ಕಾಂಗ್ರೆಸ್ ಬಿಡ್ತೀರಾ ಅಂದಿದ್ದಕ್ಕೆ ಅಂಬರೀಷಣ್ಣ ಏನಂದ್ರು ಗೊತ್ತಾ?

Posted By:
Subscribe to Oneindia Kannada

ಮಂಡ್ಯ, ಏಪ್ರಿಲ್ 15: ಅಂಬರೀಷಣ್ಣ ಕಾಂಗ್ರೆಸ್ ಬಿಡ್ತಾರಂತೆ, ಬಿಟ್ಟರಂತೆ, ಅಶೋಕ್ ಮಾತನಾಡಿಸಿದ್ರಂತೆ, ಇನ್ನೇನು ಸೇರಿಕೊಂಡರಂತೆ...ಹೀಗೆ ಎಲ್ಲ ಅಂತೆ-ಕಂತೆಗಳನ್ನು ನಿವಾಳಿಸುವಂತೆ ಶಾಸಕ-ನಟ ಅಂಬರೀಷ್, 'ನಾನು ಕಾಂಗ್ರೆಸ್ ಬಿಡ್ತೀನಿ ಅನ್ನೋದೆಲ್ಲ ಸುಳ್ಳು ಸುದ್ದಿ" ಎಂದು ತಮ್ಮದೇ ಸ್ಟೈಲ್ ನಲ್ಲಿ ಮಂಡ್ಯದಲ್ಲಿ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದಕ್ಕೆ ಏನೂ ಬ್ಯಾಸರ ಇಲ್ಲ. ಇನ್ನು ಬಿಜೆಪಿಗೆ ಸೇರ್ತೀನಿ ಅನ್ನೊದೆಲ್ಲ ಸುಳ್ಳು ಸುದ್ದಿ. ಏನೋ ಆರೋಗ್ಯದ ಸಮಸ್ಯೆ ಇತ್ತು ಅಂತ ವಿಧಾನಸಭೆ ಉಪ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಲಿಲ್ಲ ಅಷ್ಟೆ. ಇದನ್ನು ತಪ್ಪಾಗಿ ಅರ್ಥ ಮಾಡ್ಕೊಳ್ಳಬಾರದು ಎಂದು ಕೂಡ ಹೇಳಿದ್ದಾರೆ.[ಸುಮಲತಾ ರಾಜಕೀಯ ಅಖಾಡಕ್ಕೆ, ಗುಸುಗುಸು ಪಿಸುಪಿಸು]

I do not quit Congress, says Ambareesh

ಜತೆಗೆ ಕಾಂಗ್ರೆಸ್ ಪಕ್ಷ ನನ್ನ ಕೇಂದ್ರ ಸಚಿವನನ್ನಾಗಿ ಮಾಡಿತ್ತು. ಇಲ್ಲಿ ಕ್ಯಾಬಿನೆಟ್ ಸಚಿವನಾಗಿದ್ದೆ. ಜನರ ಪ್ರೀತಿ ಸಂಪಾದಿಸಿದ್ದೀನಿ. ಇನ್ನೂ ಒಂದು ವರ್ಷ ಇದೆ. ಕಾಂಗ್ರೆಸ್ ನಿಂದ ಅಭಿವೃದ್ಧಿ ಕೆಲಸ ಗಳಾಗುತ್ತವೆ ಎಂದು ಜನರು ಕಾಂಗ್ರೆಸ್ ನ ಗೆಲ್ಲಿಸಿದ್ದಾರೆ ಎಂದು ಅಂಬರೀಷ್ ಹೇಳಿದ್ದಾರೆ.[ಉಪಚುನಾವಣೆ ಬಂದಾಯ್ತು, ಎಲ್ಲಿದ್ದಾರೆ ಅಂಬರೀಶ್, ರಮ್ಯಾ?]

ಅಂಬರೀಷ್ ಅವರು ಇಷ್ಟು ಸಾಫ್ಟ್ ಅಗಿದ್ದಕ್ಕೂ ಉಪಚುನಾವಣೆ ಫಲಿತಾಂಶಕ್ಕೂ ಸಂಬಂಧ ಇರಲೇಬೇಕು. ಹೇಗೂ ಮಂಡ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಳೇಪಟ್ಟು. ಅಂಥದ್ದರಲ್ಲಿ ಬಿಜೆಪಿಗೆ ಹೋಗಿ ಏನು ಉಪಯೋಗ ಅಂತ ಅನ್ನಿಸಿರಬೇಕು. ಅದಕ್ಕೆ ಅಂಬರೀಷಣ್ಣ 'ಎಲ್ಲೂ ಹೋಗಲ್ಲ, ನಾನು ಎಲ್ಲೂ ಹೋಗಲ್ಲ' ಅಂತ ಸಾಂಗ್ ಹಾಡ್ತೈತೆ ಅಂತ ಕಾಂಗ್ರೆಸ್ ನವರೇ ಮಾತನಾಡ್ತಾವರಂತೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
I will not quit Congress, says former minister-actor Ambareesh in Mandya.
Please Wait while comments are loading...