ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಕ್ಕಿ ಹರಿಯುತ್ತಿರುವ ಕಾವೇರಿ: ರಸ್ತೆ ಬದಿಯಲ್ಲೇ ನಡೆದಿದೆ ಶ್ರಾದ್ಧ ಕಾರ್ಯ

|
Google Oneindia Kannada News

ಮಂಡ್ಯ, ಆಗಸ್ಟ್ 13: ಮಳೆಯಿಂದಾಗಿ ಶ್ರೀರಂಗಪಟ್ಟಣದಲ್ಲಿ ಕಾವೇರಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ. ಇದರಿಂದ ಪಟ್ಟಣ ಹಾಗೂ ಆಸುಪಾಸಿನ ನದಿ ತೀರದಲ್ಲಿ ನಡೆಯುತ್ತಿದ್ದ ಶ್ರಾದ್ಧ ಕಾರ್ಯಗಳಿಗೂ ತೊಡಕು ಉಂಟಾಗಿದ್ದು, ಪುರೋಹಿತರು ಬೀದಿ ಬದಿಗಳಲ್ಲಿಯೇ ಅಪರಕರ್ಮಗಳನ್ನು ನಡೆಸುತ್ತಿರುವ ದೃಶ್ಯ ಕಂಡುಬರುತ್ತಿದೆ.

ಹರಿದು ಬಂದ ತುಂಗಭದ್ರೆ ನೀರಿನಲ್ಲಿ ಕೊಚ್ಚಿಹೋದ ಭತ್ತ
ಶ್ರೀರಂಗಪಟ್ಟಣದ ಪ್ರಸಿದ್ಧ ಪಶ್ಚಿಮವಾಹಿನಿ, ಸೋಪಾನ ಕಟ್ಟೆ, ದೊಡ್ಡ ಗೋಸಾಯಿ ಘಾಟ್, ಚಿಕ್ಕ ಗೋಸಾಯಿಘಾಟ್, ಕಾವೇರಿ ಸಂಗಮ ಸೇರಿ ಹಲವೆಡೆ ನಿರಂತರವಾಗಿ ನಡೆಯುತ್ತಿದ್ದ ಶ್ರಾದ್ಧ ಕಾರ್ಯಗಳಿಗೆ ತೊಂದರೆಯಾಗಿದೆ. ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಸೋಪಾನ ಕಟ್ಟೆಗಳು ಜಲಾವೃತವಾಗಿವೆ.

In Shrirangapattana Purohits are doing final rituals in Road

ಕರ್ಮಗಳನ್ನು ನಡೆಸಲು ಪುರೋಹಿತರು ಕೂರಲೂ ಸ್ಥಳ ಇಲ್ಲದಂತಾಗಿದೆ. ಹಾಗಾಗಿ ಪಟ್ಟಣದ ರಸ್ತೆಗಳ ಪಕ್ಕದಲ್ಲಿ, ದೇವಾಲಯಗಳ ಮುಂದೆ ಪಿಂಡ ಪ್ರದಾನಾದಿ ಕಾರ್ಯಗಳು ನಡೆಯುತ್ತಿವೆ. ಬೆಂಗಳೂರು, ಮೈಸೂರು ಮಾತ್ರವಲ್ಲದೆ ಹೊರ ರಾಜ್ಯ, ಹೊರ ದೇಶಗಳಿಂದಲೂ ಜನರು ಇಲ್ಲಿಗೆ ಬರುತ್ತಿದ್ದಾರೆ. ಹಾಗೆ ಬರುವವರನ್ನು ವಾಪಸ್ ಕಳುಹಿಸಬಾರದು ಎಂಬ ಕಾರಣಕ್ಕೆ ಜಾಗ ಸಿಕ್ಕಲ್ಲಿ ಕೈಂಕರ್ಯಗಳನ್ನು ನಡೆಸುತ್ತಿದ್ದೇವೆ ಎನ್ನುತ್ತಾರೆ ಪುರೋಹಿತರು.

ದೇವಾಲಯಗಳ ಜಗಲಿಗಳ ಮೇಲೆ ಪುರೋಹಿತರು ಶ್ರಾದ್ಧ, ಸಪಿಂಡೀಕರಣ, ನಾರಾಯಣ ಬಲಿ, ಪ್ರೇತ ಸಂಸ್ಕಾರ, ತಿಲ ತರ್ಪಣ, 11ನೇ ದಿನದ ತಿಥಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಶ್ರೀರಂಗಪಟ್ಟಣದಲ್ಲಿ 300ಕ್ಕೂ ಹೆಚ್ಚು ಪುರೋಹಿತರಿದ್ದು, ಅಪರ ಕರ್ಮಗಳನ್ನು ನಡೆಸಲು ನದಿ ತೀರಗಳನ್ನೇ ಅವಲಂಬಿಸಿದ್ದಾರೆ. ಅವರ ಹೊಟ್ಟೆಪಾಡಿಗೆ ದಾರಿಯಾಗಿದ್ದ ಕಾವೇರಿ ನದಿ ನೀರು ಈಗ ಅವರಿಗೆ ಕಷ್ಟ ತಂದೊಡ್ಡಿದ್ದಾಳೆ.

English summary
Over flow in Cavery river, Purohits are doing final rituals in Road at Shrirangapattana at Mandya District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X