'ಮುಂದಿನ ಯಾವುದೇ ಚುನಾವಣೆಗೂ ಸ್ಪರ್ಧಿಸುವುದಿಲ್ಲ' : ಚೆಲುವರಾಯಸ್ವಾಮಿ

ಮಂಡ್ಯ, ಮೇ 27: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಆಘಾತದಿಂದ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರು ಇನ್ನೂ ಹೊರ ಬಂದಿಲ್ಲ.

ಜೆಡಿಎಸ್​ ತೊರೆದು, ಕಾಂಗ್ರೆಸ್​ ಸೇರಿ ನಾಗಮಂಗಲ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಚೆಲುವರಾಯಸ್ವಾಮಿ ಅವರು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರು.

ಜೆಡಿಎಸ್ ನ ಸುರೇಶ್ ಗೌಡ ವಿರುದ್ಧ 47667 ಮತಗಳ ಅಂತರದಿಂದ ಚೆಲುವರಾಯಸ್ವಾಮಿ ಸೋಲು ಅನುಭವಿಸಿದ್ದರು.

Former Minister Cheluvarayaswamy hints at retiring from Election Politics

ಮಂಡ್ಯದ ಕಾಂಗ್ರೆಸ್​ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, ನಾಗಮಂಗಲ ಕ್ಷೇತ್ರದ ಜನಪ್ರತಿನಿಧಿಯಾಗಿರುವ ಅಥವಾ ಕೆಲಸ ಮಾಡುವ ಯೋಗ್ಯತೆ ನನಗಿಲ್ಲ. ನನಗೆ ಮತ ನೀಡಿರುವ, ನೀಡದಿರುವ ಎಲ್ಲಾ ಮತದಾರರಿಗೂ ನಾನು ಕೃತಜ್ಞತೆ ಅರ್ಪಿಸುತ್ತೇನೆ. ಮುಂದೆ ನಡೆಯಲಿರುವ ಸಂಸತ್ ಉಪ ಚುನಾವಣೆಗಾಗಲಿ, ಸಾರ್ವತ್ರಿಕ ಚುನಾವಣೆಗಾಗಲಿ ನಾನು ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದರು.

ಮುಂದಿನ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲು ನಾನು ನಿರ್ಧರಿಸಿದ್ದೇನೆ. ಮಂಡ್ಯ ಲೋಕಸಭೆ ಉಪಚುನಾವಣೆಗೂ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.

ಮೈತ್ರಿ ಸರ್ಕಾರ ಯಾವುದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಮೈತ್ರಿಯಾಗಿದೆಯಷ್ಟೇ. ಇನ್ನು ಕುಮಾರಸ್ವಾಮಿ ಅವರ ಜತೆ ವೈಯಕ್ತಿಕವಾಗಿ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೂ ಇಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+