ಮಂಡ್ಯದಲ್ಲಿ ನಿಖಿಲ್‌ಗೆ ಸಿಪಿಐ(ಎಂ) ಬೆಂಬಲ, ಸುಮಲತಾಗೆ ಅಲ್ಲ
ಮಂಡ್ಯ, ಏಪ್ರಿಲ್ 13: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಸಿಪಿಐ(ಎಂ) ಪಕ್ಷವು ಬೆಂಬಲ ಸೂಚಿಸಿದೆ.
ಕನ್ನಡ ಪತ್ರಿಕೆಯೊಂದರಲ್ಲಿ ಸಿಪಿಐ(ಎಂ) ಪಕ್ಷವು ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿದೆ ಎಂದು ತಪ್ಪಾಗಿ ಪ್ರಟಕವಾಗಿದೆ, ಹಾಗಾಗಿ ಇಂದು ಸಿಪಿಐ(ಎಂ) ಸ್ಪಷ್ಟನೆ ನೀಡಿದೆ.

ಸಂವಿಧಾನ ಬದಲಾಯಿಸುವ ಮಾತನ್ನಾಡುವ, ಕೋಮುವಾದಿ, ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಪಕ್ಷದ ಬೆಂಬಲ ಪಡೆದಿರುವ ಸುಮಲತಾ ಅವರಿಗೆ ಸಿಪಿಐ(ಎಂ) ಬೆಂಬಲ ನೀಡುವುದಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದ್ದು, ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದೆ.
ಸುಮಲತಾ ಹಾಗೂ ನಿಖಿಲ್ ನಡುವಿನ ಚುನಾವಣಾ ಯುದ್ಧ ದಿನೇ-ದಿನೇ ಜೋರಾಗುತ್ತಿದೆ. ನಿಖಿಲ್ ಕುಮಾರಸ್ವಾಮಿಗೆ ಈಗಾಗಲೇ ಕಾಂಗ್ರೆಸ್ ಬೆಂಬಲ ನೀಡಿದೆ. ಅವರಿಗೆ ಈಗ ಸಿಪಿಐಎಂ ಬೆಂಬಲ ಸಹ ದೊರೆತಿದೆ. ಸುಮಲತಾ ಅವರಿಗೆ ಬಿಜೆಪಿ ಮತ್ತು ರೈತ ಸಂಘ ಬೆಂಬಲ ನೀಡಿದೆ.












Click it and Unblock the Notifications