ನಾರಾಯಣ ಗೌಡ ಬಿಚ್ಚಿಟ್ಟರು ಹತ್ಯೆಗೆ ಸುಪಾರಿ ಕೊಟ್ಟ ಸುದ್ದಿ

ಮಂಡ್ಯ, ನವೆಂಬರ್ 08: "ನನ್ನನ್ನು ಹತ್ಯೆ ಮಾಡಲು ಸುಪಾರಿ ನೀಡಲಾಗಿತ್ತು. ಆದರೆ, ಭಗವಂತನ ಶಕ್ತಿ ಎಲ್ಲಿ ಮಾಡೋಕೆ ಬಿಡುತ್ತೆ. ನಾನು ಚೆನ್ನಾಗಿಯೇ ಇದ್ದೇನೆ" ಎಂದು ಅನರ್ಹ ಶಾಸಕ ನಾರಾಯಣ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನಾರಾಯಣ ಗೌಡನನ್ನು ಹೊಡೆದು ಹಾಕಬೇಕು ಎಂದು 50 ಲಕ್ಷಕ್ಕೆ ಸುಪಾರಿ ನೀಡಲಾಗಿತ್ತು. ಕೆ. ಆರ್. ಪೇಟೆಯಲ್ಲಿ ಹೊಡೆದು ಹಾಕುವಂತೆ ಹೇಳಲಾಗಿತ್ತು" ಎಂದರು.

"ದಾವೂದ್ ಮತ್ತು ಛೋಟಾ ರಾಜನ್ ವಲ್ಡ್‌ ಫೇಮಸ್ ಆಗಿದ್ದರು. ಅವರೇ ಹೊಡೆಯೋಕೆ ಆಗಲಿಲ್ಲ. ಭಗವಂತನ ಆಶೀರ್ವಾದ ಇರುವಾಗ ನನ್ನ ತಾಲೂಕಿನಲ್ಲಿಯೇ ಹೊಡೆಯೋಕೆ ಸಾಧ್ಯವೇ?. ಈ ವಿಚಾರ ತಿಳಿದ ದಿನದಿಂದ ನನ್ನ ಜೊತೆ ಗನ್ ಮ್ಯಾನ್ ಕೂಡಾ ಇಟ್ಟುಕೊಂಡಿಲ್ಲ" ಎಂದು ನಾರಾಯಣ ಗೌಡ ಹೇಳಿದರು.

ಕೆ. ಆರ್. ಪೇಟೆ ಕ್ಷೇತ್ರದ ಶಾಸಕರಾಗಿದ್ದ ನಾರಾಯಣ ಗೌಡ ಅನರ್ಹರಾಗಿದ್ದಾರೆ. ಡಿಸೆಂಬರ್ 5ರಂದು ಕ್ಷೇತ್ರದ ಉಪ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದೆ. ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಳ್ಳಲಿದೆಯೇ? ಕಾದು ನೋಡಬೇಕು.

ಗನ್ ಮ್ಯಾನ್ ಇಟ್ಟುಕೊಂಡಿಲ್ಲ

ಗನ್ ಮ್ಯಾನ್ ಇಟ್ಟುಕೊಂಡಿಲ್ಲ

"ಹತ್ಯೆಗೆ ಸುಪಾರಿ ನೀಡಿದ ವಿಚಾರ ತಿಳಿದ ದಿನದಿಂದ ನನ್ನ ಜೊತೆ ಗನ್ ಮ್ಯಾನ್ ಕೂಡಾ ಇಟ್ಟುಕೊಂಡಿಲ್ಲ. ಜನರ ಆಶೀರ್ವಾದದ ಇರುವ ತನಕ ನಾನು ಭಯ ಪಡುವುದಿಲ್ಲ" ಎಂದು ನಾರಾಯಣ ಗೌಡ ಹೇಳಿದರು.

ಪಾಠ ಕಲಿಸೋದೆ ಗುರಿ

ಪಾಠ ಕಲಿಸೋದೆ ಗುರಿ

"ಈ ತಾಲೂಕಿನಲ್ಲಿ ಯಾರು ಕೆಟ್ಟವರು, ಯಾರೂ ಲೂಟಿ ಮಾಡುತ್ತಿದ್ದಾರೆ ಅವರಿಗೆ ಪಾಠ ಕಲಿಸೋದು ನನ್ನ ಮುಂದಿನ ಗುರಿ. ಅದನ್ನು ನಿಮ್ಮ ಎಲ್ಲರ ಸಹಕಾರದಿಂದ ಮಾಡುವೆ. ನಾನು ಇನ್ನು ಯಾವುದೇ ಕಾರಣಕ್ಕೂ ಯಾರಿಗೂ ಹೆದರಲ್ಲ" ಎಂದು ನಾರಾಯಣ ಗೌಡ ಹೇಳಿದರು.

ದೇವೇಗೌಡರಿಗೆ ಎಚ್ಚರಿಕೆ ಕೊಟ್ಟಿದ್ದರು

ದೇವೇಗೌಡರಿಗೆ ಎಚ್ಚರಿಕೆ ಕೊಟ್ಟಿದ್ದರು

ಅನರ್ಹ ಶಾಸಕ ನಾರಾಯಣ ಗೌಡ ದೇವೇಗೌಡರಿಗೆ ಎಚ್ಚರಿಕೆ ಕೊಟ್ಟಿದ್ದರು. "ದೇವೇಗೌಡರೇ ನನ್ನನ್ನು ಕೆಣಕಬೇಡಿ. ನೀವು ನಮ್ಮನ್ನ ತುಳಿದರೆ ಭಗವಂತ ನಿಮ್ಮನ್ನು ತುಳಿತಾನೆ. ದೇವೇಗೌಡರು ಮಕ್ಕಳಿಗೆ, ಮೊಮ್ಮಕ್ಕಳಿಗೆ ಅಧಿಕಾರ ಕೊಟ್ಟರು. ನಿಮಗೆ ಕಾರ್ಯಕರ್ತರು ಬೇಡವೇ?" ಎಂದು ಪ್ರಶ್ನೆ ಮಾಡಿದ್ದರು.

ಯಡಿಯೂರಪ್ಪ ಜೊತೆ ಕೈ ಜೋಡಿಸಿದೆ

ಯಡಿಯೂರಪ್ಪ ಜೊತೆ ಕೈ ಜೋಡಿಸಿದೆ

"ಕೆ. ಆರ್. ಪೇಟೆ ತಾಲೂಕಿನ ಅಭಿವೃದ್ಧಿಗಾಗಿ 700 ಕೋಟಿ ರೂ. ಅನುದಾನ ಕೇಳಿದರೆ ಯಡಿಯೂರಪ್ಪ 1000 ಕೋಟಿ ಕೊಡುತ್ತೇನೆ ಎಂದರು. ತಾಲೂಕಿನ ಅಭಿವೃದ್ಧಿಗಾಗಿ ಅವರ ಜೊತೆ ಕೈ ಜೋಡಿಸಿದೆ" ಎಂದು ನಾರಾಯಣ ಗೌಡ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+