Mandya: ಬೆಂಗಳೂರು ಗ್ರಾಮಾಂತರದಿಂದ ಸುಮಲತಾ ಅಂಬರೀಷ್ ಸ್ಪರ್ಧಿಸಿದರೆ ಯಶ್, ದರ್ಶನ್ ಬೆಂಬಲಿಸ್ತಾರಾ?
ಮಂಡ್ಯ ಜನವರಿ 31: ಅಂಬಿ.... ಇದೊಂದು ಹೆಸರು ಸಾಕು ಮಂಡ್ಯವನ್ನು ನೆನಪು ಮಾಡೋಕೆ. ಮಂಡ್ಯದ ಗಂಡು... ಎಂದು ಹಾಡಿದರೆ ಮುಂದಿನ ಪಲ್ಲವಿಯನ್ನು ಜನರ ಬಾಯಲ್ಲಿ ಸಲೀಸಾಗಿ ಕೇಳಿಬಿಡಬಹುದು. ಆ ಮಟ್ಟಿಗೆ ಸ್ಯಾಂಡಲ್‌ವುಡ್‌ನ ಹಿರಿಯ ನಟ ಹಾಗೂ ರಾಜಕಾರಣಿ ಅಂಬರೀಷ್ ಅವರ ಹೆಸರು ಜನಜನಿತವಾಗಿದೆ.
ಮಂಡ್ಯ ಅಂತ ಬಂದರೆ ಸಾಕು ಜನ 'ನಮ್ಮ ಅಂಬಿ' ಅನ್ನೋದನ್ನ ಕೇಳಬಹುದು. ಅಂಬರೀಷ್ ಮೇಲಿನ ಅಭಿಮಾನ ಅವರ ಮೇಲಿನ ಪ್ರೀತಿ ಅವರ ಅಭಿಮಾನಿಗಳಲ್ಲಿ ಇಂದಿಗೂ ಕಿಂಚಿತ್ತು ಕಡಿಮೆ ಆಗಿಲ್ಲ. ಚಿತ್ರ ನಟನಾಗಿ, ರಾಜಕಾರಣಿಯಾಗಿ ಜನಮನದಲ್ಲಿ ಅಂಬರೀಷ್ ಈಗಲೂ ಕೂಡ ನಾಯಕರೇ ಆಗಿದ್ದಾರೆ. ಆದರೆ ಅವರ ಅಗಲಿಕೆಗೆ ಮಾತ್ರ ಜನ ಇಂದಿಗೂ ಕೂಡ ಆ ದೇವರನ್ನು ಶಪಿಸುತ್ತಾರೆ.

ಅಮರ ಮಂಡ್ಯದ ಗಂಡು....
ನಟ ಅಂಬರೀಷ್ ಅವರು ನಮ್ಮನ್ನ ಅಗಲಿ ಐದು ವರ್ಷ ಕಳೆದಿವೆ. ಆದರೂ ಅಂಬರೀಷ್ ಅಂದರೆ ಜನರಿಗೆ ಈಗಲೂ ಅಷ್ಟೇ ಪ್ರೀತಿ ಇದೆ. ಹೀಗಾಗಿ ಅಂಬರೀಷ್ ನಿಧನದ ಬಳಿಕ ಜನ ಅವರ ಪತ್ನಿ ಸುಮಲತಾ ಅಂಬರೀಷ್ ಅವರನ್ನು ಅಂಬಿ ಅಣ್ಣನಂತೆ ನೋಡಿಕೊಂಡರು. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿ ಆಗಿ ಮೊದಲ ಬಾರಿಗೆ ಸ್ಪರ್ಧಿಸಿದಾಗ ಸುಮಲತಾ ಅವರಿಗೆ ಅಂಬಿ ಅಣ್ಣನಷ್ಟೇ ಪ್ರೀತಿ ಕೊಟ್ಟು ಬಹುಮತದಿಂದ ಅವರನ್ನು ಗೆಲ್ಲಿಸಿದರು.
ಸೆರಗೊಡ್ಡಿ ಮತಯಾಚಿದ ಸುಮಲತಾ...
