KRS dam water level: ಕೃಷ್ಣರಾಜ ಸಾಗರ ಜಲಾಶಯದ ಒಳಹರಿವು ಹೆಚ್ಚಳ, ಅಂಕಿಅಂಶಗಳ ವಿವರ ತಿಳಿಯಿರಿ

ಮಂಡ್ಯ, ಅಕ್ಟೋಬರ್‌, 04: ಮಂಡ್ಯ, ಮೈಸೂರು ಮತ್ತು ಬೆಂಗಳೂರು ಜಿಲ್ಲೆಗಳ ಜೀವನಾಡಿಯಾದ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಒಂದು ವಾರದ ಹಿಂದೆಯಷ್ಟೇ ನೀರಿನ ಪ್ರಮಾಣ 96 ಅಡಿಗೆ ಇಳಿಕೆಯಾಗಿತ್ತು. ಆದರೆ ಇದೀಗ ಸಾಧಾರಣ ಮಳೆಯಾದ ಹಿನ್ನೆಲೆ ಜಲಾಶಯದಲ್ಲಿ ನೀರಿನ ಪ್ರಮಾಣ 100ರ ಗಡಿ ದಾಟಿದೆ.

ಇದರಿಂದ ಈ ಭಾಗದ ರೈತರ ಮುಖದಲ್ಲಿ ಮತ್ತೆ ಮಂದಹಾಸ ಮೂಡಿದೆ. ಬುಧವಾರ (ಅಕ್ಟೋಬರ್‌ 04) ಕೆಆರ್‌ಎಸ್‌ ಜಲಾಶಯದಲ್ಲಿ 100.36 ಅಡಿಯಷ್ಟು ನೀರು ಸಂಗ್ರಹ ಆಗಿದೆ ಎಂದು ಕೆಆರ್‌ಎಸ್‌ ನೀರಾವರಿ ನಿಗಮದ ಮಾಹಿತಿ ನೀಡಿದೆ.

krs-dam-water-level

ಇನ್ನು ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯವು 124.8 ಅಡಿಯಾಗಿದ್ದು, ಭರ್ತಿಯಾಗಲು 24 ಅಡಿ ಬಾಕಿಯಿದೆ. ಜಲಾಶಯದಲ್ಲಿ ಒಂದು ವಾರದಲ್ಲಿಯೇ 4 ಅಡಿ ನೀರು ಹೆಚ್ಚಳ ಆಗಿದ್ದು, ಒಂದು ತಿಂಗಳ ಬಳಿಕ ಅಂದರೆ ಇಂದು 100ರ ಅಡಿ ದಾಟಿದೆ.

ಈ ಬಾರಿ ರಾಜ್ಯದಲ್ಲಿ ಮುಂಗಾರು ಕೈಕೊಟ್ಟ ಹಿನ್ನೆಲೆ ಬರ ತಾಂಡವವಾಡುತ್ತಿದ್ದು, ಹಾಗೂ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಕೆಆರ್‌ಎಸ್‌ ಜಲಾಶಯದಲ್ಲಿ ಕಳೆದ ಒಂದು ತಿಂಗಳಿಂದ ನೀರಿನ ಪ್ರಯಾಣ ಇಳಿಮುಖ ಆಗುತ್ತಲೇ ಇದೆ. ಸದ್ಯ ಕಳೆದ 5 ದಿನಗಳಿಂದ ಕಾವೇರಿ ಕಣಿವೆಯಲ್ಲಿ ಸಾಧಾರಣ ಮಳೆ ಸುರಿದ ಹಿನ್ನೆಲೆ ಕೆಆಆರ್‌ಎಸ್, ಹೇಮಾವತಿ, ಕಬಿನಿ ಮತ್ತು ಹಾರಂಗಿ ಜಲಾಶಯಗಳ ನೀರಿನ ಮಟ್ಟ ಏರಿಕೆ ಆಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜುಲೈ ತಿಂಗಳಿನಲ್ಲಿ ಭರೀ ಮಳೆಯಾದ ಹಿನ್ನೆಲೆ ಆಗ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ನೀರು 100 ಅಡಿಗಿಂತಲೂ ಹೆಚ್ಚಳವಾಗಿತ್ತು. ಬಳಿಕ ಮುಂಗಾರು ಬೆಳೆಗಳಿಗೆ ಕಾಲುವೆಗಳಿಂದ ನೀರು ಹರಿಸಿದ್ದು ಹಾಗೂ ತಮಿಳುನಾಡಿಗೆ ನೀರು ಹರಿಸಲಾಯಿತು. ಪರಿಣಾಮ ಸೆಪ್ಟೆಂಬರ್‌ನಲ್ಲಿ ಜಲಾಶಯದಲ್ಲಿ ನೀರಿನ ಪ್ರಯಾಣ ಕುಸಿತ ಕಾಣುತ್ತಲೇ ಬಂದಿತು. ಹೀಗೆ ದಿನ ಕಳೆದಂತೆಲ್ಲ ಸೆಪ್ಟೆಂಬರ್‌ ಕೊನೆಗೆ 97 ಅಡಿಗೆ ತಲುಪಿತ್ತು. ಆದರೆ ಇದೀಗ ಏರಿಕೆಯಾಗುತ್ತಾ ಸಾಗಿದ್ದು, ಇಂದು 100 ಅಡಿ ದಾಟಿದೆ.

ಜಲಾಶಯದಲ್ಲಿ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯವು 49.5 ಟಿಎಂಸಿ ಆಗಿದೆ. ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ನೀರಿನ ಪ್ರಯಾಣ ಕೇವಲ 20.96 ಟಿಎಂಸಿ ಇತ್ತು. ಸದ್ಯ 23 ಟಿಎಂಸಿಗೆ ಹೆಚ್ಚಳ ಆಗಿದೆ. ಮತ್ತೊಂದೆಡೆ ಬಳಸಲು ಯೋಗ್ಯವಿರುವ ನೀರಿನ ಪ್ರಮಾಣವು 12 ಟಿಎಂಟಿಯಿಂದ 14.7 ಟಿಎಂಸಿಗೆ ಹೆಚ್ಚಳ ಆಗಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+