ಮಂಡ್ಯ ಜೆಡಿಎಸ್ ಶಾಸಕರ ಹುಟ್ಟೂರಿಗೆ ಸಂಸದೆ ಸುಮಲತಾ ಭೇಟಿ
ಮಂಡ್ಯ, ಫೆಬ್ರವರಿ 13: ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಜಯಗಳಿಸಿರುವ ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಮಂಡ್ಯ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಹುಟ್ಟೂರು ಹನಕೆರೆ ಗ್ರಾಮದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿದರು.
ಪೂರ್ವ ನಿಗದಿ ಕಾರ್ಯಕ್ರಮದಂತೆ ಹನಕೆರೆಗೆ ಆಗಮಿಸಿದ ಸಂಸದೆ ಸುಮಲತಾ ಅಂಬರೀಶ್, ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕ ಕುಂದು ಕೊರತೆ ಆಲಿಸಿ, ಫಲಾನುಭವಿಗಳ ಅಹವಾಲು ಸ್ವೀಕರಿಸಿದರು.
ನಿನ್ನೆಯೇ ನಿಗದಿಯಾಗಿದ್ದ ಹಕ್ಕು ಪತ್ರ ವಿತರಣೆ ಕಾರ್ಯಕ್ರಮವನ್ನು ಅನಿವಾರ್ಯ ಕಾರಣದ ನೆಪ ಹೇಳಿ ಕಾರ್ಯಕ್ರಮ ಮುಂದೂಡುವಂತೆ ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಪತ್ರ ಬರೆದಿದ್ದರು.

ಶಾಸಕರ ಪತ್ರಕ್ಕೆ ಸಮ್ಮತಿಸಿ ಜಿಲ್ಲಾಡಳಿತ ಕಾರ್ಯಕ್ರಮ ಮುಂದೂಡಿತ್ತು. ಗ್ರಾಮಕ್ಕೆ ಭೇಟಿಯಾಗಿ ಸಂಸದೆ ಸುಮಲತಾ ಫಲಾನುಭವಿಗಳ ಅಹವಾಲು ಸ್ವೀಕಾರ ಮಾಡಿದ್ದು, ನಿವೇಶನ ಹಂಚಿಕೆಗೆ ಆಯ್ಕೆಯಾಗಿರುವ ಫಲಾನುಭವಿಗಳು ಸಂಸದೆ ಸುಮಲತಾ ಮುಂದೆ ತಮ್ಮ ಅಳಲು ತೋಡಿಕೊಂಡರು.
ಶಾಸಕರ ದ್ವೇಷ ರಾಜಕಾರಣದ ಬಗ್ಗೆ ಸ್ಥಳೀಯರು ದೂರು ನೀಡಿದ್ದು, ಅಧಿಕಾರಿಗಳನ್ನು ಸಂಸದೆ ಸುಮಲತಾ ತರಾಟೆಗೆ ತೆಗೆದುಕೊಂಡರು. ಕಾರ್ಯಕ್ರಮ ಮುಂದೂಡಿದ ಬಗ್ಗೆ ಸುಮಲತಾ ಪ್ರಶ್ನಿಸಿದ್ದು, ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.












Click it and Unblock the Notifications