ಭರ್ತಿಯಾದ ಕೆಆರ್‌ಎಸ್ ಒಡಲು, 1 ಕೋಟಿಗೂ ಅಧಿಕ ಆದಾಯ
Recommended Video

ಮಂಡ್ಯ, ಆಗಸ್ಟ್ 03 : ಕೆಆರ್‌ಎಸ್ ಜಲಾಶಯ ಭರ್ತಿಯಾಗಿದ್ದು ಕಾವೇರಿಯನ್ನು ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಕಾವೇರಿ ನೀರಾವರಿ ನಿಗಮಕ್ಕೆ 1 ಕೋಟಿಗೂ ಹೆಚ್ಚಿನ ಆದಾಯ ಬಂದಿದೆ.
ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 100 ಅಡಿ ತಲುಪುತ್ತಿದ್ದಂತೆ ಪ್ರವಾಸಿಗರು ಆಗಮಿಸಲು ಆರಂಭಿಸಿದರು. ಜೂನ್ ತಿಂಗಳಿನಲ್ಲಿಯೇ 53 ಲಕ್ಷ ಆದಾಯ ಬಂದಿತ್ತು. ಜುಲೈ 14ರಂದು ನದಿಗೆ ನೀರು ಹರಿಸಿದ ಬಳಿಕ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗಿದೆ.
ಜುಲೈ 31ರ ತನಕ ಕಾವೇರಿ ನೀರಾವರಿ ನಿಗಮಕ್ಕೆ 1 ಕೋಟಿ ಗೂ ಹೆಚ್ಚು ಆದಾಯ ಬಂದಿದೆ. ಬೃಂದಾವನ, ಹಿನ್ನೀರಿನಲ್ಲಿ ಬೋಟಿಂಗ್, ಸಂಗೀತ ಕಾರಂಜಿಗೆ ಬೇರೆ ಬೇರೆ ಶುಲ್ಕಗಳನ್ನು ನಿಗಮ ನಿಗದಿ ಮಾಡಿದೆ.

ಕೆಆರ್‌ಎಸ್‌ನಿಂದ 5160 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ನೀರು ಹರಿದು ಹೋಗುವ ಕ್ರೆಸ್ಟ್ ಗೇಟ್‌ಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ದೀಪಾಲಂಕಾರ ನೋಡು ಹಲವು ಪ್ರವಾಸಿಗರು ಬರುತ್ತಿದ್ದಾರೆ.
ಇಂದಿನ ನೀರಿನ ಮಟ್ಟ : ಗರಿಷ್ಠ 124 ಅಡಿ ಎತ್ತರದ ಕೆ.ಆರ್.ಎಸ್.ಜಲಾಶಯದಲ್ಲಿ ಪ್ರಸ್ತುತ 123 ಅಡಿ ನೀರಿನ ಸಂಗ್ರಹವಿದೆ. 9476 ಕ್ಯುಸೆಕ್ ಒಳ ಹರಿವು ಇದ್ದು, 5160 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.












Click it and Unblock the Notifications