ತಲೆ ಮರೆಸಿಕೊಂಡಿರುವ ಶಾಸಕ ಗಣೇಶ್ ಗೋವಾದಲ್ಲಿದ್ದಾರೆ: ಎಂಬಿ.ಪಾಟೀಲ್‌

Recommended Video

      ತಲೆ ಮರೆಸಿಕೊಂಡಿರುವ ಶಾಸಕ ಗಣೇಶ್ ಗೋವಾದಲ್ಲಿದ್ದಾರೆ..! | Oneindia Kannada

      ಮಂಡ್ಯ, ಫೆಬ್ರವರಿ 04: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿರುವ ಪ್ರಕರಣದ ಆರೋಪಿ ಕಂಪ್ಲಿ ಶಾಸಕ ಗಣೇಶ್ ಗೋವಾದಲ್ಲಿ ಅಡಗಿರುವ ಬಗ್ಗೆ ಮಾಹಿತಿ ದೊರೆತಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

      ಮಂಡ್ಯದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಎಂ.ಬಿ.ಪಾಟೀಲ್ ಅವರು, ಕಾನೂನಿಗಿಂತಲೂ ಯಾರೂ ಸಹ ದೊಡ್ಡವರಲ್ಲಿ ಗಣೇಶ್ ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದರು.

      ರಾಮನಗರದ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಇಂದು ಮಾತುಕತೆ ನಡೆಸಿದ್ದೇನೆ, ಗಣೇಶ್ ಅವರನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸಲು ತಯಾರಿದ್ದಾರೆ, ಅವರ ಮೇಲೆ ಐಪಿಸಿ 307 ದಾಖಲಿಸಲಾಗಿದೆ, ಜಾಮೀನು ಸಿಗುವುದು ಸುಲಭವಲ್ಲ ಎಂದು ಅವರು ಹೇಳಿದರು.

      Accused MLA JN Ganesh is in Goa: MB Patil

      ಮುಂಬೈಗೆ ಹೋಗಿದ್ದ ಅವರು ಅಲ್ಲಿ ಸಿಮ್ ಅನ್ನು ನಿಷ್ಕ್ರಿಯಗೊಳಿಸಿದ್ದಾಗಿ ಮಾಹಿತಿ ಲಭ್ಯವಾಗಿತ್ತು. ಈಗಲೂ ಅವರ ಸಿಮ್ ನಿಷ್ಕ್ರಿಯವಾಗಿಯೇ ಇದೆ ಎಂದು ಪಾಟೀಲ್ ಅವರು ಹೇಳಿದ್ದಾರೆ.

      ಕಂಪ್ಲಿ ಶಾಸಕ ಗಣೇಶ್ ಅವರು ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಮೇಲೆ ಈಗಲ್‌ಟನ್ ರೆಸಾರ್ಟ್‌ನಲ್ಲಿ ಹಲ್ಲೆ ಮಾಡಿದ್ದರು. ಇದೇ ಕಾರಣಕ್ಕೆ ಶಾಸಕ ಗಣೇಶ್ ಅವರನ್ನು ಕಾಂಗ್ರೆಸ್ ಪಕ್ಷದ ಸದಸ್ಯತ್ವ ರದ್ದು ಮಾಡಲಾಯಿತು. ನಂತರ ಅವರು ತಲೆಮರೆಸಿಕೊಂಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+