Yogi Adityanath: ಜೆಡಿಎಸ್‌ ಭದ್ರಕೋಟೆ ಮಂಡ್ಯದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ದರ್ಬಾರ್‌

ಮಂಡ್ಯ, ಏಪ್ರಿಲ್‌, 26: ರಾಜ್ಯ ವಿಧಾನಸಭೆ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಈಗಾಗಲೇ ರಾಜ್ಯಾದ್ಯಂತ ಕಾಂಗ್ರೆಸ್‌, ಬಿಜೆಪಿ ರಾಷ್ಟ್ರೀಯ ನಾಯಕರು ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರವನ್ನು ಆರಂಭಿಸಿದ್ದಾರೆ. ಅದೆ ರೀತಿ ಇಂದು ಜೆಡಿಎಸ್‌ ಭದ್ರಕೋಟೆ ಮಂಡ್ಯ ಜಿಲ್ಲೆಗೆ ಆಗಮಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಚಾರದ ರಣಕಹಳೆಯನ್ನು ಮೊಳಗಿಸಿದ್ದಾರೆ.

ಜೆಡಿಎಸ್ ಭದ್ರಕೋಟೆ ಆಗಿರುವ ಮಂಡ್ಯದ ಪಿಇಎಸ್ ಹೆಲಿಪ್ಯಾಡ್‌ಗೆ ಆಗಮಿಸಿದ ಯೋಗಿ ಆದಿತ್ಯನಾಥ್‌ ಸಂಜಯ್ ವೃತ್ತದಿಂದ ರೋಡ್ ಶೋ ಆರಂಭಿಸಿದರು. ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದರು. ಅವರಿಗೆ ಸಚಿವ ಅಶ್ವತ್ಥ್‌ ನಾರಾಯಣ್, ಸಂಸದ ಪ್ರತಾಪ್ ಸಿಂಹ ಹಾಗೂ ಸಂಸದೆ ಸುಮಲತಾ ಸಾಥ್‌ ನೀಡಿದರು.

Karnataka election 2023: Yogi Adityanath campaign for BJP candidate in Mandya

ಯೋಗಿ ಆಗಮಿಸುತ್ತಿದ್ದಂತೆಯೇ ಅಲ್ಲಿನ ಕಾರ್ಯಕರ್ತರು ಹಾಗೂ ಜನರು ಅವರ ಪರ ಜಯಘೋಷವನ್ನು ಮೊಳಗಿದ್ದರು. ಹಾಗೂ ವಿವಿಧ ಕಲಾತಂಡಗಳು, ಪೂರ್ಣಕುಂಭದ ಮೂಲಕ ಯೋಗಿ ಅವರನ್ನು ಸ್ವಾಗತ ಕೋರಲಾಯಿತು. ಇದೇ ವೇಳೆ ಕಿಕ್ಕಿರಿದು ನೆರೆದಿದ್ದ ಜನರು ಹಾಗೂ ಕಾರ್ಯಕರ್ತರಿಂದ ಯೋಗಿ ಅದಿತ್ಯನಾಥ್‌ ಅವರ ಮೇಲೆ ಪುಷ್ಪಮಳೆಯನ್ನೇ ಹರಿಸಿದರು.

ಸಂಜಯ್ ವೃತ್ತದಿಂದ ರೋಡ್‌ ಶೋ ಆರಂಭಿಸಿದ ಅವರು, ತೆರದ ವಾಹನದಲ್ಲಿ ನಿಂತು ಜನರತ್ತ ಕೈ ಬೀಸಿದರು. ರೋಡ್ ಶೋ ಮಹಾವೀರ ವೃತ್ತದವರೆಗೆ ಸುಮಾರು 800 ಮೀಟರ್‌ವರೆಗೂ ಸಾಗಿ ಕೊನೆಗೊಂಡಿತು. ನಂತರ ವೇದಿಕೆ ಕಾರ್ಯಕ್ರಕ್ಕೆ ಆಗಮಿಸಿದ ಯೋಗಿ ಕನ್ನಡದಲ್ಲೇ ಭಾಷಣ ಆರಂಭಿಸಿ ಗಮನ ಸೆಳೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+