Mandya Riot: ಜನ ಯಾಕಪ್ಪ ಈ ಸರ್ಕಾರ ತಂದ್ವಿ ಅಂತಾ ಶಾಪ ಹಾಕ್ತಾ ಇದ್ದಾರೆ- ಬಿವೈ ರಾಘವೇಂದ್ರ
ಶಿವಮೊಗ್ಗ ಸೆಪ್ಟೆಂಬರ್ 12: ಜನ ಯಾಕಪ್ಪ ಈ ಸರ್ಕಾರ ತಂದ್ವಿ ಅಂತಾ ಶಾಪ ಹಾಕ್ತಾ ಇದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಮಂಡ್ಯದ ನಾಗಮಂಗಲದಲ್ಲಿ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ರಾಘವೇಂದ್ರ ಅವರು, ಕಾಂಗ್ರೆಸ್ ಸರ್ಕಾರ ಆಡಳಿತ ಬಂದು ಒಂದೂವರೆ ವರ್ಷ ಆಗಿದೆ. ಗ್ಯಾರಂಟಿ ಬಗ್ಗೆ ವಿಶ್ವಾಸ ಇಟ್ಟು ಜನ ಅವರಿಗೆ ಆರ್ಶೀವಾದ ಮಾಡಿದ್ರು. ಜನ ಈಗ ಯಾಕಪ್ಪ ಈ ಸರ್ಕಾರ ತಂದ್ವಿ ಅಂತಾ ಶಾಪ ಹಾಕ್ತಾ ಇದ್ದಾರೆ ಎಂದು ಕಿಡಿ ಕಾರಿದರು.

ವಾಲ್ಮೀಕಿ ನಿಗಮದಲ್ಲಿ ದುರುಪಯೋಗ ಪಡಿಸಿಕೊಂಡಿರೋದರ ಬಗ್ಗೆ ಮಾಜಿ ಸಚಿವ ನಾಗೇಂದ್ರ ವಿರುದ್ಧ ಇಡಿ ಕೇಸ್ ಹಾಕಿದೆ. ಆದರೆ ರಾಜ್ಯ ಸರ್ಕಾರ ಕ್ಲೀನ್ ಚಿಟ್ ಕೊಟ್ಟಿತ್ತು. ನಮ್ಮ ಕುಟುಂಬದ ಮೇಲೆ, ಪಕ್ಷದ ಮೇಲೆ ಆರೋಪ ಮಾಡುವ ಪ್ರಯತ್ನ ಮಾಡುವ ಕೆಲಸ ಶುರುವಾಗಿದೆ. ಅದು ಶಿವಮೊಗ್ಗದಿಂದಲೇ ಶುರು ಮಾಡಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ವಕ್ತಾರರಾದ ಆಯನೂರು ಮಂಜುನಾಥ್ ಎರಡು ಬಾರಿ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದಾರೆ. ಅವರ ಹೇಳಿಕೆಗೆ ತಲೆಕೆಡಿಕೊಳ್ಳುಬೇಕಿಲ್ಲ. ಪದೇ ಪದೇ ಸುಳ್ಳು ಹೇಳುವ ಕೆಲಸ ಮಾಡಿದ್ದಾರೆ ಎಂದರು.
ಕೆಐಡಿಬಿ ಯಿಂದ ಐದು ಎಕರೆ ಜಾಗ ಆಸ್ಪತ್ರೆಗಾಗಿ ಮಂಜೂರು ಮಾಡಿಸಿಕೊಂಡಿದ್ದೇವೆ. ಯಾವುದೇ ದುರುಪಯೋಗ ಪಡಿಸಿಕೊಂಡಿಲ್ಲ. ಮಧುಬಂಗಾರಪ್ಪ ಅವರಿಗೆ ಇವರು ಈ ಹಿಂದೆ ಜೂಲ್ ನಾಯಿ ಅಂತಾ ಕರೆದಿದ್ರು. ಶಿವರಾಜ್ ಕುಮಾರ್ ಡ್ಯಾನ್ಸ್ ಅನ್ನು ಕರಡಿ ಕುಣಿತ ಅಂತಾ ಆರೋಪ ಮಾಡಿದ್ರು. ಇಲ್ಲಿದ್ದು ತಾವು ಬೆಳೆದಿದ್ದೀರಿ. ನಮ್ಮ ಬಗ್ಗೆ ಹಗುರವಾಗಿ ಮಾತಾನಾಡೋದು ಇದು ನಿಮ್ಗೆ ಶೋಭೆ ತರೋಲ್ಲ. ನಿಮ್ಮ ಪಕ್ಕದಲ್ಲಿರುವ ವ್ಯಕ್ತಿಗಳ ಬಗ್ಗೆ ಬೇರೆ ಪಕ್ಷದಲ್ಲಿದ್ದಾಗ ಏನು ಮಾತಾನಾಡಿದ್ರಿ ಅನ್ನೋದು ಗೊತ್ತಿದೆ. ಕಾಂಗ್ರೆಸ್ ತಮ್ಮ ತಟ್ಟೆಯಲ್ಲಿ ಬಿದ್ದಿರುವ ಕತ್ತೆಯನ್ನ ದೈವೋರ್ಟ್ ಮಾಡುವ ಕೆಲಸ ಮಾಡ್ತಾ ಇದ್ದಾರೆ ಎಂದು ತರಾಟೆ ತೆಗೆದುಕೊಂಡರು.