ಸುಮಲತಾ ಅವರು ಸೆರಗು ಒಡ್ಡಿ ಮತದಾನದ ಭಿಕ್ಷೆ ಕೇಳಿದಾಗ ಜನ ಇಲ್ಲ ಎನ್ನಲಿಲ್ಲ. ಸುಮಲತಾ ಅವರು ಕಣ್ಣೀರು ಹಾಕಿದಾಗಲೆಲ್ಲ ಇಡೀ ಮಂಡ್ಯದ ಜನ ಅಂಬರೀಷ್ ಅವರನ್ನು ನೆನೆದು ಕಂಬನಿ ಮಿಡಿದಿರೋದಿದೆ. ನಿಮ್ಮೊಂದಿಗೆ ನಾವಿದ್ದೀವಿ ಎಂದು ಸಾಂತ್ವಾನ ಮಾಡಿ ಕೊಟ್ಟ ಮಾತಿನಂತೆ ಮಂಡ್ಯದ ಜನ
ಪ್ರತಿಪಕ್ಷಗಳು ಮಾತಿನ ಚಾಟಿಗೆ ತಿರುಬಾಣವಿಲ್ಲದೆ ಅಂಬರೀಷ್ ಅವರನ್ನು ಕಳೆದುಕೊಂಡ ನೋವಿನಲ್ಲೇ ಶಾಂತವಾಗಿ ಸುಮಲತಾ ಅವರು ಜನಮನಗೆದ್ದರು.
ಅವರ ಬುಧ್ದಿವಂತಿಕೆ, ತಿಳುವಳಿ, ಮಾತಿನ ಪರಿಗೆ ಜನ ಮೂಖವಿಸ್ಮಿತರಾಗಿಬಿಟ್ಟರು. ಮಂಡ್ಯದಲ್ಲಿ ಅಂಬಿ ಅಣ್ಣ ಇದ್ದಾರೆ ಅಂದರೆ ಅದಕ್ಕೆ ಸುಮಲತಾ ಅವರನ್ನು ಗೆಲ್ಲಿಸಬೇಕು ಅನ್ನೋದು ಜನರ ನಿರ್ಧಾರವಾಗಿಬಿಡ್ತು. ಹೀಗಾಗಿ ಸೆರಗೊಡ್ಡಿ ಬಂದ ಸುಮಲತಾ ಅವರನ್ನು ಜನ ಕೈಬಿಡಲಿಲ್ಲ. ತಮ್ಮ ಮನೆ ಮಗಳಂತೆ ಸುಮಲತಾ ಅವರನ್ನು ಬಹುಮತದಿಂದ ಗೆಲ್ಲಿಸಿದರು.
ಜೋಡೆತ್ತುಗಳ ಬೆಂಬಲ:
ಅಷ್ಟೇ ಅಲ್ಲ ಈ ಸದ್ಗಗ್ನ ಪರಿಸ್ಥಿತಿಯಲ್ಲಿ ಸುಮಲತಾ ಅಂಬರೀಷ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಖಿ ಬಾಯ್ ಯಶ್. ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತ್ ನಟರಾದ ದರ್ಶನ್ ಹಾಗೂ ಯಶ್ ಮಂಡ್ಯದ ಜನರೊಂದಿಗೆ ಸುಮಲತಾ ಅಂಬರೀಷ್ ಅವರಿಗೆ ಬೆಂಬಲ ನೀಡಿದ್ದು ಈ ಸಂದರ್ಭದಲ್ಲಿ ಸುಮಲತಾ ಅವರಿಗೆ ಸಾಕಷ್ಟು ಬಲ ನೀಡಿತು.
