ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಮತ್ತೊಂದು ಅವಾಂತರ: ನೆಲಕ್ಕುರುಳುತ್ತಿವೆ ವಿದ್ಯುತ್ ಟವರ್‌ಗಳು

ಮಂಡ್ಯ, ಜುಲೈ 27: ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿ ಅಳವಡಿಸಿರುವ ವಿದ್ಯುತ್ ಟವರ್‌ಗಳು ಉರುಳಿ ಬೀಳುತ್ತಿದೆ. ಹೆದ್ದಾರಿ ಕಾಮಗಾರಿ ದೃಷ್ಟಿಯಿಂದ ವಿದ್ಯುತ್ ಟವರ್‌ಗಳನ್ನು ಸ್ಥಳಾಂತರಿಸಿ ನಂತರ ಸೆಸ್ಕ್‌ಗೆ ಹಸ್ತಾಂತರ ಮಾಡುವ ಜವಾಬ್ದಾರಿ ಹೊತ್ತಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಟವರ್‌ಗಳ ವಿನ್ಯಾಸ ಹಾಳಾಗಿ ಗಾಳಿಗೆ ನೆಲಕ್ಕುರುಳುತ್ತಿದ್ದರೂ ಅಪಾಯದ ಪರಿವೇ ಇಲ್ಲದೆ ಬೇಜವಾಬ್ದಾರಿತನ ತೋರುತ್ತಾ ದಿವ್ಯನಿರ್ಲಕ್ಷ್ಯ ವಹಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಹಿಡಿದು ಸಂಸದೆ ಸುಮಲತಾ ಅಂಬರೀಶ್, ಮೈಸೂರು ಸಂಸದ ಪ್ರತಾಪ್‌ ಸಿಂಹ, ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸೆಸ್ಕಾಂ ಇಲಾಖೆ ಅಧಿಕಾರಿಗಳವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಾಮಗಾರಿ ಪೂರ್ಣಗೊಳಿಸಿ ಸೆಸ್ಕಾಂ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಿದ್ದರೂ, ಭಂಡತನ ಪ್ರದರ್ಶಿಸುತ್ತಿರುವ ಬಗ್ಗೆ ತೀವ್ರ ಸ್ವರೂಪದ ಆರೋಪಗಳು ಕೇಳಿಬರುತ್ತಿವೆ.

power-towers-falling

400 ಟವರ್‌ಗಳ ಸ್ಥಳಾಂತರ

ಜಿಲ್ಲೆಯೊಳಗೆ ದಶಪಥ ಹೆದ್ದಾರಿ ಹಾದು ಹೋಗಿರುವ ಮದ್ದೂರು ಗಡಿಭಾಗ ನಿಡಘಟ್ಟದಿಂದ ಶ್ರೀರಂಗಪಟ್ಟಣದಿಂದ ಗಡಿಭಾಗದಿಂದ ಕಳಸ್ತವಾಡಿವರೆಗೆ 400 ವಿದ್ಯುತ್ ಟವರ್‌ಗಳನ್ನು ಅಳವಡಿಸಲಾಗಿದ್ದು, ಇವುಗಳ ಮೂಲಕ ಅಕ್ಕ-ಪಕ್ಕದ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು.

ದಶಪಥ ಹೆದ್ದಾರಿ ಕಾಮಗಾರಿಗೆ ಅನುಕೂಲವಾಗುವಂತೆ ರಸ್ತೆ ಪಕ್ಕದಲ್ಲಿದ್ದ ಟವರ್‌ಗಳನ್ನು ಸ್ಥಳಾಂತರಿಸಲು ಹೆದ್ದಾರಿ ಪ್ರಾಧಿಕಾರದವರಿಗೆ ಅನುಮತಿ ನೀಡಲಾಗಿತ್ತು. ಹೀಗೆ ಅನುಮತಿ ನೀಡುವ ವೇಳೆ ವಿದ್ಯುತ್ ಟವರ್‌ಗಳ ವಿನ್ಯಾಸಕ್ಕೆ ಧಕ್ಕೆಯಾಗದಂತೆ ಯಥಾಸ್ಥಿತಿಯಲ್ಲಿ ಸ್ಥಳಾಂತರಿಸಿ ಇಲಾಖೆಗೆ ಹಸ್ತಾಂತರಿಸುವಂತೆ ಷರತ್ತನ್ನು ವಿಧಿಸಲಾಗಿತ್ತು.

ಹೆದ್ದಾರಿ ಪ್ರಾಧಿಕಾರದವರು ದಶಪಥ ಹೆದ್ದಾರಿ ನಿರ್ಮಾಣಕ್ಕೆ ಸ್ಥಳಾಂತರಿಸಿದ್ದ ಟವರ್‌ಗಳು 18 ಮೀಟರ್‌ನಿಂದ 21 ಮೀಟರ್ ಎತ್ತರದ್ದವಾಗಿವೆ. ರಾತ್ರಿ ವೇಳೆ ಟವರ್‌ಗಳ ಜೋಡಣಾ ಕಂಬಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಸುಮಾರು ಟವರ್‌ನ ಅರ್ಧಭಾಗದಷ್ಟು ಜೋಡಣಾ ಕಂಬಿಗಳೇ ಇಲ್ಲದೆ ಖಾಲಿಯಾಗಿದೆ. ಟವರ್‌ಗಳ ವಿನ್ಯಾಸ ಬಹುತೇಕ ಹಾಳಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಟವರ್‌ಗಳನ್ನು ಸ್ಥಳಾಂತರ ಮಾಡಿದ ಬಳಿಕ ಪೆಟ್ರೋಲಿಂಗ್ ಮಾಡುವ ಮೂಲಕ ಜೋಡಣಾ; ಕಬ್ಬಿಣಗಳು ಕಳುವಾಗದಂತೆ ಎಚ್ಚರ ವಹಿಸಬೇಕಿತ್ತು. ಅವರ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯದಿಂದ ವಿದ್ಯುತ್ ಟವರ್‌ಗಳು ಬೋಳು ಬೋಳಾಗಿ ನಿಂತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನೆಲಕ್ಕುರುಳುತ್ತಿರುವ ಟವರ್‌ಗಳು

ವಿದ್ಯುತ್ ಟವರ್‌ಗಳು ಸುಭದ್ರವಾಗಿರುವಂತೆ ಅಳವಡಿಸಿದ್ದ ಜೋಡಣಾ ಕಂಬಿಗಳನ್ನು ಕಳ್ಳರು ಕದ್ದೊಯ್ದಿರುವುದರಿಂದ ಟವರ್‌ಗಳು ದುರ್ಬಲ ಸ್ಥಿತಿಯಲ್ಲಿವೆ. ಗಾಳಿಗೆ ನೆಲಕ್ಕುರುಳಲಾರಂಭಿಸಿವೆ. ಈಗಾಗಲೇ ಮದ್ದೂರಿನ ರುದ್ರಾಕ್ಷಿಪುರ, ಶ್ರೀರಂಗಪಟ್ಟಣದ ತೂಬಿನಕೆರೆ ಸೇರಿದಂತೆ ಹಲವೆಡೆ ನಾಲ್ಕೈದು ಟವರ್‌ಗಳು ಹೆದ್ದಾರಿ ರಸ್ತೆಗೆ ಉರುಳಿಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವಿದ್ಯುತ್ ಟವರ್‌ಗಳು ಉರುಳಿ ಬೀಳುತ್ತಿರುವುದು ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಆತಂಕ ಸೃಷ್ಟಿಸಿದೆ. ಯಾವ ಸಮಯದಲ್ಲಿ ಎಲ್ಲಿ ಉರುಳಿ ಬೀಳುವುದೋ ಎಂಬ ಭಯ ಕಾಡುತ್ತಿದೆ. ಈಗಾಗಲೇ ನಾಲ್ಕೈದು ಟವರ್‌ಗಳು ರಸ್ತೆಗೆ ಉರುಳಿಬಿದ್ದಿದ್ದರೂ ಅವುಗಳನ್ನು ಸುಸ್ಥಿತಿಗೆ ತರದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+