Get Updates
Get notified of breaking news, exclusive insights, and must-see stories!

CP Yogeshwar: ಚನ್ನಪಟ್ಟಣ ರಿಸಲ್ಟ್ ಬಗ್ಗೆ ಮಂಡ್ಯ ಮಂದಿ ಸಖತ್ ಬಾಜಿ- ನಿಖಿಲ್ ಪರ ಭರ್ಜರಿ ಬೆಟ್ಟಿಂಗ್!

ಮಂಡ್ಯ ನವೆಂಬರ್ 17: ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪಚುನಾವಣೆ ಭಾರೀ ಸದ್ದು ಮಾಡುತ್ತಿದೆ. ವಿಶೇಷವಾಗಿ ಚನ್ನಪಟ್ಟಣ ಉಪಚುನಾವಣೆಯಂತೂ ರಂಗೇರುತ್ತಲೇ ಇದೆ. ಜಿದ್ದಾಜಿದ್ದಿಗೆ ಕಾರಣವಾದ ಚನ್ನಪಟ್ಟಣ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಅನ್ನೋದು ಬೆಟ್ಟಿಂಗ್ ದಂಧೆಗೆ ಕಾರಣವಾಗಿದೆ. ಚನ್ನಪಟ್ಟಣಕ್ಕಿಂತ ಮಂಡ್ಯ ಮಂದಿಗೆ ರಿಸಲ್ಟ್‌ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಯಾಕೆಂದರೆ ಅಂದು ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದ್ದ ಮಂಡ್ಯ ಮಂದಿ ಈಗ ನಿಖಿಲ್ ಪರ ಬೆಟ್ಟಿಂಗ್ ಕಟ್ಟುತ್ತಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.

ಹೌದು.. ಮಂಡ್ಯ ಮಂದಿಗೆ ಚನ್ನಪಟ್ಟಣ ಉಪಚುನಾವಣೆ ಮೇಲೆ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲು-ಗೆಲುವಿನ ಬಗ್ಗೆ ಮಂಡ್ಯ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ಈ ಹಿಂದೆ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದ್ದ ಮಂಡ್ಯ ಜಿಲ್ಲೆ ಜನ್ರು, ಇದೀಗ ನಿಖಿಲ್ ಪರ ಭರ್ಜರಿ ಬೆಟ್ಟಿಂಗ್ ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ.

Channapatna by-election betting betting in mandya in favor of nikhil kumaraswamy

ಟೀ ಅಂಗಡಿಗಳೇ ಬೆಟ್ಟಿಂಗ್ ಜಾಲ

ಮಂಡ್ಯದಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದ್ದು ಜನ ನಿಖಿಲ್ ಕುಮಾರಸ್ವಾಮಿ ಅವರೇ ಈ ಬಾರಿ ಗೆಲ್ಲುತ್ತಾರೆಂದು ಬಾಜಿ ಕಟ್ಟುತ್ತಿದ್ದಾರೆನ್ನುವ ಮಾಹಿತಿ ಸಿಕ್ಕಿದೆ. ಸಣ್ಣ ಸಣ್ಣ ಟೀ ಅಂಗಡಿಗಳೇ ಬೆಟ್ಟಿಂಗ್ ಜಾಲದ ಸೆಂಟರ್‌ಗಳಾಗಿವೆ. ಬೆಟ್ಟಿಂಗ್‌ ಆಡಲು ನಿತ್ಯವೂ ಅಂಗಡಿಗಳ ಮುಂದೆ ಜನ ಜಮಾಯಿಸುತ್ತಿದ್ದಾರೆ. ಅಲ್ಲಿ ಬಾಜಿ ಕಟ್ಟುವ ಮೂಲಕ ನಿಖಿಲ್‌ಗೆ ಈ ಬಾರಿ ಗೆಲುವು ಖಚಿತ ಎನ್ನುತ್ತಿದ್ದಾರೆ ಮಂಡ್ಯ ಮಂದಿ.

50,000ದಿಂದ 5 ಲಕ್ಷದವರೆಗೆ ಜನ ಬೆಟ್ಟಿಂಗ್

ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರು ಗೆಲುವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಬೆನ್ನಲ್ಲೆ ಬಾಜಿ ಆಟ ಚನ್ನಪಟ್ಟಣದಿಂದ ಮಂಡ್ಯದವರೆಗೂ ವಿಸ್ತಾರವಾಗಿದೆ. ಯಾವಾಗ ಕೈ ಅಭ್ಯರ್ಥಿಯೇ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದರೋ ಆಗ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಜನ ಬಾಜಿ ಕಟ್ಟಲು ನಿಂತಿದ್ದಾರೆ.

