ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವಕ್ಕೆ ಸಂಭ್ರಮದ ಚಾಲನೆ

ಮಂಡ್ಯ, ಮೇ 29: ಜಿದ್ದಾ-ಜಿದ್ದಿನ ಚುನಾವಣೆಯಲ್ಲಿ ತಮಗೆ ಗೆಲುವು ತಂದುಕೊಟ್ಟ ಮಂಡ್ಯದ ಮತದಾರರಿಗೆ ಧನ್ಯವಾದ ಸಲ್ಲಿಸಲು ಸುಮಲತಾ ಅವರು 'ಸ್ವಾಭಿನಾಮಿ ವಿಜಯೋತ್ಸವ'ದಲ್ಲಿ ಪಾಲ್ಗೊಂಡಿದ್ದಾರೆ.

ಮಂಡ್ಯದ ಸಿಲ್ವರ್ ಜ್ಯೂಬಿಲಿ ಮೈದಾನದಲ್ಲಿ 'ಸ್ವಾಭಿಮಾನಿ ವಿಜಯೋತ್ಸವ'ವನ್ನು ಆಯೋಜಿಸಲಾಗಿದೆ. ಮಂಡ್ಯ ಸಂಸದೆ ಸುಮಲತಾ, ನಟರಾದ ದರ್ಶನ್, ಯಶ್, ರಾಕಲೈನ್ ವೆಂಕಟೇಶ್, ದೊಡ್ಡಣ್ಣ, ಬಾಬು ರಾಜೇಂದ್ರ ಪ್ರಸಾದ್, ಡಾ.ರವೀಂದ್ರ ಇನ್ನೂ ಹಲವರು ಉದ್ಘಾಟನೆ ಮಾಡಿದರು.

ಸಮಾವೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಮಂಡ್ಯದ ಜನತೆ ಭಾಗವಹಿಸಿದ್ದಾರೆ. ಯಶ್, ದರ್ಶನ್, ಸುಮಲತಾ, ಅಭಿಶೇಕ್ ಅವರುಗಳಿಗೆ ಭಾರಿ ಜಯಘೋಷಗಳು ಸಮಾವೇಶದಲ್ಲಿ ಕೇಳಿಬರುತ್ತಿವೆ.

Mandya MP Sumalathas Svabhimani Vijayayothsava started in Mandya

ಸುಮಲತಾ ಅವರ ಬೆನ್ನಿಗೆ ನಿಂತು ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿದ್ದ ಯಶ್, ದರ್ಶನ್ ಸೇರಿ ಹಲವರು ನಾಯಕರು ಸಂತೋಶದಿಂದ ವೇದಿಕೆಯ ಮೇಲೆ ಪರಸ್ಪರ ಅಭಿನಂದಿಸಿಕೊಂಡರು.

ಸುಮಲತಾ, ದರ್ಶನ್, ಯಶ್ ಅವರು ಏನು ಮಾತನಾಡಲಿದ್ದಾರೆ ಎಂದು ಕೇಳಲು ಲಕ್ಷಾಂತರ ಮಂದಿ ಕಾಯುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ಅತಿಥಿಗಳ ಭಾಷಣ ಪ್ರಾರಂಭವಾಗಲಿದೆ.

ಸಮಾವೇಶದಲ್ಲಿ ಅಂಬರೀಶ್ ಅವರ ಕುರಿತು ಪತ್ರಕರ್ತ ಶರಣ ಹುಲ್ಲೂರು ಅವರು ಬರೆದಿರುವ "ವ್ಯಕ್ತಿ ವ್ಯಕ್ತಿತ್ವ ವರ್ಣರಂಜಿತ ಬದುಕು' ಪುಸ್ತಕ, ಸಿರಿಗೆರೆ ಯರ್ರಿಸ್ವಾಮಿ ಬರೆದಿರುವ 'ಸ್ನೇಹಶೀಲ' ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಸಂಸದೆ ಸುಮಲತಾ ಅವರಿಗೆ ಮಂಡ್ಯದ ಅಭಿಮಾನಿಗಳು ಭಾರಿ ಗಾತ್ರದ ಹಾರಗಳನ್ನು ಹಾಕುವ ಮೂಲಕ ಸನ್ಮಾನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+