ನಾಗಮಂಗಲದಲ್ಲಿ ಗಲಾಟೆ ವಿಚಾರಕ್ಕೆ ಬಿವೈ ರಾಘವೇಂದ್ರ ಪ್ರತಿಕ್ರಿಯೆ
ನಾಗಮಂಗಲದಲ್ಲಿ ಗಲಾಟೆ ವಿಚಾರವಾಗಿ ಮಾತನಾಡಿದ ಬಿ.ವೈ.ರಾಘವೇಂದ್ರ, ''ಗಣಪತಿ ಹಬ್ಬ ಬಂದ್ರೆ ಗೃಹ ಇಲಾಖೆಗೆ ದೊಡ್ಡ ಟೆನ್ಶನ್. ಹಿಂದೂಗಳು ಸ್ವಾತಂತ್ರ್ಯವಾಗಿ ಹಬ್ಬವನ್ನ ಆಚರಿಸೋಕೆ ನೂರಾರು ಕಂಡಿಷನ್ ಹಾಕಿದ್ದಾರೆ. ಶಿಕಾರಿಪುರದಲ್ಲಿ ಯಾವುದೇ ಒಂದು ಘಟನೆ ನಡೆದಿದ್ದಕ್ಕೆ ಒಂದೇ ದಿನದಲ್ಲಿ ಎಲ್ಲಾ ಗಣಪತಿ ವಿಸರ್ಜನೆ ಮಾಡಿದ್ರು. ನಾನು ಆಗ ಜಿಲ್ಲಾಧಿಕಾರಿ, ಎಸ್ಪಿ ಅವರಿಗೆ ಕೇಳಿದ್ದೆ, ಎಲ್ಲಿದೆ ಕಾನೂನು ಅಂತಾ? ನಾಗಮಂಗಲ ಮುಖ್ಯ ರಸ್ತೆಯಲ್ಲಿ ಗಣಪತಿ ಮೇಲೆ ಕಲ್ಲು ತೂರಾಟ ನಡೆದಿದೆ. ಕಾಂಗ್ರೆಸ್ ಸರ್ಕಾರದ ಬಂದಿದೆ ಅಂತಾ ನಾನು ಏನು ಮಾಡಿದ್ರು ನಡೆಯುತ್ತದೆ ಅಂತಾ ಈ ರೀತಿಯ ಪುಂಡಾಟ ಮಾಡ್ತಾ ಇದ್ದಾರೆ'' ಎಂದು ಕಿಡಿ ಕಾರಿದ್ದಾರೆ.
ದರ್ಪದಿಂದ ನಡೆದುಕೊಳ್ಳುವ ಕೆಲಸ ಮಾಡ್ತಾ ಇದ್ದಾರೆ. ಹಿಂದೂ ಸಂಘಟನೆ ಇದನ್ನ ತೀವ್ರವಾಗಿ ಖಂಡಿಸುತ್ತದೆ. ಇಂತಹ ಘಟನೆ ಮತ್ತೆ ನಡೆದ್ರೆ ಹಿಂದೂಗಳು ಬೀದಿಗೆ ಇಲ್ಲಿಯಬೇಕಾಗುತ್ತದೆ. ಕೋಮು ಗಲಭೆ ಆಗದ ರೀತಿಯಲ್ಲಿ ಸರ್ಕಾರ ಎಚ್ಚರಿಕೆ ವಹಿಸಬೇಕು.

ಇದು ಕಾಂಗ್ರೆಸ್ ಸರ್ಕಾರ ಜವಾಬ್ದಾರಿ. ಇದೇ ರೀತಿ ರಾಜಕಾರಣ ಮಾಡಿಕೊಂಡು ಬಂದಿದ್ದು ಆಯ್ತು. ಇನಾದ್ರು ಕೂಡ ಎರಡು ಧರ್ಮ ನಡುವೆ ಕಿಡಿಕಾರದೇ ಗೌರವಿತವಾಗಿ ಹಬ್ಬ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂದರು.
ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ವಿಚಾರ
ಇನ್ನೂ ಮಂಡ್ಯ ಗಲಭೆ ವಿಚಾರವಾಗಿ ಜಿ ಪರಮೇಶ್ವರ ಅವರು ಆಕಶ್ಮಿಕವಾಗಿ ಕಲ್ಲು ತೂರಾಟ ನಡೆದಿದೆ ಎಂದು ಲಘುವಾಗಿ ಹೇಳಿಕೆ ನೀಡಿದ್ದರು. ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಬಿ.ವೈ.ರಾಘವೇಂದ್ರ ಅವರು, 'ಇಂದು ಸಣ್ಣ ಕಿಡಿನೇ ನಾಳೆ ದೊಡ್ಡದಾಗುತ್ತದೆ. ದೊಡ್ಡ ಕಿಡಿ ಆಗಬಹುದು ಅನ್ನೋ ಎಚ್ಚರಿಕೆ ವಹಿಸಬೇಕು. ಸೌಹಾರ್ದದಿಂದ ಹಬ್ಬ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.












Click it and Unblock the Notifications