ಸಕ್ಕರೆ ನಾಡಲ್ಲಿ ಅಬ್ಬರಿಸಿದ ಯಶ್, ದರ್ಶನ್: ಟೀಕೆಗಳಿಗೆ ಸುಮಲತಾ ಪ್ರತ್ಯುತ್ತರ
Recommended Video

ಮಂಡ್ಯ, ಮಾರ್ಚ್ 20: ಮಂಡ್ಯ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಪರವಾಗಿ ಇಂದು ಬುಧವಾರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ನಟ ದರ್ಶನ್ ತಮ್ಮ ವಿರುದ್ಧವಾಗಿ ಮಾತನಾಡಿದವರಿಗೆ ತಿರುಗೇಟು ನೀಡಿದ್ದಾರೆ.
ಕಳೆದ ಎರಡು ದಿನದಿಂದ ನಮ್ಮ ಬಗ್ಗೆ ಯಾರು ಯಾರು ಏನೆಲ್ಲಾ ಹೇಳುತ್ತಿದ್ದಾರೆ ಎಂದು ನೋಡುತ್ತಿದ್ದೇನೆ. ಇದಕ್ಕೆ ನಾವು ಏನೂ ಹೇಳಲ್ಲ, ಕೋಪ ಮಾಡಿಕೊಳ್ಳುವುದಿಲ್ಲ. ಅಪ್ಪಾಜಿ ಮೇಲಿನ ಪ್ರೀತಿಗೆ ಇಲ್ಲಿಗೆ ಬಂದಿದ್ದೇವೆ. ಸುಮಲತಾ ಅಮ್ಮನಿಗೆ ನಿಮ್ಮ ಆಶೀರ್ವಾದ ಇರುತ್ತದೆ ಎಂದು ನನಗೆ ಗೊತ್ತು. ನಿಮ್ಮ ಈ ಜೋಶ್ , ಧ್ವನಿ ಮೇ 23 ರವರೆಗೂ ಹೀಗೇ ಇರಲಿ ಎಂದು ಅಭಿಮಾನಿಗಳಿಗೆ ದರ್ಶನ್ ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿದ ನಟ ಯಶ್, ನಾಮಪತ್ರ ಸಲ್ಲಿಸಲು ತಯಾರಿ ನಡೆಸುತ್ತಿದ್ದ ಸುಮಕ್ಕನ ಕಣ್ಣಲ್ಲಿ ನೀರು ಇತ್ತು. ಕೇಳಿದ್ದಕ್ಕೆ ನನ್ನಿಂದ ನಿಮಗೆ ತೊಂದರೆ ಆಗುತ್ತದೆ. ನಿಮ್ಮ ಮನೆ ಮೇಲೆ ಐಟಿ ದಾಳಿ ಮಾಡಿಸುತ್ತೇವೆ ಎಂದು ಹೇಳುತ್ತಾರೆ ಎಂದು ಅತ್ತು ಬಿಟ್ಟರು. ಅದಕ್ಕೆ ನಾನು ಈಗ ಉತ್ತರ ಕೊಡುತ್ತಿದ್ದೇನೆ. ನಾವು ಸುಮಲತಾ ಅಕ್ಕಗೆ ಬೆಂಬಲ ಕೊಟ್ಟು, ಅವರ ಪರ ನಿಂತಿರುವುದನ್ನು ತಪ್ಪು ಅಂತ ಅಂದ್ಕೊಂಡಿಲ್ಲ, ಒಂದು ವೇಳೆ ಇದು ತಪ್ಪು ಅಂದ್ರೆ ನಾವು ಸಾಯೋವರೆಗೂ ನಾವು ಈ ತಪ್ಪನ್ನು ಮಾಡೇ ಮಾಡ್ತೀವಿ. ಇದು ಈ ಲೋಕಸಭಾ ಚುನಾವಣೆಗೆ ನಿಲ್ಲಲ್ಲ. ಜೀವನಪೂರ್ತಿ ನಮ್ಮ ಬೆಂಬಲ ನಿಮಗೆ ಇರುತ್ತದೆ ಎಂದರು.

ನಾವೇನೂ ಪಾಕಿಸ್ತಾನದಿಂದ ಬಂದವರಲ್ಲ. ನಾವು ಸಿನಿಮಾದವರು ಅಂತ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರಂತೆ. ನಾವೂ ಮಂಡ್ಯದ ಕಾಲುವೆ ನೀರು ಕುಡಿದು ಬೆಳೆದು ಬಂದವರು. ಮಂಡ್ಯದ ಮಣ್ಣು ನಮಗೂ ಮೆತ್ತಿಕೊಂಡಿದೆ. ನಾವು ಮಂಡ್ಯದ ಜೊತೆ ನಂಟನ್ನು ಹೊಂದಿದ್ದೇವೆ. ಅಕ್ಕ ನೀವು ಧೈರ್ಯವಾಗಿರಿ, ಇಲ್ಲಿ ಈ ಜನ ಬಂದಿರೋರು ದುಡ್ಡಿಗಾಗಿ ಅಲ್ಲ, ದುಡ್ಡಿಂದ ಅಲ್ಲ ಎಂದು ಯಶ್ ಧೈರ್ಯ ಹೇಳಿದರು.












Click it and Unblock the Notifications