ಪಾಂಡವಪುರದ ಚಿಕ್ಕಾಡೆಯಲ್ಲಿ ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯನ ಕೊಲೆ
ಮಂಡ್ಯ, ಫೆಬ್ರವರಿ 19: ಗ್ರಾಪಂ ಸದಸ್ಯನನ್ನು ಮಚ್ಚು, ಲಾಂಗ್‌ಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಕೊಲೆಗೆ ಹಳೆ ರಾಜಕೀಯ ವೈಷಮ್ಯವೇ ಕಾರಣ ಎನ್ನಲಾಗಿದೆ.
ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯ ತಿಮ್ಮೇಗೌಡ (50) ಹತ್ಯೆಗೀಡಾದವನು. ಇನ್ನು ಈ ಸಂಬಂಧ ನಡೆದ ಪ್ರಕರಣದಲ್ಲಿ ಎಪಿಎಂಸಿ ಸದಸ್ಯ ಸ್ವಾಮಿಗೌಡ, ಗಿರಿ ಗೌಡ ಪುತ್ರ ಗೌತಮ್, ವಿನಾಯಕ, ಮಹೇಶ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಳೇ ವೈಷಮ್ಯದಿಂದ ದೇವೇಗೌಡ, ಯೋಗೇಗೌಡ, ಮದನ್ ಕುಮಾರ್, ಚಂದು ಎಂಬುವರು ಸೋಮವಾರ ರಾತ್ರಿ ಗ್ರಾಮದಲ್ಲಿ ನಡೆಯುತ್ತಿದ್ದ ಗ್ರಾಮದೇವತೆ ದೇವೀರಮ್ಮನ ಹಬ್ಬದ ಸಂದರ್ಭದಲ್ಲಿ ಅದೇ ಗ್ರಾಮದ ತಿಮ್ಮೇಗೌಡ ಅವರನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಾಡೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹತ್ಯೆಯಾದ ತಿಮ್ಮೇಗೌಡ ಅವರ ಸಹೋದರನ ಪುತ್ರಿಯನ್ನು ಮದನ್ ಪ್ರೀತಿಸಿ ವಿವಾಹವಾಗಿದ್ದು, ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದನು ಎನ್ನಲಾಗಿದೆ. ಈ ವಿಚಾರವಾಗಿ ನ್ಯಾಯ ಪಂಚಾಯಿತಿ ನಡೆದು, ಹಣವನ್ನು ನೀಡಿದ್ದರು ಆದರೂ ಇದೇ ವಿಚಾರವಾಗಿ ಇದೆರಡು ಕುಟುಂಬಗಳ ನಡುವೆ ವೈಷಮ್ಯ ಬೆಳೆದು, ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ.











Click it and Unblock the Notifications