• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂಬಿಗೆ ವಯಸ್ಸಾಯ್ತು, ಮಂಡ್ಯ ಮತಗಟ್ಟೆಯಲ್ಲಿ ಇಂದು ಸಾಬೀತಾಯ್ತು!

|
   Mandya By-elections 2018 : ಅಂಬರೀಷ್ ಮತದಾನ ಮಾಡುವಾಗ ಪೂರ್ತಿ ಕತ್ತಲು | Oneindia Kannada

   ಮಂಡ್ಯ, ನವೆಂಬರ್ 03: 'ಅಂಬಿ ನಿಂಗೆ ವೈಸಾಯ್ತೋ' ಸಿನಿಮಾದಲ್ಲಿ ಇತ್ತೀಗಷ್ಟೆ ನಟಿಸಿರುವ ಅಂಬರೀಶ್‌ಗೆ ನಿಜವಾಗಿಯೂ ವಯಸ್ಸಾಗಿದೆ ಬಿಡಿ. ಅದಕ್ಕೆ ಉದಾಹರಣೆ ಇಂದಿನ ಮತದಾನ.

   ದೀಪಾವಳಿ ವಿಶೇಷ ಪುರವಣಿ

   ಇಂದು ಬೆಳಿಗ್ಗೆಯೇ ಮಂಡ್ಯದಲ್ಲಿ ಮತಹಾಕಲು ಹೋದ ಅಂಬರೀಶ್‌ ಅವರು ಮತಗಟ್ಟೆ ಒಳಗೆ ಕಾಲಿಡುತ್ತಿದ್ದಂತೆ 'ಫುಲ್‌ ಕತ್ಲು-ಕತ್ಲು'. ಏನ್ರಿ ಬೆಳಕಿನ ವ್ಯವಸ್ಥೆನೇ ಸರಿಯಾಗಿ ಮಾಡಿಲ್ವಲ್ಲ ಎಂದು ಗೊಣಗಿಕೊಳ್ಳುತ್ತಲೇ ಮತಯಂತ್ರದ ಬಳಿ ಹೋಗಿದ್ದಾರೆ ಅಂಬಿ.

   ಮಂಡ್ಯ ಚುನಾವಣೆ : ಎಡವಟ್ಟು ಮಾಡಿಕೊಂಡ ಎಲ್.ಆರ್.ಶಿವರಾಮೇಗೌಡ!

   ಮತಯಂತ್ರದ ಬಳಿ ಅಂತೂ ಇನ್ನೂ ಹೆಚ್ಚಿಗೆ ಕತ್ತಲು. 'ಲೇ ಬೆಳಕೇ ಇಲ್ವಲ್ರೋ, ಏನೂ ಕಾಣಿಸ್ತಿಲ್ಲ, ಟಾರ್ಚ್‌ ತಗೋಂಡ್ ಬನ್ರೋ' ಎಂದು ರಗಡ್‌ ಸ್ಟೈಲ್‌ ಅಲ್ಲಿ ಅಂಬಿ ಆವಾಜ್ ಹೊಡೆದಿದ್ದಾರೆ. ತಕ್ಷವೇ ಅವರ ಹಿಂಬಾಲಕರು ಮೊಬೈಲ್ ಟಾರ್ಚ್‌ ಅನ್ನು ಮತಯಂತ್ರದ ಕಡೆ ಹಿಡಿದಿದ್ದಾರೆ ಆಗ ಅಂಬಿ ಅವರು ಗುರಿ ನೋಡಿ ತಮ್ಮಿಷ್ಟದ ಪಕ್ಷಕ್ಕೆ ಮತ ಚಲಾಯಿಸಿ ಹೊರ ಬಂದಿದ್ದಾರೆ.

   ಮಂಡ್ಯದಲ್ಲಿ ಅಂಬರೀಶ್ ಸಾಥ್ ನೀಡದಿದ್ದರೆ ರಾಜಕೀಯ ಕಷ್ಟ ಸ್ವಾಮೀ!

   ಕಾಂಗ್ರೆಸ್‌ ಮತ್ತು ಕುಮಾರಸ್ವಾಮಿ ಬಗ್ಗೆ ಅಂಬರೀಶ್‌ ಹೊಡೆದ್ರು ಖಡಕ್ ಡೈಲಾಗ್‌

   ಮತಗಟ್ಟೆಯಿಂದ ಹೊರಬರುವ ಮುನ್ನಾ 'ಮತಕೇಂದ್ರದಲ್ಲಿ ಸ್ವಲ್ಪ ಬೆಳಕಿನ ವ್ಯವಸ್ಥೆ ಮಾಡಿಸ್ರಿ, ಮತಯಂತ್ರದ ಬಳಿ ಅಂತೂ ಏನೂ ಕಾಣೋದೇ ಇಲ್ಲ' ಎಂದು ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

   English summary
   Ambareesh faces problems in casting the cote from By election 2018 in Mandya. In the vote counter there is very dim light so Ambareesh asks for extra lighting.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X