ಸಕಾಲಕ್ಕೆ ನೀರು ಸಿಗಲಿಲ್ಲ, ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ

Posted By:
Subscribe to Oneindia Kannada

ಮಂಡ್ಯ, ಸೆ. 11: ಕರ್ನಾಟಕ ಸರ್ಕಾರ ಮತ್ತು ನೀರಾವರಿ ಸಲಹಾ ಸಮಿತಿಯ ಭರವಸೆಯ ಮೇರೆಗೆ ಮಾದೇಗೌಡ ಎಂಬ ರೈತರೊಬ್ಬರು ಕೃಷಿ ಚಟುವಟಿಕೆ ಆರಂಭಿಸಿ ಒಟ್ಟಲು ಹಾಕಿದ್ದರು. ಸಕಾಲಕಕೆ ನೀರು ಕೊಡದಿದ್ದರಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ.

ಕೃಷಿಗಾಗಿ ಸಾಲ ಮಾಡಿಕೊಂಡಿದ್ದ ರೈತ ಮಾದೇಗೌಡ ಅವರು ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಜವರೇಗೌಡನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

Distressed farmer commits suicide in Pandavapura taluk

ಗ್ರಾಮದ ಮಾದೇಗೌಡ (51) ಅವರು ತಮಗಿದ್ದ ಎರಡು ಎಕರೆ ಜಮೀನಿನಲ್ಲಿ ಕಬ್ಬು ಹಾಗೂ ತರಕಾರಿ ಬೆಳೆಯುತ್ತಿದ್ದರು. ಈ ಬಾರಿ ಕೃಷಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಪಾಂಡವುರ ಶಾಖೆಯಲ್ಲಿ 3 ಲಕ್ಷ ಸಾಲ ಪಡೆದಿದ್ದರು. ಅಲ್ಲದೆ ಖಾಸಗಿಯಾಗಿಯೂ 2 ಲಕ್ಷ ಸಾಲ ಪಡೆದಿದ್ದರು.

ನೀರು ಸಿಗುವ ಭರವಸೆಯಿಂದ ಕೃಷಿ ಚಟುವಟಿಕೆ ಆರಂಭಿಸಿ ಒಟ್ಟಲು ಹಾಕಿದ್ದರು. ಕಾವೇರಿ ವಿವಾದ ತಾರಕಕ್ಕೇರಿದ್ದರಿಂಡ ಸಕಾಲಕ್ಕೆ ನೀರು ಸಿಕ್ಕಿರಲಿಲ್ಲ, ಸಾಲದ ಸಮಸ್ಯೆಯಿಂದ ಬಳಲುತ್ತಿದ್ದ ರೈತರು ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಪಾಂಡವಪುರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇನ್ನೊಂದೆಡೆ ಮಂಡ್ಯದ ಕೆಆರ್ ಪೇಟೆ ತಾಲೂಕಿನ ಅರೆಬೊಪ್ಪನಹಳ್ಳಿಯಲ್ಲಿ ರೈತ ಶಿವಲಿಂಗೇಗೌಡ ಅವರು 2 ಎಕರೆಯಲ್ಲಿ ಭತ್ತ ಬೆಳೆಯಲು ಸ
ದ್ಧತೆ ಮಾಡಿಕೊಂಡಿದ್ದರು. ಆದರೆ, ಹೇಮಾವತಿ ನದಿಯಿಂದ ಬೆಳೆಗೆ ನೀರು ಸಿಗದ ಕಾರಣ ಸಾಲಬಾಧೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A farmer allegedly committed suicide at Javaregowdana koppalu village in Pandavapura taluk of Mandya district by consuming poison on Sunday. The police has identified deceased farmer as Madegowda (81).
Please Wait while comments are loading...