ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ಪತ್ರೆ ಆವರಣದಲ್ಲೇ ನವಜಾತ ಹೆಣ್ಣು ಶಿಶುವನ್ನು ಕಚ್ಚಿಕೊಂಡು ಓಡಾಡಿದ ನಾಯಿಗಳು!

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಸೆಪ್ಟೆಂಬರ್ 6: ಸದಾ ಒಂದಿಲ್ಲೊಂದು ಸುದ್ಧಿಯಲ್ಲಿ ಮುಂದಿರುವ ಮಂಡ್ಯ ವೈದ್ಯಕೀಯ ಸಂಸ್ಥೆ ಆವರಣದಲ್ಲಿ ನವಜಾತ ಹೆಣ್ಣು ಶಿಶುವೊಂದನ್ನು ನಾಯಿಗಳು ಕಚ್ಚಿಕೊಂಡು ಓಡಾಡಿರುವ ದೃಶ್ಯ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.

ಹೆಣ್ಣು ಶಿಶುವೆಂದು ಜರಿದ ಹೆತ್ತವರು ಮಿಮ್ಸ್ ಆವರಣದಲ್ಲಿ ಬಿಸಾಡಿಹೋಗಿರುವ ಶಂಕೆ ವ್ಯಕ್ತವಾಗಿದ್ದು, ಬಿಸಾಡಿದ ನವಜಾತ ಶಿಶುವನ್ನು ನಾಯಿಗಳು ಎಳೆಡಾಡಿವೆ. ಈ ದೃಶ್ಯ ಕಂಡ ಸಾರ್ವಜನಿಕರು ತಕ್ಷಣ ಮಿಮ್ಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಮಗುವನ್ನು ರಕ್ಷಣೆ ಮಾಡಿದ್ದಾರಾದರೂ, ದುರಾದೃಷ್ಟವಶಾತ್ ಮಗು ಬದುಕುಳಿಯಲಿಲ್ಲ. ಶವವನ್ನು ವಶಕ್ಕೆ ಪಡೆದ ಸಿಬ್ಬಂದಿಗಳು ಶವಾಗಾರಕ್ಕೆ ರವಾನಿಸಿದ್ದಾರೆ.

ಮಂಡ್ಯ: ರೈತರಿಗೆ ಮಾಹಿತಿ ನೀಡಲು ರೆಡಿಯಾಗುತ್ತಿದ್ದಾರೆ ಕೃಷಿ ಸಖಿಯರು!ಮಂಡ್ಯ: ರೈತರಿಗೆ ಮಾಹಿತಿ ನೀಡಲು ರೆಡಿಯಾಗುತ್ತಿದ್ದಾರೆ ಕೃಷಿ ಸಖಿಯರು!

ವಿಷಯ ತಿಳಿದು ಆತಂಕಗೊಂಡ ಅಧಿಕಾರಿಗಳು ಕೂಡಲೇ ಹೆರಿಗೆ ವಿಭಾಗದವರಿಂದ ಮಾಹಿತಿ ಕಲೆಹಾಕಿದರು. ಅದರಂತೆ ಮಗು ಮಿಮ್ಸ್‌ಗೆ ಸಂಬಂಧಿಸಿದ್ದಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆ ವೈದ್ಯರು ನಿಟ್ಟುಸಿರು ಬಿಟ್ಟಿದ್ದಾರೆ. ಸುದ್ದಿ ತಿಳಿದ ತಕ್ಷಣ ಮಿಮ್ಸ್ ನಿರ್ದೇಶಕ ಡಾ. ಬಿ.ಜೆ. ಮಹೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಗು ಎಲ್ಲಿಂದ ಬಂತು ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದರು.

Newborn Baby Girl Eaten By Street Dogs Hospital Premises in Mandya

ಸೆಪ್ಟೆಂಬರ್ 1ರಿಂದ 5ರವರೆಗೆ ನಾಲ್ಕು ನವಜಾತ ಶಿಶುಗಳು ಮಿಮ್ಸ್‌ನಲ್ಲಿ ಮೃತಪಟ್ಟಿದ್ದು, ಈ ಪೈಕಿ ಮೂರು ಗಂಡು ಹಾಗೂ ಒಂದು ಹೆಣ್ಣು ಶಿಶು ಎಂದು ತಿಳಿದುಬಂದಿದೆ. ಹೆಣ್ಣು ಮಗುವಿಗೆ ಸಂಬಂಧಿಸಿದಂತೆ ಚನ್ನಪಟ್ಟಣ ಮೂಲದ ದಂಪತಿಯಿಂದ ಮಾಹಿತಿ ಪಡೆಯಲಾಗಿತ್ತು. ಅವರು ಮೃತಪಟ್ಟ ತಮ್ಮ ಮಗುವನ್ನು ಅಂತ್ಯಸಂಸ್ಕಾರ ಮಾಡಿರುವುದಾಗಿ ಮಾಹಿರಿ ನೀಡಿದ್ದಾರೆ. ಆದರೆ, ಇಲ್ಲಿರುವ ಮೃತ ಮಗು ಯಾರದ್ದು, ಯಾವ ಆಸ್ಪತ್ರೆಯದ್ದು ಎಂಬುದು ತಿಳಿದುಬಂದಿಲ್ಲ.

ಒಂದು ದಿನದ ಹಿಂದೆಯಷ್ಟೇ ಮಗು ಜನಿಸಿದ್ದು, ವಿಕಲಚೇತನ ಎಂಬಂತೆ ಕಾಣುತ್ತಿರುವುದರಿಂದ ಹೆತ್ತವರು ಬಿಟ್ಟು ಹೋಗಿರಬಹುದು. ಅದನ್ನು ನಾಯಿಗಳು ಎಳೆದುಕೊಂಡು ಬಂದಿವೆ ಎನ್ನಲಾಗಿದೆ. ನಾಯಿಗಳು ಮಗುವಿನ ದೇಹವನ್ನು ಕಚ್ಚಿರುವ ಪರಿಣಾಮ ಸಂಪೂರ್ಣ ಗಾಯಗಳೇ ಕಾಣುತ್ತಿದ್ದವು. ಈ ದೃಶ್ಯವನ್ನು ಕಂಡ ಸಾರ್ವಜನಿಕರು ಪೋಷಕರಿಗೆ ಹಿಡಿ ಶಾಪ ಹಾಕುತ್ತಿದ್ದುದು ಕಂಡುಬಂತು.

ಈ ಬಗ್ಗೆ ಪೂರ್ವ ಠಾಣೆ ಪೊಲೀಸರಿಗೆ ದೂರು ನೀಡಿದ್ದಲ್ಲದೆ, ಸಂಸ್ಥೆಯ ಆವರಣದಲ್ಲಿರುವ ಸಿಸಿ ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದ 24 ಗಂಟೆಗಳ ದೃಶ್ಯಾವಳಿಯ ದಾಖಲೆಯನ್ನೂ ನೀಡಲಾಗಿದೆ.

English summary
An newborn girl was partially eaten by street dogs in Premises Mandya Institute of Medical Sciences(MIMS) on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X