ಚನ್ನಪಟ್ಟಣ ಮಾತ್ರವಲ್ಲ ಮಂಡ್ಯದಲ್ಲೂ ಜನ ನಿಖಿಲ್ ಪರ ಬಾಜಿ ಕಟ್ಟುತ್ತಿದ್ದಾರೆನ್ನುವ ಮಾತುಗಳು ಕೇಳಿ ಬಂದಿವೆ. ತೆರೆಮರೆಯ ಈ ಆಟದಲ್ಲಿ ದಿಢೀರ್ ದುಡ್ಡು ಮಾಡಲು ಜನ ಮುಂದಾಗಿದ್ದಾರೆ. 50,000ದಿಂದ 5 ಲಕ್ಷದವರೆಗೆ ಜನ ಬೆಟ್ಟಿಂಗ್ ಆಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದಲ್ಲಾಳಿಗಳಿಗೆ ಭರ್ಜರಿ ಲಾಭ

ಈ ಬೆಟ್ಟಿಂಗ್ ಹಿನ್ನೆಲೆಯಲ್ಲಿ ದಲ್ಲಾಳಿಗಳಿಗೂ ಲಾಭ ಹೆಚ್ಚಾಗಿದೆ. ಸದ್ದಿಲ್ಲದೆ ವ್ಯವಹಾರ ಕುದುರಿಸುತ್ತಿರೋ ಏಜೆಂಟ್‌ಗಳೂ ಅಧಿಕ ಲಾಭ ಗಳಿಸುತ್ತಿದ್ದಾರೆ. ಬೆಟ್‌ ಕಟ್ಟಲು ಮಂಡ್ಯ ಜನರಿಂದಲೇ ಹೆಚ್ಚಿನ ಆಸಕ್ತಿ ಕಂಡು ಬಂದಿದೆ. ಚನ್ನಪಟ್ಟಣ ಉಪಚುನಾವಣೆ ಫಲಿತಾಂಶದ ಬಗ್ಗೆ ಚನ್ನಪಟ್ಟಣದ ಜನರಿಗಿಂತ ಮಂಡ್ಯದಲ್ಲೇ ಹೆಚ್ಚು ಕುತೂಹಲ ಮೂಡಿದೆ. ಇದಕ್ಕೆ ಕಾರಣ ಬೆಟ್ಟಿಂಗ್ ಅನ್ನೋದನ್ನು ಜನ ಗುಟ್ಟಾಗಿ ಮಾತನಾಡಿಕೊಳ್ಳುತ್ತಾರೆ.

ಚನ್ನಪಟ್ಟಣ ಉಪಚುನಾವಣೆ ಮತದಾನ ಪೂರ್ಣಗೊಂಡಿದೆ. ಫಲಿತಾಂಶ ನವೆಂಬರ್ 23ರಂದು ಹೊರಬೀಳಲಿದೆ. ಆದರೆ ಫಲಿತಾಂಶಕ್ಕೂ ಮುನ್ನ ಜನ ಕಾಂಗ್ರೆಸ್‌ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಬಾಜಿ ಕಟ್ಟುತ್ತಿದ್ದಾರೆ. ಚನ್ನಪಟ್ಟಣಕ್ಕಿಂತಲ್ಲೂ ಮಂಡ್ಯದಲ್ಲಿ ಬಾಜಿ ಕಟ್ಟುವುದು ಹೆಚ್ಚಾಗಿದೆ. ಕಳೆದ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದ್ದ ಮಂದಿ ಈ ಬಾರಿ ಅವರ ಪರ ಬೆಟ್ಟಿಂಗ್ ಕಟ್ಟುತ್ತಿದ್ದಾರೆನ್ನುವುದು ಅಚ್ಚರಿ ಮೂಡಿಸಿದೆ.

ಒಟ್ಟಿನಲ್ಲಿ ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ಮಂಡ್ಯದಲ್ಲಿ ಭಾರೀ ಕುತೂಹಲವನ್ನುಂಟು ಮಾಡಿದ್ದು ಕಾಂಗ್ರೆಸ್‌ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇವರಿಬ್ಬರಲ್ಲಿ ಯಾರು ಗೆದ್ದರೆ ಸಮಾಜದಲ್ಲಿ ಒಳಿತಾಗುವುದು ಎನ್ನುವುದಕ್ಕಿಂತ ತಾವು ಯಾರ ಪರ ಬಾಜಿ ಕಟ್ಟಿದ್ದಾರೋ ಆ ಅಭ್ಯರ್ಥಿಯೇ ಗೆಲ್ಲುಬೇಕು ಎನ್ನುವ ಆಸೆಯಲ್ಲಿ ಜನ ಇದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+