ರಂಗನತಿಟ್ಟು ಪಕ್ಷಿಧಾಮದ ವಿವಿಧ ಶುಲ್ಕಗಳು ಹೆಚ್ಚಳ
ಮಂಡ್ಯ, ನವೆಂಬರ್ 2 : ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮದ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ದೋಣಿ ವಿಹಾರ, ಕ್ಯಾಮೆರಾ ಬಳಕೆ ಶುಲ್ಕವೂ ನವೆಂಬರ್ 1ರಿಂದಲೇ ಜಾರಿಗೆ ಬರುವಂತೆ ಹೆಚ್ಚಳವಾಗಿದೆ.

ವನ್ಯಜೀವಿ ವಿಭಾಗದ ಡಿಸಿಸಿಎಫ್ ಆದೇಶದ ಮೇರೆಗೆ ಶುಲ್ಕ ಹೆಚ್ಚಳ ಮಾಡಲಾಗಿದೆ. 'ನವೆಂಬರ್ 1ರಿಂದಲೇ ಜಾರಿಗೆ ಬರುವಂತೆ ಶುಲ್ಕಗಳನ್ನು ಹೆಚ್ಚಳ ಮಾಡಲಾಗಿದೆ' ಎಂದು ಪಕ್ಷಿಧಾಮದ ಉಪ ವಲಯ ಅರಣ್ಯಾಧಿಕಾರಿ ಪುಟ್ಟ ಮಾದೇಗೌಡ ಹೇಳಿದ್ದಾರೆ.
ನೂತನ ದರಪಟ್ಟಿ
* ಪ್ರವೇಶ ಶುಲ್ಕ : 70 ರೂ. (ವಿದೇಶಿಯರಿಗೆ 400)
* ದೋಣಿ ವಿವಾರ ಶುಲ್ಕ : 70 ರೂ. (ವಿದೇಶಿಯರಿಗೆ 400)
* ವಿಶೇಷ ದೋಣಿ ವಿಹಾರ : 1,500 (ವಿದೇಶಿಯರಿಗೆ 3000)
ಮೈಸೂರು ಮೃಗಾಲಯ, ಬಂಡೀಪುರ ಸೇರಿದಂತೆ ರಾಜ್ಯದ ಎಲ್ಲ ರಾಷ್ಟ್ರೀಯ ಉದ್ಯಾನಗಳು, ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿ ಅಭಯಾರಣ್ಯಗಳ ಪ್ರವೇಶ ಶುಲ್ಕಗಳನ್ನು ನವೆಂಬರ್ 1ರಿಂದ ಹೆಚ್ಚಿಸಲಾಗಿದೆ.
ಬಂಡೀಪುರದಲ್ಲಿ ಸಫಾರಿ ಶುಲ್ಕವನ್ನು 300 ರಿಂದ 550 ರೂ.ಗೆ ಹೆಚ್ಚಿಸಲಾಗಿದ್ದು, ವಿದೇಶಿಯರಿಗಿದ್ದ 1000 ರೂ. ಶುಲ್ಕವನ್ನು 1,500 ರೂ.ಗೆ ಏರಿಕೆ ಮಾಡಲಾಗಿದೆ.












Click it and Unblock the Notifications