ಲೋಕಸಭಾ ಚುನಾವಣೆಯುದ್ದಕ್ಕೂ ಸುಮಲತಾ ಅಂಬರೀಷ್ ಅವರಿಗೆ ಜೋಡೆತ್ತುಗಳಾಗಿ ನಟ ಯಶ್ ಹಾಗೂ ದರ್ಶನ್ ನಿಂತುಕೊಂಡರು. ಪ್ರಚಾರದ ವೇಳೆ ಭಾಗವಹಿಸಿ ಜನರಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು. ಅಂಬರೀಷ್ ಅಗಲಿಕೆ ಸಮಯದಲ್ಲಿ ಈ ಒಂದು ವಿಚಾರ ಸುಮಲತಾ ಅವರ ಗೆಲುವಿಗೆ ಪುಷ್ಠಿ ನೀಡಿತು. ಸಂಸದೆಯಾಗಿ ಮಂಡ್ಯ ಜನರ ಸೇವೆಯಲ್ಲಿ ಸುಮಲತಾ ಇಂದಿಗೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಬಿಜೆಪಿಗೆ ಸುಮಲತಾ ಬೆಂಬಲ...
ಆದರೀಗ ಮಂಡ್ಯದ ಈ ಒಂದು ಚಿತ್ರಣ ಬದಲಾಗಿ ಹೋಗಿದೆ ಎನ್ನುವ ಅನುಮಾನ ಶುರುವಾಗಿದೆ. ಯಾಕೆಂದರೆ ಸುಮಲತಾ ಅಂಬರೀಷ್ ಅವರ ಆ ಒಂದು ನಿರ್ಧಾರ. ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ಅವರು ಬಿಜೆಪಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಗಳನ್ನು ಮೆಚ್ಚಿ ತಾವು ಬಿಜೆಪಿಗೆ ಬೆಂಬಲ ನೀಡಿರುವುದಾಗಿ ಅವರೇ ಸ್ವತ: ಮಾದ್ಯಮದ ಮುಂದೆ ಹೇಳಿಕೊಂಡಿದ್ದಾರೆ.

ಇದು ಇಡೀ ಮಂಡ್ಯ ರಾಜಕಾರಣದಲ್ಲೇ ಗೊಂದಲ ಸೃಷ್ಟಿಸಿದೆ. ಯಾಕೆಂದರೆ ಈ ಬಾರಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ಜೆಡಿಎಸ್ ಸದ್ಯ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಸುಮಲತಾ ಅವರು ಮಂಡ್ಯದಲ್ಲಿ ಸ್ಪರ್ಧಿಸಬೇಕು ಅಂತಾದರೆ ಮೈತ್ರಿ ಪಕ್ಷಗಳ ಸಹಮತ ಬೇಕು.
ಎಲ್ಲಿಂದ ಸ್ಪರ್ಧಿಸುವರು ಸುಮಲತಾ?
ಆದರೆ ಮಂಡ್ಯದಲ್ಲಿ ಜೆಡಿಎಸ್ ಪಕ್ಷದಿಂದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನೇ ನಿಲ್ಲಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗೊಂದು ವೇಳೆ ಅವರು ಮಂಡ್ಯದಲ್ಲಿ ಸ್ಪರ್ಧಿಸಿದ್ದೇ ಆದರೆ ಸುಮಲತಾ ಅಂಬರೀಷ್ ಅವರ ಕಥೆ ಏನು ಅನ್ನೋ ಪ್ರಶ್ನೆಗೂ ಬಿಜೆಪಿ ವಲಯದಲ್ಲಿ ಹುಡುಕಾಡಿದರೆ ಉತ್ತರ ಸಿಗುತ್ತದೆ.
ಬಿಜೆಪಿ ಸುಮಲತಾ ಅಂಬರೀಷ್ ಅವರನ್ನು ಬೆಂಗಳೂರು ಗ್ರಾಮಾಂತರದಿಂದ ಗಣಕ್ಕಿಳಿಸಲು ಸಜ್ಜಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬೆಂಗಳೂರು ಗ್ರಾಮಾಂತರದಿಂದ ಸುಮಲತಾ ಸ್ಪರ್ಧಿಸದೇ ಇದ್ದರೆ ಅವರಿಗೆ ಉನ್ನತ ಸ್ಥಾನ ನೀಡಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದೆಲ್ಲದರ ನಡುವೆ ಕಾಂಗ್ರೆಸ್ ಕಡೆಯಿಂದಲೂ ಸುಮಲತಾ ಅವರಿಗೆ ಪಕ್ಷಕ್ಕೆ ಬರಮಾಡಿಕೊಳ್ಳುವ ಆಹ್ವಾನವೂ ಬಂದಿದೆ ಎನ್ನಲಾಗಿದೆ.
