KR Pete: ಸೀರೆ, ಕೋಳಿ ವಾಪಸ್ ಎಸೆದು ಬಿಜೆಪಿ ಅಭ್ಯರ್ಥಿ ವಿರುದ್ಧ ಧಿಕ್ಕಾರ ಕೂಗಿದ ಗ್ರಾಮಸ್ಥರು
ಮತದಾರರನ್ನು ಸೆಳೆಯಲು ಕೆಆರ್ ಪೇಟೆ ಬಿಜೆಪಿ ಅಭ್ಯರ್ಥಿ ಕೋಳಿ ಮತ್ತು ಸೀರೆಯನ್ನು ಹಂಚುವ ಮೂಲಕ ಆಮಿಷವೊಡ್ಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವಿರುದ್ಧ ತಿರುಗಿಬಿದ್ದ ಗ್ರಾಮಸ್ಥರು ಕೋಳಿ ಮತ್ತು ಸೀರೆಯನ್ನು ವಾಪಸ್ ನೀಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಆರ್ ಪೇಟೆ ಶಾಸಕ ಹಾಗೂ ಸಚಿವ ನಾರಾಯಣ ಸ್ವಾಮಿ ಬೆಂಬಲಿಗರು ಕ್ಷೇತ್ರದ ಮತದಾರರನ್ನು ಓಲೈಸಲು ಸೀರೆ, ಕೋಳಿಗಳನ್ನು ನೀಡಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಇದನ್ನು ಸ್ವೀಕರಿಸದ ಗ್ರಾಮಸ್ಥರು ಬಿಜೆಪಿ ಬೆಂಬಲಿಗನ ಮನೆ ಮುಂದೆ ಸೀರೆ ಮತ್ತು ಕೋಳಿಗಳನ್ನು ವಾಪಸ್ ಎಸೆದರು. ನಿಮ್ಮ ಭಿಕ್ಷೆ ನಮಗೆ ಬೇಡ ನಾವು ಬಿಜೆಪಿಗೆ ಓಟ್ ಹಾಕಲ್ಲ ಎಂದು ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಗ್ರಾಮಸ್ಥರು ಬಿಜೆಪಿಗೆ ಮತ್ತು ದಲಿತ ವಿರೋಧಿ ನಾರಾಯಣ ಗೌಡಗೆ ಧಿಕ್ಕಾರ ಎಂದು ಕೂಗಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಕೂಡ ನಾರಾಯಣಗೌಡ ಅವರಿಗೆ ಜನರ ಆಕ್ರೋಶದ ಬಿಸಿ ತಟ್ಟಿತ್ತು.
What is happening in KR Pete assembly...#KarnatakaElections #Karnatakaelections2023 pic.twitter.com/7YIPFcsyLa
— Shashi S Singh 🇮🇳 (@Morewithshashi) May 10, 2023
ಗ್ರಾಮಸ್ಥರು ಕಾರನ್ನು ತಡೆದು ನಮ್ಮ ಊರಿನಲ್ಲಿ ಪ್ರಚಾರ ಮಾಡಬೇಡಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಕ್ಷೇತ್ರದಲ್ಲಿ ಬಿಜೆಪಿ ಸಚಿವ ನಾರಾಯಣ ಗೌಡ ವಿರುದ್ಧ ಜನತೆ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications