ಮಂಡ್ಯ: ತಾಯಿಯೊಂದಿಗೆ ಅನುಚಿತವಾಗಿ ವರ್ತಿಸಿದವನ ರುಂಡ ಕಡಿದ ಮಗ

ಮಂಡ್ಯ, ಸೆಪ್ಟೆಂಬರ್ 29: ತನ್ನ ತಾಯಿಯೊಡನೆ ಕೆಟ್ಟದಾಗಿ ವರ್ತಿಸಿದವನ ರುಂಡವನ್ನೇ ಕಡಿದ ಮಗ ರುಂಡವನ್ನು ಠಾಣೆಗೆ ಹೊತ್ತಯ್ದು ಶರಣಾದ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಚಿಕ್ಕಬಾಗಿಲು ಗ್ರಾಮದ ಗಿರೀಶ್ (38) ಎಂಬಾತ ಪಶುಪತಿ (28) ಎಂಬಾತನ ತಾಯಿಗೆ ಕೆಟ್ಟದಾಗಿ ಸನ್ನೆ ಮಾಡಿದ್ದಾನೆಂದು ಪಶುಪತಿ ಗಿರೀಶ್‌ನ ತಲೆ ಕಡಿದಿದ್ದಾನೆ.

ಗಿರೀಶನ ರುಂಡ ಕತ್ತರಿಸಿಕೊಂಡು ನೇರವಾಗಿ ಅದನ್ನು ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದು ಪೊಲೀಸರಿಗೆ ಶರಣಾಗಿದ್ದಾನೆ. ತನ್ನ ತಾಯಿಯೊಂದಿಗೆ ಅನುಚಿತವಾಗಿ ವರ್ತಿಸಿದ ಹಾಗಾಗಿ ಕೊಲೆ ಮಾಡಿದೆ ಎಂದು ಪಶುಪತಿ ಹೇಳಿಕೆ ನೀಡಿದ್ದಾನೆ.

A son in Mandya killed a man who misbehave with his mother

ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲೂ ಸಹ ಇಂತಹುದೇ ಘಟನೆ ನಡೆದಿತ್ತು. ಪತಿಯೊಬ್ಬ ತನ್ನ ಮಡದಿಯ ರುಂಡವನ್ನು ಕಡಿದು ಠಾಣೆಗೆ ತಂದಿದ್ದ. ಕೋಲಾರದಲ್ಲೂ ಸಹ ಇಂತಹುದೇ ಘಟನೆ ವರದಿಯಾಗಿತ್ತು.

ಮಳವಳ್ಳಿ ಪೊಲೀಸರು ಪಶುಪತಿ ವಿರುದ್ಧ ಕೇಸು ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+