Get Updates
Get notified of breaking news, exclusive insights, and must-see stories!

ಮಂಡ್ಯದ 5 ರೂಪಾಯಿ ಡಾಕ್ಟರ್‌ ಶಂಕರೇಗೌಡರಿಗೆ ಖಾಸಗಿ ಸುದ್ದಿವಾಹಿನಿಯ Indian of the Year 2022 ಗೌರವ

ಮಂಡ್ಯ, ಅಕ್ಟೋಬರ್ 13: 5 ರೂಪಾಯಿ ಡಾಕ್ಟರ್‌ ಎಂದು ಪ್ರಖ್ಯಾತರಾಗಿರುವ ಮಂಡ್ಯದ ಡಾ ಶಂಕರೇಗೌಡರಿಗೆ ಬುಧವಾರ ಸಾಮಾಜಿಕ ಬದಲಾವಣೆ ವಿಭಾಗದಲ್ಲಿ CNN-News18 Indian of the Year 2022 ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಡೆಲ್ಲಿಯಲ್ಲಿ ಬುಧವಾರ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಶಂಕರೇಗೌಡರಿಗೆ ಪ್ರಶಸ್ತಿ ನೀಡಿದರು.

ಸಾಮಾಜಿಕ ಬದಲಾವಣೆಯ ವರ್ಗದಲ್ಲಿ ಶಂಕರೇಗೌಡರ ಜೊತೆಗೆ ಮಾನ್ಯತೆ ಪಡೆದ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಪ್ರಯೋಜನಗಳನ್ನು ಒದಗಿಸಲಿಕೊಡಲು ಹಲವು ಬಡ ಸಮುದಾಯಗಳಿಗೆ ಸಹಾಯ ಮಾಡುತ್ತಿರುವ ಸಾಮಾಜಿಕ ಆರೋಗ್ಯ ಕಾರ್ಯಕರ್ತರು (ASHA), ಎರಡನೇ ಕೋವಿಡ್ ಅಲೆಯ ಉತ್ತುಂಗದಲ್ಲಿ ಸಾವಿರಾರು ಜನರ ಭರವಸೆಯ ಸಂಕೇತವಾಗಿದ್ದ ಗುರುಗ್ರಾಮ್ ಮೂಲದ ಎನ್‌ಜಿಒ ಹೇಮಕುಂಟ್ ಫೌಂಡೇಶನ್, 2021 ಮತ್ತು 2016 ರಲ್ಲಿ ಎರಡು ಬಾರಿ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಆಗಿರುವ 13 ವರ್ಷದ ಕಾಶ್ಮೀರದ ತಜಮುಲ್ ಇಸ್ಲಾಂ ಮತ್ತು 28 ವರ್ಷದ ರಾಜು ಕೇಂದ್ರೆ ನಾಮ ನಿರ್ಧೇಶನಗೊಂಡಿದ್ದರು.

ಚರ್ಮರೋಗತಜ್ಞರಾಗಿರುವ ಡಾ. ಶಂಕರೇಗೌಡ ತಮ್ಮ ಬಳಿಗೆ ಬರುವ ರೋಗಿಗಳಿಗೆ ಕೇವಲ 5 ರೂಪಾಯಿ ಚಾರ್ಜ್‌ ಮಾಡುತ್ತಾರೆ. ಜೊತೆಗೆ ಅವರು ರೋಗಿಗಳಿಗೆ ಕೈಗೆಟುಕುವ ದರದ ಔಷಧಿಗಳನ್ನೇ ಬರೆದುಕೊಡಿತ್ತಾರೆ. ಚಿಕಿತ್ಸೆಯಲ್ಲಿ ಶೇ. 100 ರಷ್ಟು ಯಶಸ್ಸಿ ಪ್ರಮಾಣವನ್ನು ಹೊಂದಿದ್ದಾರೆ. ಇವರನ್ನು ಕಾಣಲು ಕೇವಲ ಮಂಡ್ಯ ಜಿಲ್ಲೆಯಷ್ಟೇ ಅಲ್ಲದೆ ಕರ್ನಾಟಕ ಹಾಗೂ ಅಕ್ಕಪಕ್ಕದ ರಾಜ್ಯಗಳಿಂದಲೂ ರೋಗಿಗಳು ಆಗಮಿಸುತ್ತಾರೆ.

 5 ರೂಪಾಯಿ ಮೇಲೆ ಏರಿಕೆ ಮಾಡದ ಶಂಕರೇಗೌಡ

5 ರೂಪಾಯಿ ಮೇಲೆ ಏರಿಕೆ ಮಾಡದ ಶಂಕರೇಗೌಡ

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಶಂಕರೇಗೌಡರು, ದೇಶದ ಗ್ರಾಮೀಣ ಭಾಗಗಳಲ್ಲಿ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಯ ಕೊರತೆಯಿರುವ ಬಗ್ಗೆ ವಿವರಿಸಿದರು. "ನಾನು 1982 ರಿಂದಲೂ ವೈದ್ಯನಾಗಿ ಪ್ರಾಕ್ಟೀಸ್ ಮಾಡುತ್ತಿದ್ದೇನೆ, ಕಳೆದ 40 ವರ್ಷಗಳಿಂದಲೂ 5 ರೂಪಾಯಿಗಳನ್ನೇ ಪಡೆಯುತ್ತಿದ್ದೇವೆ. ನಮ್ಮಲ್ಲಿ ಏನೇ ಜ್ಞಾನವಿದೆಯೋ ಅದನ್ನು ಎಲ್ಲರಿಗೂ ಸಮಾನವಾಗಿ ನೀಡಬೇಕೆಂದು. ಇದೇ ಉದ್ದೇಶಕ್ಕಾಗಿ ನಾನು ಪದವಿ ಪಡೆದ ನಂತರ ನನ್ನ ಶಿಕ್ಷಣಕ್ಕೆ ಕಾರಣರಾದ ನನ್ನ ಜನರಿಗೆ ಬಳಸಿಕೊಳ್ಳುವುದಕ್ಕೆ ನಾನು ಹಳ್ಳಿಯಲ್ಲೇ ಪ್ರಾಕ್ಟೀಸ್ ಆರಂಭಿಸಿದೆ" ಎಂದು ಹೇಳಿದರು.

 ಗ್ರಾಮೀಣ ಸೇವೆ ಕಡ್ಡಾಯಕ್ಕೆ ಮನವಿ

ಗ್ರಾಮೀಣ ಸೇವೆ ಕಡ್ಡಾಯಕ್ಕೆ ಮನವಿ

ಮುಂದುವರಿಸಿ, ''ಇತ್ತೀಚಿನ ದಿನಗಳಲ್ಲಿ ವೈದ್ಯರ ಸಂಖ್ಯೆ ಹೆಚ್ಚುತ್ತಿದೆ, ಆದರೆ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಮುಂದುವರಿಯುತ್ತಿದೆ. ಹಾಗಾಗಿ ರಾಜ್ಯ ಸರ್ಕಾರವು ವೈದ್ಯ ಪದವಿ ಪಡೆದವರು ಕನಿಷ್ಠ ಒಂದು ವರ್ಷ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ಕಡ್ಡಾಯಗೊಳಿಸಬೇಕು," ಎಂದು ಅಭಿಪ್ರಾಯಪಟ್ಟರು.

 ಖಾಸಗಿ ಅಪಾಯಿಂಟ್‌ಮೆಂಟ್‌ಗೆ ಅವಕಾಶವಿಲ್ಲ

ಖಾಸಗಿ ಅಪಾಯಿಂಟ್‌ಮೆಂಟ್‌ಗೆ ಅವಕಾಶವಿಲ್ಲ

ಡಾ. ಗೌಡರು ಬೆಳಗ್ಗೆ ತಮ್ಮ ಹಳ್ಳಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ ಮತ್ತು ಮಧ್ಯಾಹ್ನ ಮಂಡ್ಯದಲ್ಲಿರುವ ಅವರ ಕ್ಲಿನಿಕ್‌ನಲ್ಲಿ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಸರಾಸರಿ ದಿನಕ್ಕೆ 200 ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡುತ್ತಾರೆ. ಮೊದಲು ಚಿಕಿತ್ಸೆ ನೀಡಲು ಆರಂಭಿಸಿದಾಗ ದಿನಕ್ಕೆ 10 ರೋಗಿಗಳಿಗೆ ಟ್ರೀಟ್​ಮೆಂಟ್​ ನೀಡುತ್ತಿದ್ದರು.

