Big Breaking: ಮಂಡ್ಯದಲ್ಲಿ ಭೀಕರ ಬಸ್ ಅಪಘಾತ: 20 ಕ್ಕೂ ಹೆಚ್ಚು ಜನ ಸಾವು
ಮಂಡ್ಯ, ನವೆಂಬರ್ 24: ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿದ್ದ ರಾಜಕುಮಾರ್ ಎಂಬ ಖಾಸಗಿ ಬಸ್ಸೊಂದು ನಾಲೆಗೆ ಉರುಳಿದ ಪರಿಣಾಮ 20 ಕ್ಕೂ ಹೆಚ್ಚು ಜನ ಮೃತರಾದ ಘಟನೆ ಶನಿವಾರ ನಡೆದಿದೆ.

ಮಂಡ್ಯ ಜಿಲ್ಲೆಯ ಕನಗನಮರಡಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಬಸ್ಸಿನಲ್ಲಿ 30 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದೆ. ಮೃತದೇಹಗಳನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸದ್ಯ 20 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ.
ಮಂಡ್ಯ, ಮೈಸೂರಿನಿಂದ ಆರು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸುತ್ತ ಮುತ್ತಲ ಗ್ರಾಮಸ್ಥರೇ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ.
ರಸ್ತೆಯ ಪಕ್ಕ ಯಾವುದೇ ತಡೆಗೋಡೆ ಇಲ್ಲದ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದ್ದು, ಹೆಚ್ಚಿನ ಮಾಹಿತಿ ಲಭ್ಯವಿಲ್ಲ.












Click it and Unblock the Notifications