ಮಂಡ್ಯ: ಪ್ರವಾಹ ನಿರ್ವಹಣೆ ಕುರಿತ ಸಭೆಗೆ ಸುಮಲತಾ ಗೈರು,ಜೆಡಿಎಸ್‌ ಶಾಸಕರ ಆಕ್ರೋಶ

ಶ್ರೀರಂಗಪಟ್ಟಣ, ಜುಲೈ 8 : ಕನ್ನಂಬಾಡಿ ಅಣೆಕಟ್ಟೆ ಸುರಕ್ಷಿತವಾಗಿದೆ ಮತ್ತು ಭದ್ರವಾಗಿದೆ. ನಮ್ಮ ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಕೆಲವರು ಡ್ಯಾಂ ಬಗ್ಗೆ ಸಾಕಷ್ಟು ಆತಂಕ ಸೃಷ್ಠಿಸಿದ್ದರು. ಡ್ಯಾಂನಲ್ಲಿ ಬಿರುಕು ಬಿಟ್ಟಿದೆ ಸಿಕ್ಕಾಪಟ್ಟೆ ನೀರು ಸೋರಿಕೆಯಾಗುತ್ತಿದೆ. ಇನ್ನೇನೋ ಡ್ಯಾಂ ಒಡೆದು ಹೋಗುತ್ತೆ ಅಂತೆಲ್ಲಾ ಹೇಳಿದ್ದರು. ಡ್ಯಾಂನಲ್ಲಿ ಯಾವ ಬಿರುಕೂ ಇಲ್ಲ. ಒಡಕು ಬಿಟ್ಟಿಲ್ಲ ರೈತರು ಹೆದರುವ ಅವಶ್ಯಕತೆ ಖಂಡಿತಾ ಇಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಸಂಸದೆ ಸುಮಲತಾ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಮೊಗರಹಳ್ಳಿ ಮಂಟಿ ಬಳಿಯ ಸಮುದಾಯ ಭವನದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ನಡೆದ ಕೆ.ಆರ್.ಎಸ್. ಹಾರಂಗಿ, ಕಬಿನಿ ಮತ್ತು ಚಿಕ್ಕಹೊಳೆ ಜಲಾಶಯಗಳ ನದಿ ಪಾತ್ರದಲ್ಲಿ ಪ್ರವಾಹ ಸಂದರ್ಭದಲ್ಲಿ ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳ ನಿರ್ವಹಣೆ ಕುರಿತ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವರು ಮಾತನಾಡುವಾಗ ಅಳೆದು ತೂಗಿ ಮಾತನಾಡಬೇಕು. ಜನರಿಗೆ, ರೈತರಿಗೆ ಭಯ ಬೀಳಿಸುವ ರೀತಿ ಮಾತನಾಡಬಾರದು. ಇಲ್ಲ ಸಲ್ಲದ ಹೇಳಿಕೆ ನೀಡುವಂತಹವರು ಇವತ್ತಿನ ವಿಚಾರಗೋಷ್ಠಿಗೆ ಬಂದಿಲ್ಲ. ಇಂತಹ ಪ್ರಬುದ್ಧ ಕಾರ್ಯಕ್ರಮಕ್ಕೆ ಅವರು ಗೈರಾಗಿರೋದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

JDS MLAs slams Mandya MP Sumalatha for not attend meeting held in Srirangapatna

ಶಾಸಕ ಸಾ.ರಾ. ಮಹೇಶ್ ಮಾತನಾಡಿ, "ಅದ್ಯಾರೋ ಹೇಳಿದ್ದರು ಕೆ.ಆರ್.ಎಸ್ ಬಿರುಕು ಬಿಟ್ಟಿದೆ ಎಂದು, ಇದರಿಂದ ಆತಂಕಗೊಂಡ ನಾನು ಶಾಸಕ ರವೀಂದ್ರ ಅವರಿಗೆ ಕರೆ ಮಾಡಿ ಏನೋ ಆಗಿಬಿಟ್ಟಿದೆ ಎಂದು ಕೇಳಿದ್ದೆ . ಆದ್ರೆ ಯಾವ ಬಿರುಕೂ ಇಲ್ಲ, ಮತ್ತೊಂದು ಇಲ್ಲ, ಸುಮ್ಮನೆ ಭಯಪಡಿಸಿಬಿಟ್ಟಿದ್ದರು," ಎಂದು ತಮ್ಮದೇ ಧಾಟಿಯಲ್ಲಿ ಸಂಸದೆ ಸುಮಲತಾ ಅವರಿಗೆ ಚಾಟಿ ಬೀಸಿದರು.

ಹೇಮಾವತಿ ಜಲಾಶಯ ಭರ್ತಿ
ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯಲ್ಲಿ ಬೀಳುತ್ತಿರುವ ಅತಿ ಹೆಚ್ಚಿನ ಮಳೆಯಿಂದಾಗಿ ಹೇಮಾವತಿ ಜಲಾಶಯ ಭರ್ತಿಯಾಗುತ್ತಿದ್ದು, ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಯಬಿಡಲಾಗುತ್ತಿರುವುದರಿಂದ, ನದಿ ಪಾತ್ರದ ಜನತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುವ ಸಾಧ್ಯತೆ ಇರುವುದರಿಂದ, ಜಲಾಶಯದಿಂದ ಯಾವುದೇ ಸಮಯದಲ್ಲಾದರೂ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡುವ ಸಾಧ್ಯತೆ ಇರುತ್ತದೆ.

JDS MLAs slams Mandya MP Sumalatha for not attend meeting held in Srirangapatna

ಈ ಹಿನ್ನೆಲೆಯಲ್ಲಿ ಹೇಮಾವತಿ ನದಿ ಪಾತ್ರ, ನದಿ ದಂಡೆ ಮತ್ತು ನದಿಯ ಆಸುಪಾಸಿನಲ್ಲಿ ವಾಸಿಸುವ ಎಲ್ಲಾ ಗ್ರಾಮಸ್ಥರು/ಸ್ಥಳೀಯ ವಾಸಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತಕ್ಷಣವೇ ತೆರಳಲು ಹೇಮಾವತಿ ಯೋಜನಾ ವೃತ್ತದ ಸೂಪರಿಂಟೆಂಡಿಂಗ್ ಇಂಜಿನಿಯರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+