ಕನಗನಮರಡಿ ಬಸ್ ದುರಂತ: ಚಾಲಕನ ವಿರುದ್ಧ ಎಫ್‌ಐಆರ್‌ ದಾಖಲು

ಮಂಡ್ಯ, ನವೆಂಬರ್ 25: ನಿನ್ನೆ (ನವೆಂಬರ್ 24) ಮಂಡ್ಯ ಜಿಲ್ಲೆ ಕನಗನಮರಡಿಯಲ್ಲಿ ನಡೆದ ಭೀಕರ ಬಸ್ ದುರಂತಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನಿನ್ನೆ ಕನಗನವಾಡಿಯಲ್ಲಿ ಖಾಸಗಿ ಬಸ್‌ ನಾಲೆಗೆ ಉರುಳಿ 30 ಮಂದಿ ಸಾವನ್ನಪ್ಪಿದ ಭೀಕರ ಘಟನೆ ನಡೆದಿತ್ತು. ಘಟನೆಯಲ್ಲಿ ಬಸ್‌ನ ಚಾಲಕ ನಿರ್ವಾಹಕ ಇಬ್ಬರೂ ಹೇಗೋ ತಪ್ಪಿಸಿಕೊಂಡು ಸ್ಥಳದಿಂದ ಪಲಾಯನಗೈದಿದ್ದರು.

ಘಟನೆಗೆ ಬಸ್ ಚಾಲಕನ ನಿರ್ಲಕ್ಷ್ಯತನ, ವೇಗದ ಚಾಲನೆಯೇ ಕಾರಣ ಎಂದು ಆರೋಪಿಸಿ ಕನಗನಮರಡಿಯ ಶಿವಲಿಂಗಯ್ಯ ಎಂಬುವರು ಪಾಂಡವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Bus accident in Mandya: FIR lodged against bus driver

ದೂರಿನ ಅನ್ವಯ ಪೊಲೀಸರು, ಬಸ್ ಚಾಲಕ ಶಿವಣ್ಣ ವಿರುದ್ಧ ಐಪಿಸಿ 279, 337, 304(ಎ) ಸೆಕ್ಷನ್‍ಗಳಡಿ ಹಾಗೂ ಭಾರತೀಯ ವಾಹನ ಕಾಯ್ದೆ 187ಕಲಂಗಳಡಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ನಿನ್ನೆ ಘಟನೆ ನಡೆದಾಗಿನಿಂದಲೂ ಬಸ್ ಚಾಲಕ ಶಿವಣ್ಣ ಅವರು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಶಿವಣ್ಣನಿಗಾಗಿ ಹುಡುಕಾಟ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+