ಬೆಂಗಳೂರು ಗ್ರಾಮಾಂತರ ಸುಮಲತಾ ಸ್ಪರ್ಧಿಸಿದರೆ...?
ಒಂದು ವೇಳೆ ಬೆಂಗಳೂರು ಗ್ರಾಮಾಂತರದಿಂದ ಸುಮಲತಾ ಅವರು ಸ್ಪರ್ಧಿಸಲು ಒಪ್ಪಿದ್ದೇ ಆದಲ್ಲಿ ಅವರನ್ನು ಮಂಡ್ಯ ಜನ ಈಗಿನಂತೆ ಪ್ರೀತಿಸುತ್ತಾರಾ? ಅವರನ್ನು ಅಂಬಿಯಷ್ಟೇ ನಂಬುತ್ತಾರಾ? ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಅಷ್ಟೇ ಯಾಕೆ ಅಂದು ಸುಮಲತಾ ಅವರಿಗೆ ಜೋಡೆತ್ತುಗಳಾಗಿದ್ದ ಯಶ್ ಹಾಗೂ ದರ್ಶನ್ ಕೂಡ ಸುಮಲತಾ ಅವರಿಗೆ ಬೆಂಬಲ ನೀಡ್ತಾರಾ ಅನ್ನೋದು ಕೂಡ ಖಚಿತತೆ ಇಲ್ಲ.
ಅಂಬರೀಷ್ ಅವರ ಮೇಲಿನ ಅಭಿಮಾನದಿಂದ ನಟ ದರ್ಶನ್ ತೂಗುದೀಪ್ ಅವರು ಸುಮಲತಾ ಅವರ ಹೆಗಲಿಗೆ ಹೆಗಲಾಗಿದ್ದರು. ಈಗಲೂ ಅವರೊಂದಿಗೆ ದರ್ಶನ ಅವರ ಒಡನಾಟ ಕಡಿಮೆಯಾಗಿಲ್ಲ. ಆದರೆ ರಾಕಿ ಬಾಯ್ ಮಾತ್ರ ಸುಮಲತಾ ಅವರು ಮಂಡ್ಯದಿಂದ ಸ್ಪರ್ಧಿಸಿದರೂ ಬೆಂಬಲ ನೀಡುವುದು ಅನುಮಾನ ಇದೆ.
ಯಾಕೆಂದರೆ ಯಶ್ ವಿಧಾನಸಭೆ ಚುನಾವಣೆಯಲ್ಲೂ ಯಾರ ಪರವಾಗಿ ಪ್ರಚಾರ ಮಾಡಿಲ್ಲ. ಹೀಗಿರುವಾಗ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಶ್ ಅವರು ಸಮಲತಾ ಅವರಿಗೆ ಬೆಂಬಲ ನೀಡಿ ಪ್ರಚಾರದಲ್ಲಿ ಭಾಗಿ ಆಗ್ತಾರಾ ಅನ್ನೋ ಅನುಮಾನ ಶುರುವಾಗಿದೆ. ಒಟ್ಟಿನಲ್ಲಿ ಮಂಡ್ಯ ಲೋಕಸಭೆ ಚುನಾವಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಲೋಕಸಭೆ ಚುನಾವಣೆಗೆ ದಿನಾಂಕ ಇನ್ನೂ ಘೋಷಣೆ ಆಗಬೇಕಿದೆ. ಆದಕ್ಕೂ ಮುನ್ನ ಇಂತೆಲ್ಲಾ ಬೆಳವಣಿಗೆಗಳು ಣಾರೀ ಕುತೂಹಲವನ್ನು ಹುಟ್ಟು ಹಾಕಿವೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications