ಮಂಡ್ಯ ಭೀಕರ ದುರಂತ: ದುರಂತದಲ್ಲಿ ಮೃತಪಟ್ಟ 25 ಜನರ ಹೆಸರುಗಳು
Recommended Video

Mandya Bus Incident:ಮಂಡ್ಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ | Oneindia Kannada
ಮಂಡ್ಯ, ನವೆಂಬರ್ 24: ಮಂಡ್ಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತರಾದವರ ಸಂಖ್ಯೆ ಮತ್ತಷ್ಟು ಹೆಚ್ಚುತ್ತಲೇ ಇದೆ.
ಈಗಾಗಲೇ ಸುಮಾರು 22 ಮೃತದೇಹಗಳನ್ನು ಬಸ್ಸಿನಿಂದ ಹೊರತೆಗೆಯಲಾಗಿದೆ. ಬಸ್ಸಿನಲ್ಲಿ ಸುಮಾರು 30 ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದೆ.
ಇಂದು ಮಧ್ಯಾಹ್ನ ಸುಮಾರು 12 ಗಂಟೆಯ ಸುಮಾರಿಗೆ ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿದ್ದ ರಾಜಕುಮಾರ್ ಎಂಬ ಖಾಸಗಿ ಬಸ್ಸೊಂದು ನಾಲೆಗೆ ಉರುಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಈ ಘಟನೆಗೆ ಸಂಬಂಧಿಸಿದ ಕ್ಷಣ ಕ್ಷಣದ ಅಪ್ಡೇಟ್ಸ್ ಅನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.
ದುರಸ್ತಿ ಆಗಿದ್ದ ಬಸ್ ಅನ್ನು ರಸ್ತೆಯಲ್ಲಿ ಓಡಾಡಲು ಅವಕಾಶ ಕೊಟ್ಟ ತಾಲ್ಲೂಕಿನ ಆರ್‌ಟಿಓ ಅಧಿಕಾರಿಯನ್ನು ಅಮಾನತು ಗೊಳಿಸಿ ಸಂಚಾರಿ ಇಲಾಖೆ ಆದೇಶ ಹೊರಡಿಸಿದೆ.
30 ವೈದ್ಯರಿಂದ ಶವಗಳ ಮರಣೋತ್ತರ ಪರೀಕ್ಷೆ. ಪರೀಕ್ಷೆ ಬಳಿಕ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರ.
ಮೃತಪಟ್ಟವರ ಹೆಸರುಗಳು ಇಂತಿವೆ: ಪವಿತ್ರ, ಈರಯ್ಯ, ಕಲ್ಪನ, ಚಂದ್ರು, ದೇವರಾಜ್, ಸಿದ್ದಯ್ಯ, ಚಿಕ್ಕಯ್ಯ, ಪ್ರೀತಿ, ಜಯಲಕ್ಷೀ, ಶಶಿಕಲಾ, ಪಾಪಯ್ಯ, ಸಾವಿತ್ರಮ್ಮ, ಮಂಜುಳಾ, ಅನುಷಾ, ಕಮಲಮ್ಮ, ಸುಮಾ, ಯಶೋಧ, ರತ್ನಮ್ಮ, ಸೌಮ್ಯ, ಪ್ರಶಾಂತ್, ಕೆಂಪಯ್ಯ, ನಿಂಗಮ್ಮ, ರಾಧಾ, ಪ್ರೇಕ್ಷಾ ಹಾಗೂ ಲಿಖಿತ್
ಘಟನೆ ನಡೆದ ಸ್ಥಳದಲ್ಲಿಯೇ ಶವಗಳ ಮರಣೋತ್ತರ ಪರೀಕ್ಷೆಗೆ ನಿರ್ಧಾರ. ಆಸ್ಪತ್ರೆಗೆ ಕೊಂಡೊಯ್ದರೆ ಸ್ಥಳದ ಅಭಾವ ಮತ್ತು ಜನರ ಸೇರುವಿಕೆ ಹೆಚ್ಚಾಗುವ ಆತಂಕ.
ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರೂ ಅಪಘಾತವಾಗುತ್ತಿದ್ದಂತೆಯೇ ಬಸ್ಸಿನಿಂದ ಹಾರಿ ಪರಾರಿಯಾಗಿದ್ದಾರೆ ಎಂದು ಬದುಕುಳಿದ ಬಾಲಕ ಲೋಹಿತ್ ಹೇಳಿದ್ದಾನೆ.
ಇಂದು ನಡೆಯಬೇಕಿದ್ದ ಚಲನಚಿತ್ರ ಪ್ರಶಸ್ತಿ ಸಮಾರಂಭ ಸೇರಿದಂತೆ ಮುಖ್ಯಮಂತ್ರಿಯವರು ಭಾಗವಹಿಸಲಿದ್ದ ಎಲ್ಲಾ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲಾಗಿದೆ.
ಈಗಾಗಲೇ ನಾಲೆಯಿಂದ 22 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೆರಳಲಿದ್ದು, ಈಗಾಗಲೇ ಅವರು ಮಂಡ್ಯದತ್ತ ಪ್ರಯಾಣ ಬೆಳೆಸಿದ್ದಾರೆ.












Click it and Unblock the Notifications