಬಿ ಎಸ್ ಯಡಿಯೂರಪ್ಪ ಸಿಎಂ ಆಗಲಿ ಎಂದು ಮಂಡ್ಯದ ಬೂಕನಕೆರೆಯಲ್ಲಿ ದೇವರಿಗೆ ವಿಶೇಷ ಪೂಜೆ ಹೋಮ Oneindia Kannada
ಮಂಡ್ಯ, ಜುಲೈ 15: ಬಿಎಸ್ ಯಡಿಯೂರಪ್ಪ ಮುಂದಿನ ಸಿಎಂ ಆಗಲಿ ಎಂದು ಪ್ರಾರ್ಥಿಸಿ ಅವರ ಹುಟ್ಟೂರಾದ ಮಂಡ್ಯದ ಬೂಕನಕೆರೆಯಲ್ಲಿ ಮಂಗಳವಾರ ವಿಶೇಷ ಪೂಜೆ ನಡೆಯಲಿದೆ.
ಯಡಿಯೂರಪ್ಪ ಅವರು ಮನೆ ದೇವರು ಗವಿಮಠದ ಸ್ವಾತಂತ್ರ ಸಿದ್ಧಲಿಂಗೇಶ್ವರನಿಗೂ ವಿಶೇಷ ಪೂಜೆ ನಡೆಯಲಿದೆ. ಯಡಿಯೂರಪ್ಪ ಸೂಚನೆ ಮೇರೆಗೆ ಅವರ ಸಂಬಂಧಿಗಳ ನೇತೃತ್ವದಲ್ಲಿ ಈ ವಿಶೇಷ ಹೋಮ, ಹವನ ನಡೆಯಲಿದೆ.
ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮ ಮಾಜಿ ಸಿಎಂ ಬಿಎಸ್‍ವೈ ಹುಟ್ಟೂರಾಗಿದ್ದು, ಅಲ್ಲಿಯೇ ಹೋಮ, ಹವನ, ವಿಶೇಷ ಪೂಜೆ ನಡೆಯಲಿದೆ.

ಮಂಗಳವಾರ ಬೆಳಗ್ಗೆ ಎಂಟರಿಂದ ಬೂಕನಕೆರೆ ಗ್ರಾಮ ದೇವತೆ ಗೋಗಲಮ್ಮ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಗಣಪತಿ ಹೋಮ ನಡೆಯಲಿದೆ.
ಯಡಿಯೂರಪ್ಪ ಸಂಕಷ್ಟದಲ್ಲಿ ಇರುವಾಗ ಹಾಗೂ ಅಧಿಕಾರಕ್ಕೇರುವ ಸಂದರ್ಭದಲ್ಲಿ ಗೋಗಲಮ್ಮನಿಗೆ ಹೋಮ, ಪೂಜೆ ಸಲ್ಲಿಸುವುದು ವಾಡಿಕೆ ಇದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ಇಂದೇ ವಿಶ್ವಾಸಮತ ಸಾಬೀತು ಪಡಿಸುವಂತೆ ಪಟ್ಟು ಹಿಡಿದಿದ್ದರು ಆದರೆ ಗುರುವಾರಕ್ಕೆ ಮುಂದೂಡಲಾಗಿದೆ.












Click it and Unblock the Notifications