ಮಂಡ್ಯ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಎಸಿಬಿ ದಾಳಿ
ಜಮೀನು ನೋಂದಾವಣೆ ಹಿನ್ನೆಲೆಯಲ್ಲಿ ರೈತನಿಂದ ಲಂಚ ಕೇಳಿದ ಆರೋಪದಡಿ ಇಬ್ಬರು ಅಧಿಕಾರಿಗಳನ್ನು ಬಂಧಿಸಿರುವ ಎಸಿಬಿ.
ಮಂಡ್ಯ, ಜೂನ್ 3: ರೈತನೊಬ್ಬನ ಬಳಿ ಲಂಚ ಕೇಳಿದ ಆರೋಪದ ಹಿನ್ನೆಲೆಯಲ್ಲಿ ಮಂಡ್ಯ ತಾಲೂಕಿನ ಉಪನೋಂದಾವಣಾಧಿಕಾರಿ ಕಚೇರಿಯ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ (ಎಸಿಬಿ) ಅಧಿಕಾರಿಗಳು ಉಪ ನೋಂದಾವಣಾಧಿಕಾರಿಗಳಾದ ನಾಗರಾಜ್ ಹಾಗೂ ರಾಮಾರಾಧ್ಯ ಎಂಬ ಅಧಿಕಾರಿಗಳನ್ನು ಬಂಧಿಸಿದ್ದಾರೆ.
ಜಮೀನು ನೋಂದಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಈ ಇಬ್ಬರು ಅಧಿಕಾರಿಗಳು ಆನಂದ್ ಎಂಬ ರೈತನಿಂದ ಮೂರು ಸಾವಿರ ರು. ಲಂಚ ಕೇಳಿದ್ದರು.

ಇದರಿಂದ ಬೇಸತ್ತಿದ್ದ ಆತ, ಎಸಿಬಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದ. ಈ ಹಿನ್ನೆಲೆಯಲ್ಲಿ ಉಪನೋಂದಾವಣಾಧಿಕಾರಿ ಕಚೇರಿಗೆ ಆಗಮಿಸಿದ ಎಸಿಬಿ ಅಧಿಕಾರಿಗಳು ಆನಂದ್ ನಿಂದ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿ, ಬಂಧಿಸಿದ್ದಾರೆಂದು ವರದಿಯಾಗಿದೆ.












Click it and Unblock the Notifications