ಮಂಡ್ಯ ಬಳಿ ಭೀಕರ ಬಸ್ ಅಪಘಾತ ಪ್ರಕರಣ, ಸದ್ಯ 20 ಮೃತದೇಹ ಹೊರಕ್ಕೆ
ಮಂಡ್ಯ, ನವೆಂಬರ್ 24: ಮಂಡ್ಯದ ವಿಸಿ ನಾಲೆಗೆ ಬಸ್ ಉರುಳಿ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ದುರ್ಘಟನೆ ಇಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಸಂಭವಿಸಿದ್ದು, ಇದುವರೆಗೆ 20 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಘಟನಾ ಸ್ಥಳಕ್ಕೆ ಮೈಸೂರಿನಿಂದ ಬಂದ ಆರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು, ಸುತ್ತ ಮುತ್ತಲ ಗ್ರಾಮಸ್ಥರು ಕಾರ್ಯಚರಣೆ ನಿರ್ವಹಿಸುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ಬಳಿ ಬಸ್ ಉರುಳಿದ್ದು, ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಘಟನೆಯಲ್ಲಿ ಇನ್ನು ಸಾವಿನ ಸಂಖ್ಯೆ ಹೆಚ್ಚಾಗೋ ಸಾಧ್ಯತೆಯಿದ್ದು, ಶವಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications