ಮಂಡ್ಯ; ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರ ಕೊಡುಗೆ ಅಪಾರ
ಮಂಡ್ಯ, ಡಿಸೆಂಬರ್, 27: 20ನೇ ಶತಮಾನದಲ್ಲಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಜನ್ಮ ತಳೆಯದಿದ್ದರೆ ಆಧುನಿಕ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊರತೆಯಾಗುತ್ತಿತ್ತು ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ ಎಂದು ಖ್ಯಾತ ಸಾಹಿತಿ ಡಾ. ರಾಗೌ ಮಂಡ್ಯದಲ್ಲಿ ಹೇಳಿದರು.
ನಗರದ ಕರ್ನಾಟಕ ಸಂಘದ ಆವರಣದಲ್ಲಿ ಆಯೋಜಿಸಿದ್ದ ಕುವೆಂಪು ಜನ್ಮೋತ್ಸವದ ಅಂಗವಾಗಿ ಶ್ರೀ ರಾಮಾಯಣ ದರ್ಶನಂ-ವಿಭಿನ್ನ ಆಯಾಮಗಳು ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, 1930ರಲ್ಲಿ ಕಾನೂನು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಯನ್ನು ಕುವೆಂಪು ಅವರು ಬರೆಯದೇ ಹೋಗಿದ್ದರೆ ಕನ್ನಡ ಸಾಹಿತ್ಯದ ಕಾದಂಬರಿ ಕ್ಷೇತ್ರ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಿರುತ್ತಿರಲಿಲ್ಲ. ಕುವೆಂಪು ಅವರು ಬರೆಯುವ ಕಾಲಕ್ಕೆ ಕಾನೂರು ಸುಬ್ಬಮ್ಮ ಹೆಗ್ಗಡತಿ ಅಷ್ಟೊಂದು ಅಗತ್ಯವಾಗಿತ್ತು. ಹಾಗಾಗಿ ಒಂದು ಯುಗದ ಪಲ್ಲಟಕ್ಕೆ ಕುವೆಂಪು ಕಾರಣರಾದರು ಎಂಬುದನ್ನು ನಾವು ಕಂಡ ಇತಿಹಾಸ ಸ್ಪಷ್ಟಪಡಿಸುತ್ತದೆ ಎಂದು ಹೇಳಿದರು.

ಕುವೆಂಪು ಅವರ ಕೊಡುಗೆ ಅಪಾರವಾಗಿದೆ
ಜಗತ್ತಿನಲ್ಲಿ ಬದುಕಿಗಾಗಿ ಸಾಹಿತ್ಯ ಮತ್ತು ಸಾಹಿತ್ಯಕ್ಕಾಗಿ ಬದುಕು ಎಂಬ ಎರಡು ಮುಖಗಳನ್ನು ಕಾಣಬಹುದು. ಆದರೆ, ಕುವೆಂಪು ಅವರು ಬದುಕಿದಂತೆ ಬರೆದ ಮತ್ತು ಬರೆದಂತೆಯೇ ಬದುಕಿದವರಲ್ಲಿ ಅಗ್ರಗಣ್ಯರಾಗಿ ಕಂಡುಬರುತ್ತಾರೆ. ಶ್ರೀಸಾಮಾನ್ಯ ಎಂಬ ಪದವನ್ನು ಪ್ರಥಮವಾಗಿ ಪ್ರಯೋಗಿಸಿದವರೇ ಕುವೆಂಪು ಆಗಿದ್ದಾರೆ. ಹಾಗಾಗಿ ಅವರಿಗೆ ದೊಡ್ಡ ದೊಡ್ಡ ಕೃತಿಗಳು ಹೇಗೋ, ಸಣ್ಣ ಕೈಪಿಡಿಗಳೂ ಕೂಡ ಅಷ್ಟೇ ಮೌಲಿಕವಾಗಿ ಕಾಣುತ್ತಿದ್ದವು. ಹಾಗಾಗಿ ಅವರು ಸಾಮಾನ್ಯನನ್ನೂ ಮುಖ್ಯವಾಗಿ ಕಂಡ ವ್ಯಕ್ತಿತ್ವ ಹೊಂದಿದ್ದರು ಎಂದು ವಿವರಿಸಿದರು. 70ರ ದಶಕದಿಂದ ಈಚೆಗೆ ನಾವು ದಲಿತ ಪ್ರಜ್ಞೆಯನ್ನು ಕಾಣುತ್ತಾ ಬಂದಿದ್ದೇವೆ. ಆದರೆ, ಕುವೆಂಪು ಅವರ ರಾಮಾಯಣ ದರ್ಶನಂ ಕೃತಿಯಲ್ಲೇ ಶೋಷಿತರ, ಧಮನಿತರ ಬಗೆಗಿನ ಕಾಳಜಿಯನ್ನು ಕಾಣಬಹುದಾಗಿದೆ. ಮತ್ತು ಸಾಮಾನ್ಯರ ದೃಷ್ಟಿಯಲ್ಲಿ ವ್ಯವಸ್ಥೆಯನ್ನು ಆಕ್ರೋಶಿಸುವ ಪಾತ್ರಗಳನ್ನು ಸೃಷ್ಟಿಸಿ ಸಮಾಜವನ್ನು ಎಚ್ಚರಿಸಿದ್ದ ವೈಚಾರಿಕ ಪ್ರಜ್ಞೆ ಕೂಡ ಕುವೆಂಪು ಅವರದ್ದೇ ಆಗಿದೆ ಎಂದರು.
ರಾಮಾಯಣ ದರ್ಶನಂ ಸಾರದ ಬಗ್ಗೆ ವಿವರ
ಇನ್ನು ಒಂದು ಶತಮಾನ ಕಳೆದರೂ ಕೂಡ ರಾಮಾಯಣ ದರ್ಶನಂ ಕೃತಿ ಇನ್ನಷ್ಟು ಹೆಚ್ಚು ಪ್ರಚಲಿತವಾಗುತ್ತಲೇ ಇರುತ್ತದೆ. ಸಾಮಾಜಿಕ ಪ್ರಜ್ಞೆಯಲ್ಲಿ ಅದು ಕಳೆದುಹೋಗುವುದಿಲ್ಲ. ಏಕೆಂದರೆ, ಶ್ರೇಷ್ಠತೆ ಮತ್ತು ಜನಪ್ರಿಯತೆ ಆಗಲು ಯಾವುದು ಮಾನದಂಡ ಎಂಬುದನ್ನು ವಿಶ್ಲೇಷಿಸಬೇಕು. ಬದಲಾದ ಮಾನದಂಡಗಳಲ್ಲಿಯೂ ಬದಲಾಗದ ನೆಲೆಯನ್ನು ಹೊಂದಿರುವುದು ಶ್ರೇಷ್ಠತೆಯಾಗಿದೆ. ಮತ್ತು ಜನಪ್ರಿಯತೆ ಅಂತಲೂ ನಾವು ಬಣ್ಣಿಸಬಹುದು. ಪ್ರಸ್ತುತ ಸಾಹಿತ್ಯ ಓದುವ ವಿದ್ಯಾರ್ಥಿಗಳಲ್ಲಿ ವೈಚಾರಿಕತೆಯ ವೀಕ್ಷಣೆ ಅತ್ಯಂತ ಅಗತ್ಯವಾಗಿದೆ. ಕೇವಲ ಓದು ಎಂಬುದು ಸಾಂದರ್ಭಿಕವಾದರೂ, ಮನೋವೈಜ್ಞಾನಿಕ ದೃಷ್ಟಿಯಲ್ಲಿ ವೈಚಾರಿಕ ಲೇಖಕರ ಲೇಖನಗಳನ್ನು ನಾವು ಪರಿಗಣಿಸಬೇಕಿದೆ ಎಂದು ಪ್ರತಿಪಾದಿಸಿದರು.

ಈ ಸಂದರ್ಭದಲ್ಲಿ ಮೈಸೂರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಡಾ. ವಿಜಯಕುಮಾರಿ ಕರಿಕಲ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ, ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಕೆಂಪಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video












Click it and Unblock the Notifications