• search

ದೇವೇಗೌಡರು ಫಾದರ್ ಆಫ್ ಕರ್ನಾಟಕವಾ? ಮಂಡ್ಯದಲ್ಲಿ ದೂರು ದಾಖಲು

By ಮಂಡ್ಯ ಪ್ರತಿನಿಧಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಎಚ್ ಡಿ ದೇವೇಗೌಡ, Father of Karnataka, ವಿರುದ್ಧ ದೂರು ದಾಖಲು | Oneindia Kannada

    ಮಂಡ್ಯ, ಜುಲೈ 24: ಎಚ್.ಡಿ.ದೇವೇಗೌಡರ ಹೆಸರಿನಲ್ಲಿರುವ ವೆಬ್ ಸೈಟ್ ವಿರುದ್ಧ ನರೇಂದ್ರ ಮೋದಿ ವಿಚಾರ್ ಮಂಚ್ ನ ರಾಜ್ಯ ಕಾರ್ಯದರ್ಶಿ ಸಿ.ಟಿ ಮಂಜುನಾಥ್ ದೂರು ದಾಖಲಿಸಿದ್ದಾರೆ. ಆ ವೆಬ್ ಸೈಟ್ ವಿಳಾಸ http://hddevegowda.in/home.htm ವಿರುದ್ಧ ಇದೀಗ ಕಾನೂನು ಕ್ರಮ ಕೈಗೊಳ್ಳಲು ಸೈಬರ್ ಕ್ರೈಂ ಪೊಲೀಸರಲ್ಲಿ ದೂರು ನೀಡಿದ್ದಾರೆ.

    ಏತಕ್ಕಾಗಿ ದೂರು, ದೂರಿನ ಒಕ್ಕಣೆ ಏನು ಅಂದರೆ, ಕರ್ನಾಟಕ ಜಾತ್ಯತೀತ ಜನತಾ ದಳ ತನ್ನ ವೆಬ್ ಸೈಟ್ ನಲ್ಲಿ ಮಾಜಿ ಪ್ರಧಾನ ಮಂತ್ರಿ ಸನ್ಮಾನ್ಯ ದೇವೇಗೌಡರ ಪ್ರೊಫೈಲ್ ಫೋಟೋದೊಂದಿಗೆ FATHER OUR STATE - FATHER OF KARNATAKA ಎಂದು ಪ್ರಕಟಿಸಿದೆ.

    ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿಯಾದರೆ ಅಭ್ಯಂತರವಿಲ್ಲ: ದೇವೇಗೌಡ

    ಇದು ಕರ್ನಾಟಕವನ್ನು ಆಳಿದ, ಕರ್ನಾಟಕದ ವೈಭವವನ್ನು ಜಗತ್ತಿಗೆ ಸಾರಿದ ಗಂಗರು, ಕದಂಬರು, ರಾಷ್ಟ್ರಕೂಟರು , ಚಾಲುಕ್ಯರು, ಮುತ್ತು- ರತ್ನವನ್ನು ಬೀದಿಯಲ್ಲಿ ಅಳೆದು ಮಾರುತ್ತಿದ್ದ ವಿಜಯನಗರವನ್ನು ಅಳಿದವರಿಗೆ ಮಾಡಿರುವ ಅಪಮಾನವಾಗಿದೆ. ಕರ್ನಾಟಕದ ಏಕೀಕರಣಕ್ಕೆ ಹೋರಾಟ ಮಾಡಿದ ನಮ್ಮ ನಾಡಿನ ಕನ್ನಡ ಕಟ್ಟಾಳುಗಳಿಗೆ ಬಳಿಯುತ್ತಿರುವ ಕಪ್ಪು ಮಸಿಯಾಗಿದೆ. ಸ್ವಾಭಿಮಾನಿ ಕನ್ನಡಿಗರನ್ನು ಕೆರಳಿಸುವ ಸಂದೇಶವಾಗಿದೆ.

    Complaint against website which published HD Deve Gowda as father of the state

    ಸನ್ಮಾನ್ಯ ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಕನ್ನಡಿಗರೆಂಬ ಹೆಮ್ಮೆಯಿದೆ. ಆದರೆ ಈ ರೀತಿಯ ವೆಬ್ ಸೈಟ್ ಬರವಣಿಗೆಯನ್ನು ಗಮನಿಸಿ, ನನ್ನ ಮನಸ್ಸಿಗೆ ಹಾಗೂ ನನ್ನಂತಹ ಸ್ವಾಭಿಮಾನಿ ಕನ್ನಡಿಗರ ಮನಸಿಗೆ ನೋವಾಗಿದೆ.

    Complaint against website which published HD Deve Gowda as father of the state

    ದೇವೇಗೌಡರ ಅಭಿಮಾನಿಗಳಿಗೆ ಅವರು ಅಪ್ಪ ಅಥವಾ ಅಪ್ಪಾಜಿಯಾಗಿರಲಿ. ಅವರ ಕುಟುಂಬಕ್ಕೆ ಅವರು ಅಪ್ಪನಾಗಿರಲಿ. ಕರ್ನಾಟಕಕ್ಕೇ ಫಾದರ್ ಆಗುವುದು ಬೇಡ. ಹಾಗಾಗಿ ಈ ಕೂಡಲೇ ವೆಬ್ ಸೈಟ್ ನಲ್ಲಿ ಪ್ರಕಟವಾಗಿರುವ SRI Devegowda FATHER OUR STATE - FATHER OF KARNATAKA ಎಂಬ ಬರಹವನ್ನು ಈ ಕೂಡಲೇ ತೆಗೆಸಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಮ್ಮಲ್ಲಿ ಈ ದೂರನ್ನು ನೀಡುತ್ತಿದ್ದೇನೆ ಎಂದು ದೂರಿನ ಒಕ್ಕಣೆಯಲ್ಲಿ ಮಂಜುನಾಥ್ ತಿಳಿಸಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Narendra Modi Vichar Manch state president CT Manjunath filed complaint against website, which is in the name of former PM HD Deve Gowda. There Deve Gowda call as Father of state. So, complaint registered in Mandya.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more