ಕನಗನಮರಡಿಯಲ್ಲಿ 25ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಬಸ್ಸು ಯಾರಿಗೆ ಸೇರಿದ್ದು?
ಮಂಡ್ಯ, ನವೆಂಬರ್ 24 : ಜಿಲ್ಲೆಯಲ್ಲೇ ದೊಡ್ಡ ದುರಂತಕ್ಕೆ ಸಾಕ್ಷಿಯಾದ ಕನಗನಮರಡಿ ಅಪಘಾತದ ಯಮಸ್ವರೂಪಿ ಬಸ್ ಯಾರಿಗೆ ಸೇರಿದ್ದು ಎಂಬ ಮಾಹಿತಿ ಒನ್ ಇಂಡಿಯಾಗೆ ಲಭ್ಯವಾಗಿದೆ.
ಚಿಕ್ಕಬ್ಯಾಡರಹಳ್ಳಿ-ಕನಗನಮರಡಿ ಮಾರ್ಗವಾಗಿ ತೆರಳುತ್ತಿದ್ದ ರಾಜಕುಮಾರ ಎಂಬ ಹೆಸರಿನ ಈ ಬಸ್ ಸದ್ಯ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಬಸ್ ನ ಮಾಲೀಕರು ಶ್ರೀನಿವಾಸ್. ನಂಬರ್ ಕೆ.ಎ 19- ಎ 5676. 2001ರಲ್ಲಿ ಈ ವಾಹನ ರಿಜಿಸ್ಟ್ರೇಷನ್ ಆಗಿದ್ದು, 17 ವರ್ಷಗಳ ಹಿಂದೆ ಖರೀದಿಸಿದ್ದಾಗಿದೆ.
ಮಂಗಳೂರಿನಲ್ಲಿ ರಿಜಿಸ್ಟ್ರೇಷನ್ ಆಗಿದ್ದರೂ ಈ ಬಸ್, ಮಂಡ್ಯದಲ್ಲಿತ್ತು. ಈ ಬಸ್ ನ ಎಂಜಿನ್ ನಂಬರ್ 697D40DYZ1XXXXX. ಚಾಸಿ ನಂಬರ್ 359241DYZ1XXXXX. ಟಾಟಾ ಕಂಪನಿಯ ಬಸ್ ಇದಾಗಿದ್ದು, ಫಿಟ್ನೆಸ್ ಸರ್ಟಿಫಿಕೇಟ್ 15 ಮೇ 2019ರ ವರೆಗೂ ಇದೆ. ಜೊತೆಗೆ ಇನ್ಷೂರೆನ್ಸ್ ಹಾಗೂ ಟ್ಯಾಕ್ಸ್ ವ್ಯಾಲಿಡಿಟಿಯೂ ಕೂಡ 15 ಮೇ 2019ರವರೆಗೂ ಇದೆ.

ಇದೇ ನವೆಂಬರ್ 30ರ ವರೆಗೆ ಬಸ್ಸಿಗೆ ತೆರಿಗೆಯನ್ನು ಕೂಡ ಕಟ್ಟಲಾಗಿತ್ತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಮಿಸಿದಾಗ ದುರಸ್ತಿಯಲ್ಲಿರುವ ಬಸ್ಗಳಿಗೆ ಓಡಾಡಲು ಪರವಾನಗಿ ನೀಡಿದ ಕಾರಣಕ್ಕೆ ಮಂಡ್ಯ ಜಿಲ್ಲಾ ಆರ್ ಟಿಒ ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ನೀಡಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ.












Click it and Unblock the Notifications