ತಾಕತ್ತಿದ್ದರೆ ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಿ:ಮಂಡ್ಯದ ವ್ಯಕ್ತಿಯಿಂದ ವಾಟಾಳ್ ಗೆ ಸವಾಲು

Recommended Video

      Pulwama : ಮಂಡ್ಯದ ವ್ಯಕ್ತಿಯಿಂದ ವಾಟಾಳ್ ನಾಗರಾಜ್ ಗೆ ಸವಾಲ್

      ಮಂಡ್ಯ, ಫೆಬ್ರವರಿ 18 : ಕಾಶ್ಮೀರದ ಪುಲ್ವಾಮದಲ್ಲಿ ನಡೆದ ದಾಳಿ ಖಂಡಿಸಿ ಈ ಹಿಂದೆ ಕರೆ ನೀಡಿದ್ದ ಕರ್ನಾಟಕ ಬಂದ್ ಅನ್ನು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಿಂಪಡೆದದ್ದು ಗೊತ್ತಿದೆ.ಇದೇ ಬೆನ್ನಲ್ಲೇ ಮಂಡ್ಯದ ವ್ಯಕ್ತಿಯೋರ್ವ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಬಿಟ್ಟು ವಾಟಾಳ್ ಗೆ ಸವಾಲೆಸೆದಿದ್ದಾರೆ.

      ಮಂಡ್ಯದ ಪೇಟೆ ಬೀದಿ ನಿವಾಸಿ ಅಂಗಪ್ಪ ಎಂಬಾತ ಸಾಮಾಜಿಕ ಜಾಲತಾಣಗಲ್ಲಿ ವೀಡಿಯೋವೊಂದನ್ನು ಹರಿಬಿಟ್ಟಿದ್ದಾನೆ. "ನಿನಗೆ ತಾಕತ್ತಿದ್ದರೆ ಜಮ್ಮು-ಕಾಶ್ಮೀರಕ್ಕೆ ಹೋಗೋಣ ಬಾ. ಅದು ಬಿಟ್ಟು ಕರ್ನಾಟಕ ಬಂದ್ ಏನಕ್ಕೆ ಮಾಡುತ್ತೀಯಾ? ಬಂದ್ ಮಾಡುತ್ತೇನೆ ಎಂದು ಹೋಗುತ್ತಾರೆ. ಬಂದ್ ಮಾಡುವ ಅವಶ್ಯಕತೆ ಇಲ್ಲ. ಏನಕ್ಕೆ ಬಂದ್ ಮಾಡುತ್ತೀರ? ನಾನೇ ನಿಮ್ಮ ಜೊತೆ ಬರುತ್ತೇನೆ ಜಮ್ಮು-ಕಾಶ್ಮೀರಕ್ಕೆ ಹೋಗೋಣ ಬಾ" ಎಂದು ವಾಟಾಳ್ ನಾಗರಾಜ್ ಗೆ ಸವಾಲೆಸಿದಿದ್ದಾರೆ.

      A man from Mandya challenged on Vatal Nagaraj

      "ನಿಮಗೆ ತಾಕತ್ತಿದ್ದರೆ ನಮ್ಮನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಿ. ನಾವು ಭಾರತದ ಹಿಂದೂಗಳಾಗಿದ್ದು, ಪ್ರಾಣ ಕೊಡುವುದಕ್ಕೆ ಸಿದ್ಧರಿದ್ದೇವೆ. ಆದರೆ ನೀವು ಕರ್ನಾಟಕ ಬಂದ್ ಯಾಕೆ ಮಾಡುತ್ತೀರಿ. ವಾಟಾಳ್ ನಾಗರಾಜ್ ಅವರೇ, ಅಂದು ನೀವು ಟೋಪಿ ಹಾಕಿಕೊಂಡು ಕಾರಲ್ಲಿ ಬಂದು ಅಂತಿಮ ದರ್ಶನ ಪಡೆದು ಹೊರಟು ಹೋದ್ರಿ. ನಾವು ಪಾರ್ಥಿವ ಶರೀರದ ಜೊತೆ ನಡೆದುಕೊಂಡು ಹೋಗಿ ಅಂತಿಮ ದರ್ಶನ ಪಡೆದವರು. ಟೋಪಿ ಹಾಕಿಕೊಂಡು ರಾಜಕೀಯ ಮಾಡುತ್ತೀರಿ. ಬಂದ್ ಬೇಡ, ಬೇಕಾದರೆ ಕಾಶ್ಮೀರದವರೆಗೂ ನಡೆದುಕೊಂಡು ಹೋಗೋಣ ಬನ್ನಿ. ನಿಮ್ಮ ಸಂಘಟನೆಯ ಹೋರಾಟಗಾರರನ್ನು ಕರೆತನ್ನಿ ಎಲ್ಲರೂ ಪಾಕಿಸ್ತಾನಕ್ಕೆ ಹೋಗೋಣ. ಅಲ್ಲಿ ಉಗ್ರರ ವಿರುದ್ಧ ಹೋರಾಡೋಣ" ಎಂದು ವೀಡಿಯೋದಲ್ಲಿ ವಾಟಾಳ್ ವಿರುದ್ಧ ತಮ್ಮ ಅಸಮಧಾನ ಹೊರಹಾಕಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+