ನಿಧಾನವಾಗಿ, ಈ ವಿಷಯ ಊರೆಲ್ಲಾ ಹರಡಿತು. ಜನರು ಅವರನ್ನ 'ಮ್ಯಾಜಿಕಲ್ ಹ್ಯಾಂಡ್ಸ್' ಎಂದು ನಂಬಲು ಪ್ರಾರಂಭಿಸಿದರು. ದೊಡ್ಡ ಆಸ್ಪತ್ರೆಗಳಲ್ಲಿ ಗುಣಪಡಿಸಲಾಗದ ಚರ್ಮ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಹೆಸರುವಾಸಿಯಾಗಿರುವುದರಿಂದ ಈಗ ದೇಶಾದ್ಯಂತ ಜನರು ಸಮಾಲೋಚನೆಗಾಗಿ ಅವರನ್ನು ಭೇಟಿ ಮಾಡುತ್ತಾರೆ. ವಿಶೇಷವೆಂದರೆ ಗೌಡರು ಯಾವುದೇ ಖಾಸಗಿ ಅಪಾಯಿಂಟ್‌ಮೆಂಟ್‌ ನೀಡಲ್ಲ, ಅವರಿಂದ ಚಿಕಿತ್ಸೆ ಪಡೆಯಬೇಕೆಂದರೆ ರೋಗಿಗಳು ಸಾಮಾನ್ಯ ಜನರಂತೆ ಮಂಡ್ಯಕ್ಕೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ.

 ವೈದ್ಯನೂ ಹೌದು, ರೈತನೂ ಹೌದು

ವೈದ್ಯನೂ ಹೌದು, ರೈತನೂ ಹೌದು

ಶಿವಳ್ಳಿ ಮೂಲದವರಾದ ಶಂಕರೇಗೌಡ ಕೃಷಿಯಲ್ಲಿಯೂ ಸಕ್ರಿಯರಾಗಿದ್ದಾರೆ. ಅವರು ತಮ್ಮ ಜಮೀನಿನಲ್ಲಿ ಸಸಿಗಳನ್ನು ಕಸಿ ಮಾಡುವುದು, ಬೆಳೆ ಬೆಳೆಸುವುದನ್ನು ಇಷ್ಟಪಡುತ್ತಾರೆ. ಯಶಸ್ವಿ ರೈತನಾಗಿರುವ ಸ್ವಗ್ರಾಮ ಅವರು ಪ್ರತಿವರ್ಷ ತಮ್ಮ ಜಮೀನಿನಲ್ಲಿ ಕಬ್ಬು, ಭತ್ತ ಬೆಳೆಯುತ್ತಾರೆ . ಜನರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಿದ್ದ ಅವರು ಮಂಡ್ಯ ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷರಾಗಿದ್ದರು.

ಇನ್ನು ಶಂಕರೇಗೌಡರ ಪ್ರತಿಫಲಾಪೇಕ್ಷೆಯಿಲ್ಲದ ಸೇವೆಯನ್ನು ಶ್ಲಾಘಿಸಿದ ಕೇಂದ್ರ ಸಚಿವ ಗಡ್ಕರಿ, ಬಡವರಿಗಾಗಿ ಗೌಡರು ಮಾಡುತ್ತಿರುವ ಸೇವೆ ಶ್ರೇಷ್ಠವಾದದ್ದು, ಎಲ್ಲಾ ವೈದ್ಯರು ಈ ದಾರಿಯಲ್ಲೆ ಕೆಲಸ ಮಾಡಬೇಕು. ಇದು ಸಮಾಜಕ್ಕೆ ವಿಶೇಷವಾಗಿ ಬಡವರಿಗೆ ಬಹುದೊಡ್ಡ ವಿಷಯವಾಗಿದೆ ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+