ಸಿಟ್ಟಾಗದ ಸದಾನಂದ ಗೌಡರೇ ರಮ್ಯಾಗೆ ಎಂಥ ಪೆಟ್ಟು ಕೊಟ್ಟರು ನೋಡಿ..

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಮೇ 19: ಯಾವಾಗಲೂ ನಗುತ್ತಾ ಮಾತನಾಡುವ, ಅಪರೂಪಕ್ಕೆ ಎಂಬಂತೆ ಸಿಟ್ಟಾಗುವ ಕೇಂದ್ರ ಸಚಿವ ಡಿವಿ ಸದಾನಂದಗೌಡರು ಮಾಜಿ ಸಂಸದೆ-ನಟಿ ರಮ್ಯಾ ಮೇಲೆ ಸಿಟ್ಟಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಯಾರೋ ಬಾಯಿ ಚಪಲಕ್ಕೆ ಮಾತನಾಡ್ತಾರೆ. ಅವರಿಗೆಲ್ಲ ನಾನ್ಯಾಕೆ ಉತ್ತರ ಕೊಡಬೇಕು ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಮ್ಯಾ ಮಾಡಿದ ಟೀಕೆಗೆ ಖಾರವಾಗಿ ಉತ್ತರ ನೀಡಿದ ಅವರು, ರಮ್ಯಾ ಅವರ ಪಕ್ಷದ ದೊಡ್ಡ ನಾಯಕ ರಾಹುಲ್ ಗಾಂಧಿ ಕೂಡ ಇದು ಸೂಟು-ಬೂಟಿನ ಸರಕಾರ ಎಂದರು. ಇತ್ತೀಚಿನ ಚುನಾವಣೆ ಫಲಿತಾಂಶಗಳಲ್ಲಿ ಜನಾದೇಶವೇ ಅಂತಿಮ ಎಂಬುದು ಗೊತ್ತಾಗಿದೆ ಎಂದು ಡಿವಿಎಸ್ ಹೇಳಿದರು.[ರಮ್ಯಾಗೆ ಲಾಲಿಪಪ್ ಕಳಿಸಿದ ಬಿಜೆಪಿ ಕಾರ್ಯಕರ್ತರು]

DV Sadananda Gowda

ಜನಾದೇಶದ ವಿರುದ್ಧ ಮಾತನಾಡುವವರು ತಲೆಹರಟೆಗಾಗಿ ಏನೋ ಮಾತನಾಡುತ್ತಾರೆ. ಇದೆಲ್ಲ ಚಟ ತೀರಿಸಿಕೊಳ್ಳುವವರ ಸಣ್ಣ ಮಾತುಗಳು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಟೀಕಿಸುವವರು ಬೇಕಾದ್ದನ್ನು ಮಾತನಾಡಿಕೊಳ್ಳಲಿ ಎಂದು ಹೇಳಿದರು.[ಮೂರು ವರ್ಷದಲ್ಲಿ ದೇಶವನ್ನು ಹಳ್ಳ ಹಿಡಿಸಿದ ಮೋದಿ -ಕಾಂಗ್ರೆಸ್]

Ramya

ಇನ್ನು ಕುಲಭೂಷಣ್ ಜಾಧವ್ ತೀರ್ಪಿನ ಬಗ್ಗೆ ಮಾತನಾಡಿ, ನಮಗೆ ಸಿಕ್ಕಿರುವುದು ತಾತ್ಕಾಲಿಕ ಜಯ. ಪಾಕಿಸ್ತಾನದ ಆರೋಪದಲ್ಲಿ ಸತ್ಯವಿಲ್ಲ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಈ ತೀರ್ಪಿನ ಮೂಲಕ ಪಾಕ್ ನ ದುಷ್ಕೃತ್ಯಗಳಿಗೆ ಕೊನೆ ಹೇಳಲಾಗುವುದು ಎಂದು ಅವರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Central minister DV Sadananda Gowda angry on former MP Ramya for her crticism against prime minister Narendra Modi. DVS gives statement in Mandya.
Please Wait while comments are loading...